ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಲಹೆ; ಗೂಗಲ್‌ನಲ್ಲಿ Police irtare... ಸರ್ಚ್ ಮಾಡಿ...

Published : Jul 09, 2024, 08:40 PM IST
ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಲಹೆ; ಗೂಗಲ್‌ನಲ್ಲಿ Police irtare... ಸರ್ಚ್ ಮಾಡಿ...

ಸಾರಾಂಶ

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಂದ ದಂಡ ಬೀಳುವುದನ್ನು ತಪ್ಪಿಸಿಕೊಳ್ಳಬೇಕಾ ಹಾಗಾದರೆ ಗೂಗಲ್‌ನಲ್ಲಿ Police irtare... ಎಂದು ಸರ್ಚ್ ಮಾಡಿ...

ಬೆಂಗಳೂರು (ಜು.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ 100 ಮೀಟರ್‌ಗೊಬ್ಬರಂತೆ ಟ್ರಾಫಿಕ್ ಪೊಲೀಸರು ಕಾಣಸಿಗುತ್ತಾರೆ. ಅದರಲ್ಲಿಯೂ ಬೆಂಗಳೂರಿನ ಹೊರ ವಲಯದಿಂದ ನಗರದ ಕೇಂದ್ರ ಭಾಗದತ್ತ ಬರುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಲಹೆ ನೀಡುತ್ತಿದೆ. ನೀವು ಗೂಗಲ್‌ನಲ್ಲಿ Police itrare... ಎಂದು ಸರ್ಚ್ ಮಾಡಿದರೆ, ಯಾವ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಇದ್ದಾರೆ ಎಂಬುದನ್ನು ಗೂಗಲ್ ಹೇಳುತ್ತದೆ ಅಂತೆ...

ಹೌದು, ಗೂಗಲ್ ಮ್ಯಾಪ್ ನಂಬಿಕೊಂಡು ಹೋದವರು ಕೆಲವು ರಾಜ್ಯಗಳಲ್ಲಿ ಹಳ್ಳಕೆ, ನದಿಗೆ ಹಾಗೂ ಸಮುದ್ರಕ್ಕೆ ಕಾರನ್ನು ಹಾರಿಸಿ ಪೇಚಿಗೆ ಸಿಲುಕಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್‌ನಲ್ಲಿ ಲೊಕೇಶನ್ ಹುಡುಕಿಕೊಂಡು ಹೋಗುವವರಿಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೇನು ಗೂಗಲ್ ಲೊಕೇಶನ್ ಮ್ಯಾಪ್‌ಗೂ ಬೆಂಗಳೂರು ಪೊಲೀಸರಿಗೂ, ವಾಹನ ಸವಾರರಿಗೂ ಎತ್ತಿಂದೆತ್ತಣ ಸಂಬಂಧ ಎಂಬ ಪ್ರಶ್ನೆ ಬರುತ್ತಿದೆಯಾ? ಹಾಗಾದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ....

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ; ಡಿಕೆಶಿ ನಿಯೋಗದಿಂದ ಸಿಎಂಗೆ ಪತ್ರ

ಬೆಂಗಳೂರಿನಲ್ಲಿ ವಾಹನ ಸವಾರರು ಗೂಗಲ್ ಮ್ಯಾಪ್‌ನಲ್ಲಿ police irtare... ಎಂದು ಸರ್ಚ್ ಮಾಡಿದರೆ ಹಲವು ಪ್ರಮುಖ ವೃತ್ತಗಳ ಹೆಸರು ಶೋ ಆಗುತ್ತದೆ. ಆಗ ಅಲ್ಲಿ Police irtare nodkond hogi... ಎಂದು ಗೂಗಲ್ ಮ್ಯಾಪ್‌ನಲ್ಲಿ ಸಲಹೆ ನೀಡಲಾಗುತ್ತದೆ. ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ನಿಂತುಕೊಳ್ಳುವ ಸ್ಥಳಗಳನ್ನು ಗುರುತಿಸಲಾಗಿದೆ. ಇದರಿಂದ ಬೆಂಗಳೂರಲ್ಲಿ ಗೂಗಲ್ ಮ್ಯಾಪ್‌ನಲ್ಲಿ ತೋರಿಸುವ ರಸ್ತೆ ಹಾಗೂ ವೃತ್ತಗಳಲ್ಲಿ ಹಾದು ಹೋಗುವ ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕು. ಒಂದು ವೇಳೆ ಹೆಲ್ಮೆಟ್ ಇಲ್ಲದಿದ್ದೆರೆ ಅಥವಾ ಇನ್ಯಾವಿದೋ ಸಂಚಾರಿ ನಿಯಮ ಪಾಲಿಸಲು ಸಾಧ್ಯವಾಗದವರಿಗೆ ಟ್ರಾಫಿಕ್ ಪೊಲಿಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತಿದೆ.

ನೀವು ಗೂಗಲ್‌ನಲ್ಲಿ police irtare... ಎಂದು ಸರ್ಚ್‌ ಮಾಡಿದರೆ, 'ಪೊಲಿಸ್ ಇರ್ತಾರೆ ನೋಡ್ಕೊಂಡ್ ಹೋಗಿ' (Police irtare nodkond hogi), 'ಪೊಲೀಸ್ ಇರ್ತಾರೆ', 'ಪೊಲೀಸ್ ಇರ್ತಾರೆ ಹುಷಾರು' ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗು ಮಗಾ... ಎಂದೆಲ್ಲಾ ಎಚ್ಚರಿಕೆ ಸಂದೇಶಗಳನ್ನು ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಬೆಂಗಳೂರಿನಲ್ಲಿ ಮಾವಳ್ಳಿ ಹನುಂತಯ್ಯ ಸರ್ಕಲ್, ಕೂಡ್ಲು ರಾಮ್‌ದೇವ್ ಮೆಡಿಕಲ್ ಸ್ಟೋರ್, ಕನಕಪುರ ರಸ್ತೆಯಲ್ಲಿ ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗಿ ಎಂದು ಲೊಕೇಶನ್ ತೋರಿಸಲಾಗುತ್ತದೆ.

ಕಲ್ಕಿ ಸಿನಿಮಾ ನಟಿ ದಿಶಾ ಪಟಾನಿ ಗೇಣುದ್ದ ಸೊಂಟದ ಮೇಲೆ 8 ಸಾಲಿನ ಬರಹ; ಇದ್ಯಾವ ಭಾಷೆ ಗೊತ್ತಾ?

ಸಂಚಾರಿ ಪೊಲೀಸರ ಬಗ್ಗೆ ಗೂಗಲ್‌ನಲ್ಲಿ ಎಚ್ಚರಿಕೆ ಸಂದೇಶ ನೀಡುವುದು ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿರದೇ ಮೈಸೂರು, ಚಿಕ್ಕಮಗಳೂರು, ದಾವಣಗೆರೆ, ಹಿರಿಯೂರು,  ಕೊಟ್ಟಿಗೆಹಾರ-ಚಿಕ್ಕಮಗಳೂರು ರಸ್ತೆಯಲ್ಲಿ ಕೂಡ ಗೂಗಲ್ ಮ್ಯಾಪ್‌ನಲ್ಲಿ ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗಿ.... ಎಂದು ಗುರುತಿಸಲಾಗಿದೆ. ಇದರಿಂದ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಮುಂದೆ ಹೋಗುತ್ತಾರೆ. ಇನ್ನು ಕೆಲವರು ಪೊಲೀಸರು ಇರುವ ಸ್ಥಳದಲ್ಲಿ ಹಾದು ಹೋಗದೇ ಬೇರೊಂದು ರಸ್ತೆಯಲ್ಲಿ ಹೋಗಲು ಮುಂದಾಗುತ್ತಾರೆ. ಆದರೆ, ಸಂಚಾರಿ ನಿಯಮ ಪಾಲಿಸದೇ ವಾಹನದಲ್ಲಿ ಸಂಚಾರ ಮಾಡುವುದರಿಂದ ಜೀವಕ್ಕೆ ಅಪಾಯ ಎಂಬುದನ್ನು ತಿಳಿದುಕೊಳ್ಳಬೇಕು. ದಂಡ ತಪ್ಪಿಸಿಕೊಳ್ಳಲು ಹೋಗಿ ತಲೆದಂಡ ಆಗಬಾರದು...

PREV
Read more Articles on
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ