ಬೆಂಗಳೂರು: ಆರ್ಥಿಕ ಹೊರೆ, ಪೀಣ್ಯ ಬಸ್ ನಿಲ್ದಾಣ ಹರಾಜಿಗೆ?

By Kannadaprabha News  |  First Published Jan 16, 2025, 8:44 AM IST

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಾಣವಾಗಿರುವ ಪೀಣ್ಯ ಬಸ್ ನಿಲ್ದಾಣ ಜಾಗದಲ್ಲಿ ಅಂದುಕೊಂಡತೆ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಈ ಜಾಗವನ್ನು ಖಾಸಗಿ ವ್ಯವಹಾರಗಳಿಗೆ ಗುತ್ತಿಗೆ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನಿರ್ಧರಿಸಿದ್ದು, ಹರಾಜು ಹಾಕಲು ಸಿದ್ಧತೆಯನ್ನು ಮಾಡಿಕೊಂಡಿದೆ. 


ಪ್ರಶಾಂತ್ ಕೆಂಗನಹಳ್ಳಿ

ಪೀಣ್ಯ ದಾಸರಹಳ್ಳಿ(ಡಿ.16):  ನಗರದ ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ (ಟರ್ಮಿನಲ್) ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ 2013ರಲ್ಲಿ ಪೀಣ್ಯದ 8.6 ಎಕರೆ ಜಾಗದಲ್ಲಿ 39.28 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಬಸವೇಶ್ವರ ಬಸ್ ನಿಲ್ದಾಣ ಇನ್ನು ಮುಂದೆ ಶಾಪಿಂಗ್ ಕಾಂಪ್ಲೆಕ್ಸ್, ಮದುವೆ ಮಂಟಪ, ಆಸ್ಪತ್ರೆ ಅಥವಾ ಶಿಕ್ಷಣ ಸಂಸ್ಥೆಯಂತಹ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗಲಿದೆ. 

Tap to resize

Latest Videos

ಹೌದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಾಣವಾಗಿರುವ ಪೀಣ್ಯ ಬಸ್ ನಿಲ್ದಾಣ ಜಾಗದಲ್ಲಿ ಅಂದುಕೊಂಡತೆ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಈ ಜಾಗವನ್ನು ಖಾಸಗಿ ವ್ಯವಹಾರಗಳಿಗೆ ಗುತ್ತಿಗೆ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನಿರ್ಧರಿಸಿದ್ದು, ಹರಾಜು ಹಾಕಲು ಸಿದ್ಧತೆಯನ್ನು ಮಾಡಿಕೊಂಡಿದೆ. 

ಷಟಲ್‌ ರೀತಿ ಎಲ್ಲೆಡೆ ನಿಲ್ಲುವ ಎಕ್ಸ್‌ಪ್ರೆಸ್‌ ಬಸ್: ಕೆಎಸ್‌ಆರ್‌ಟಿಸಿ ವಿರುದ್ಧ ಜನಾಕ್ರೋಶ

ಬಸ್ ಟರ್ಮಿನಲ್ ನಿರ್ಮಾಣ ಕಾರ್ಯ 2011ರಲ್ಲಿ ಪ್ರಾರಂಭವಾಗಿತ್ತು. 2014ರವರೆಗೆ ಕಾರ್ಯನಿರ್ವಹಿಸಿದ ಈ ಟರ್ಮಿನಲ್‌ ನಿರ್ವಹಣೆ, ಭದ್ರತೆ, ನೀರು ಮತ್ತು ವಾರ್ಷಿಕ ಲಕ್ಷಗಟ್ಟಲೆ ವಿದ್ಯುತ್ ವೆಚ್ಚ ವೆಚ್ಚ ಮಾಡಲಾಗುತ್ತಿದೆ. ಆದರೆ, ಯಾವುದೇ ಆದಾಯವಿಲ್ಲ, ಟರ್ಮಿನಲ್ ಅನ್ನು ಸರ್ಕಾರಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಪ್ರಯತ್ನಗಳು ಯಾವುದೇ ಫಲಿತಾಂಶ ನೀಡಿಲ್ಲ. ಹಾಗಾಗಿ, ಬಳಕೆಯಾಗದ ಟರ್ಮಿನಲ್ ಅನ್ನು ಶಾಪಿಂಗ್ ಸಂಕೀರ್ಣ ಅಥವಾ ಇತರ ವಾಣಿಜ್ಯ ಸಂಸ್ಥೆಗಳಾಗಿ ಪರಿವರ್ತಿಸಲು ಅರ್ಜಿಗಳನ್ನು ಆಹ್ವಾನಿಸಿದೆ. 

500 ಆದ್ರೂ ಮಟನ್‌ ಖರೀದಿ ಮಾಡ್ತೀರಿ, ಬಸ್‌ ದರ ಏರಿಕೆ ದೊಡ್ಡದು ಮಾಡ್ತೀರಿ: ಸಚಿವ ಚಲುವರಾಯಸ್ವಾಮಿ

ಪ್ರಕ್ರಿಯೆ ಶುರು: 

ಶಕ್ತಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಗುಸುಗುಸು ಕೇಳಿ ಬರುತ್ತಿರುವ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸದ್ಯ ಸಂಪೂರ್ಣ ಕಟ್ಟಡವನ್ನ ಖಾಸಗಿಯವರಿಗೆ ಲೀಸ್ ಅಥವಾ ಬಾಡಿಗೆ ಕೊಡಲು ತಯಾರಿ ಮಾಡಿಕೊಂಡಿದೆ. ಯಾರು ಬೇಕಾದರೂ ಕಟ್ಟಡವನ್ನು ತೆಗೆದುಕೊಂಡು ಉಪಯೋಗ ಮಾಡಿಕೊಳ್ಳಿ. ನಮಗೆ ಮಾತ್ರ ಹಣ ನೀಡಿ ಎಂದು ಟೆಂಡರ್‌ಗೆ ಬೇಕಾದ ಪ್ರಕ್ರಿಯನ್ನೂ ಆರಂಭಿಸಿದೆ. ಲೀಸ್ ತೆಗೆದುಕೊಳ್ಳುವವರಿಗೆ ಆಯ್ಕೆಯನ್ನೂ ನೀಡಿರುವ ಆಡಳಿತ ಮಂಡಳಿ, ಸಂಪೂರ್ಣ ಕಟ್ಟಡ ಬೇಡದಿದ್ದರೆ, ಒಂದೊಂದೇ ಮಹಡಿಯನ್ನ ಕೂಡ ಪಡೆದು ವ್ಯಾಪಾರ ಮಾಡುವಂತೆ ತಿಳಿಸಿದೆ.

ಮೆಟ್ರೋ, ಬಸ್‌ ಡಿಪೋ ಮಾಡಲೂ ಆಗಲಿಲ್ಲ 

ಉತ್ತರ ಕರ್ನಾಟಕ, ತುಮಕೂರು, ಹಾಸನ, ಚಿತ್ರದುರ್ಗ ಮತ್ತು ಇತರ ಪ್ರದೇಶಗಳಿಗೆ ಹೋಗುವ ಬಸ್‌ಗಳನ್ನು ಬಸವೇಶ್ವರ ಬಸ್‌ ನಿಲ್ದಾಣಕ್ಕೆ ತಿರುಗಿಸುವ ಮೂಲಕ ಕೆಂಪೇಗೌಡ ಬಸ್ ನಿಲ್ದಾಣದ ಮೇಲಿನ ಹೊರೆ ಕಡಿಮೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ಪ್ರೋತ್ಸಾಹ ನಿಗದ ಕಾರಣ ಬಸ್ ಟರ್ಮಿನಲ್ ವ್ಯರ್ಥ ವಾಗಿದೆ. ಇದನ್ನು ಮೆಟ್ರೋ ನಿಲ್ದಾಣವಾಗಿ ಬಳಸಲೂ ಪರಿಗಣಿಸಲಾಗಿತ್ತು. ಅದು ಆಗದರಿಂದ ಕೈಬಿಡಲಾಯಿತು. ತರುವಾಯ, ವಿದ್ಯುತ್ ಬಸ್ ಡಿಪೋ ಆಗಿ ಪರಿವರ್ತಿಸಲು ಯೋಚಿಸಿದರೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!