ಉಡುಪಿ: ಪೇಜಾವರಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್ ರಾಮಚಂದ್ರ ಭಟ್ ನಿಧನ

By Ravi Janekal  |  First Published Jul 9, 2024, 10:50 PM IST

ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್ ಅಂಗಡಿಮಾರು ರಾಮಚಂದ್ರ ಭಟ್(72) ನಿಧನರಾಗಿದ್ದಾರೆ.


ಉಡುಪಿ (ಜು.9): ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್ ಅಂಗಡಿಮಾರು ರಾಮಚಂದ್ರ ಭಟ್(72) ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ತಾವು ವಾಸ್ತವ್ಯವಿದ್ದ ಉಡುಪಿ ಪೇಜಾವರ ಮಠದ ಅತಿಥಿಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರು ಹಾಗೂ ಅಪಾರ ಶಿಷ್ಯರ ಬಳಗವನ್ನು ಅಗಲಿದ್ದಾರೆ.  ವಿದ್ವಾನ್ ರಾಮಚಂದ್ರ ಭಟ್ಟರ ನಿಧನಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು, ಪೇಜಾವರ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಸ್ವಾಮೀಜಿಗಳು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Tap to resize

Latest Videos

undefined

ಹೃದಯಾಘಾತದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ನಿಧನ 

ಜ್ಯೋತಿಷ್ಯ, ವೇದಾಂತ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ರಾಮಚಂದ್ರ ಭಟ್ಟರು, ಋಗ್ವೇದದ ಪವಮಾನ ಸೂಕ್ತಗಳಿಗೆ ಕನ್ನಡ ವ್ಯಾಖ್ಯಾನ ಬರೆದು ವಿಶ್ವೇಶತೀರ್ಥರ ಮೂಲಕ ಲೋಕಾರ್ಪಣೆಗೊಳಿಸಿದ್ದರು. ಹಲವು ವರ್ಷಗಳ ಕಾಲ ಮುಂಬಯಿ ಅದಮಾರು ಮಠದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಭಟ್ಟರು ಬಳಿಕ ವಿಶ್ವೇಶತೀರ್ಥರ ಪಂಚಮ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣದ ಸಹ ದಿವಾನರಾಗಿಯೂ ಸೇವೆ ಸಲ್ಲಿಸಿದ್ದರು.

ವಿದ್ವಾನ್ ರಾಮಚಂದ್ರ ಭಟ್ಟರ ಅಪೇಕ್ಷೆಯಂತೆಯೇ ಪಾರ್ಥಿವ ಶರೀರವನ್ನು ಮಣಿಪಾಲದ ಕೆಎಂಪಿ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಲಾಗಿದೆ.

click me!