ಪಂಚಮಸಾಲಿ ಮೀಸಲಾತಿ ಬಗ್ಗೆ ನಾಳೆ ಸಿಎಂ ಜತೆ ಚರ್ಚೆ: ಸಚಿ​ವೆ ಲಕ್ಷ್ಮೀ ಹೆಬ್ಬಾಳಕರ್‌

By Kannadaprabha News  |  First Published Sep 11, 2023, 2:00 AM IST

ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಚನ್ನಮ್ಮ ಎಂದು ಕರೆಯುತ್ತಾರೆ. ಆದರೆ ನಾನು ಚನ್ನಮ್ಮನ ಪಾದದ ಧೂಳಿಗೂ ಸಮನಲ್ಲ. ಆದರೆ ಚನ್ನಮ್ಮನ ಸಮಾಜದಲ್ಲಿ ಜನಿಸಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದ ಹೆಬ್ಬಾಳಕರ್‌ 


ಬೆಳಗಾವಿ(ಸೆ.11): ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರ್ಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭರವಸೆ ನೀಡಿದರು.

ನಿಪ್ಪಾಣಿಯಲ್ಲಿ ಭಾನುವಾರ 2ಎ ಮೀಸಲಾತಿ ಸಂಬಂಧ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಚನ್ನಮ್ಮ ಎಂದು ಕರೆಯುತ್ತಾರೆ. ಆದರೆ ನಾನು ಚನ್ನಮ್ಮನ ಪಾದದ ಧೂಳಿಗೂ ಸಮನಲ್ಲ. ಆದರೆ ಚನ್ನಮ್ಮನ ಸಮಾಜದಲ್ಲಿ ಜನಿಸಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದು ಹೆಬ್ಬಾಳಕರ್‌ ಹೇಳಿದರು.

Tap to resize

Latest Videos

ಪಂಚಮಸಾಲಿ ಸಮಾಜಕ್ಕೆ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ಸಿಗಲಿ: ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಮೀಸಲಾತಿ ಸಂಬಂಧ ಮೊದಲ ಹೋರಾಟದಿಂದ ಈಗ 6ನೇ ಹಂತದ ಹೋರಾಟದವರೆಗೂ ನಾನು ಪಾಲ್ಗೊಂಡಿದ್ದೇನೆ. ಹಾಗಾಗಿ ಈ ವಿಷಯದ ಕುರಿತು ನನಗೆ ಸಂಪೂರ್ಣ ಅರಿವಿದೆ. ನಮ್ಮ ಸಮಾಜಕ್ಕೆ ಮೀಸಲಾತಿ ಏಕೆ ಅಗತ್ಯ ಎನ್ನುವ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದರು.

click me!