ಉತ್ತರ ಭಾರತ ಪ್ರವಾಸದಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಿರಿಯ ಬಿಜೆಪಿ ಮುಖಂಡ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದರು. ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾಗಿರುವ ಶ್ರೀಗಳು ರಾಮಮಂದಿರ ನಿರ್ಮಾಣ ಕುರಿತ ಹೋರಾಟದಲ್ಲಿ ಅಡ್ವಾಣಿ ಅವರ ಕೊಡುಗೆಗಳನ್ನು ಹಂಚಿಕೊಂಡರು.
ಉಡುಪಿ (ಅ.12) : ಉತ್ತರ ಭಾರತ ಪ್ರವಾಸದಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಿರಿಯ ಬಿಜೆಪಿ ಮುಖಂಡ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದರು. ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾಗಿರುವ ಶ್ರೀಗಳು ರಾಮಮಂದಿರ ನಿರ್ಮಾಣ ಕುರಿತ ಹೋರಾಟದಲ್ಲಿ ಅಡ್ವಾಣಿ ಅವರ ಕೊಡುಗೆಗಳನ್ನು ಹಂಚಿಕೊಂಡರು.
ಬರ್ಸಾನಾದ ಶ್ರೀ ಗೋವಿಂದ ಧಾಮಕ್ಕೆ ಪೇಜಾವರ ಶ್ರೀ ಶಿಲಾನ್ಯಾಸ, ಇಲ್ಲೇ ಹುಟ್ಟಿದ್ದು ರಾಧೆ
ಎಲ್ ಕೆ ಅಡ್ವಾಣಿ(L.K.Advani)ಯವರನ್ನು ಅವರ ನಿವಾಸದಲ್ಲಿ ಸೌಹಾರ್ಧ ಭೇಟಿ ಮಾಡಿದ ಸ್ವಾಮೀಜಿ, ಅಡ್ವಾಣಿಯವರೊಂದಿಗೆ ಉಭಯಕುಶಲೋಪರಿ ನಡೆಸಿ ಅವರಿಗೆ ದೀರ್ಘ ಆಯುರಾರೋಗ್ಯವನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಅಯೋಧ್ಯಾ ರಾಮಜನ್ಮಭೂಮಿ(Ayodhya Ramajanma Bhoomi) ಆಂದೋಲನದಲ್ಲಿ ಅಡ್ವಾಣಿ ಯವರ ಪಾತ್ರವನ್ನು ಶ್ರೀಗಳು ಬಣ್ಣಿಸಿ ಆ ಹೋರಾಟದ ಫಲವಾಗಿ ಇಂದು ಭವ್ಯರಾಮಮಂದಿರ ನಿರ್ಮಾಣಗೊಳ್ಳುವಂತಾಗಿದೆ ಎಂದರು. ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು (Shri Vishweshteerth Shripada)ತಮಗೆ ಯಾವತ್ತೂ ನೀಡಿದ ಸ್ಫೂರ್ತಿಯನ್ನು ಮನಸಾರೆ ಸ್ಮರಿಸಿದರು. ವಿಶ್ವೇಶ ತೀರ್ಥರೊಂದಿಗಿನ ಅಡ್ವಾಣಿಯವರ ನಂಟು ಉಡುಪಿ(Udupi) ಭೇಟಿ ಇತ್ಯಾದಿ ವಿಚಾರಗಳನ್ನು ಚರ್ಚಿಸಿದರು.
ಅಡ್ವಾಣಿಯವರಿಗೆ ಶ್ರೀ ಕೃಷ್ಣನ ಗಂಧ ಪ್ರಸಾದ ಶಾಲು ಸ್ಮರಣಿಕೆ ಫಲಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು. ಅಡ್ವಾಣಿ ಯವರ ಪುತ್ರಿ ಪ್ರತಿಭಾ ಅಡ್ವಾಣಿ(Pratibha advani) ಮತ್ತು ಮನೆ ಮಂದಿ ಶ್ರೀಗಳವರನ್ನು ಬರಮಾಡಿಕೊಂಡರು . ವಯೋಸಹಜ ಅನಾರೋಗ್ಯವಿದ್ದರೂ ಅಡ್ವಾಣಿಯವರು ಮನೆ ಬಾಗಿಲಿನ ತನಕ ಬಂದು ಶ್ರೀಗಳವರನ್ನು ಬೀಳ್ಕೊಟ್ಟರು.
ವಿದ್ವಾನ್ ದೇವಿಪ್ರಸಾದ್ ಭಟ್ವ, ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ ಉಪಸ್ಥಿತರಿದ್ದರು .
ಪೇಜಾವರ ಶ್ರೀ - ಡಾ ಮುರಳಿ ಮನೋಹರ ಜೋಶಿ ಭೇಟಿ:
ನವದೆಹಲಿ ಪ್ರವಾಸದಲ್ಲಿರುವ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಸಂಜೆ ಕೇಂದ್ರದ ಮಾಜಿ ಸಚಿವ ಹಾಗೂ ರಾಮಜನ್ಮಭೂಮಿ ಆಂದೋಲನ , ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗ ಧ್ವಜಾರೋಹಣ ಮೊದಲಾದ ಆಂದೋಲನಗಳ ಪ್ರಮುಖರೂ ಆಗಿದ್ದ ಡಾ ಮುರಳಿ ಮನೋಹರ ಜೋಶಿ(Dr.muruli manohar joshi)ಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಡಾ ಜೋಶಿಯವರೊಂದಿಗೆ ಸುಮಾರು ಅರ್ಧಗಂಟೆಗೂ ಅಧಿಕ ಹೊತ್ತು ಉಭಯಕುಶಲೋಪರಿ ನಡೆಸಿದ ಶ್ರೀಗಳು ಅಯೋಧ್ಯಾ ಆಂದೋಲನದಲ್ಲಿ ಜೋಶಿಯವರ ಭೂಮಿಕೆಯನ್ನು ಪ್ರಶಂಸಿಸಿದರು . ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗಿನ ಆತ್ಮೀಯ ಒಡನಾಟವನ್ನು ಜೋಶಿಯವರೂ ಸ್ಮರಿಸಿಕೊಂಡರು . ಉಡುಪಿ ಶ್ರೀಕೃಷ್ಣನ ಪಂಚಲೋಹದ ಸುಂದರ ವಿಗ್ರಹ ಶಾಲು ಸಹಿತ ಫಲ ಮಂತ್ರಾಕ್ಷತೆಯನ್ನಿತ್ತು ಶ್ರೀಗಳವರು ಡಾ ಜೋಶಿ ಯವರನ್ನು ಅಭಿನಂದಿಸಿ ಆಶೀರ್ವದಿಸಿದರು .
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಉಡುಪಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್(Astro Mohan) ಪ್ರಕಟಿಸಿದ್ದ ಪೋಟೋ ಆಲ್ಬಮ್ ನ್ನು ಶ್ರೀಗಳು ನೀಡಿದ್ದನ್ನು ಸ್ವೀಕರಿಸಿ, ಕಣ್ತುಂಬಿಕೊಂಡು ಭಾವುಕರಾಗಿ ಉಡುಪಿಗೆ ಪರ್ಯಾಯದ ಸಂದರ್ಭ ಭೇಟಿ ನೀಡಿದ ಕ್ಷಣಗಳನ್ನೂ ನೆನಪಿಸಿಕೊಂಡರು .
ಉಡುಪಿ: ದಲಿತ ಬಾಲಕನಿಗೆ ಬಹಿಷ್ಕಾರ: ಪೇಜಾವರ ಶ್ರೀ ಕಳವಳ
ಶ್ರೀ ಗೋವಿಂದ ಧಾಮಕ್ಕೆ ಪೇಜಾವರ ಶ್ರೀ ಶಿಲಾನ್ಯಾಸ:
ಉತ್ತರಪ್ರದೇಶ(Uttara pradesh)ದ ಮಥುರಾ(Mathur) ಸಮೀಪ ಬರ್ಸಾನಾ(Barsana )ದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಗೋವಿಂದ ಧಾಮ ಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಪ್ರೇರಣೆಯಿಂದ ಆ ಪ್ರದೇಶದಲ್ಲಿ ಶ್ರೀ ಮಧ್ವಾಚಾರ್ಯರ ಸಂದೇಶ ಪ್ರಸಾರಕಾರ್ಯದಲ್ಲಿ ನಿರತರಾಗಿರುವ ತಿಜಾರಾದ ಪ್ರೇಮಪೀಠದ ಆಚಾರ್ಯ ಶ್ರೀ ಲಲಿತ್ ಮೋಹನ್ ಅವರ ನೇತೃತ್ವದಲ್ಲಿ ಈ ನೂತನ ಆಶ್ರಮವು ನಿರ್ಮಾಣಗೊಳ್ಳಲಿದೆ.
ಇದೆ ವೇಳೆ ಮಂಗಳವಾರ ನಡೆದ ಉಜ್ಜಯಿನಿ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಮುಖ್ಯ ಅತಿಥಿಯಾಗಿ ವಿವಿಧ ಸಂತರೊಂದಿಗೆ ಭಾಗಿಯಾದರು.