ಗವಿಸಿದ್ದೇಶ್ವರ ಪಲ್ಲಕ್ಕಿ ಹೊತ್ತರೆ ಅಧಿಕಾರ ಸಿಗುತ್ತದೆ ಎನ್ನುವ ನಂಬಿಕೆಯಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯಂದ್ರ ಪಲ್ಲಕ್ಕಿ ಹೊತ್ತು ಗಮನ ಸೆಳೆದರು. ಈ ಹಿಂದೆ ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ, ಕಳೆದ ವರ್ಷ ಡಿಕೆಶಿ ಪಲ್ಲಕ್ಕಿ ಹೊತ್ತಿದ್ದರು.
ಕೊಪ್ಪಳ(ಡಿ.16): ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ದೇಶ್ವರರ 209ನೇ ಮಹಾರಥೋತ್ಸವ ಬುಧವಾರ ಸಂಜೆ ನೆರೆದಿದ್ದ ಸುಮಾರು 8 ಲಕ್ಷ ಭಕ್ತರ ಹರ್ಷೋದ್ವಾರದ ಮಧ್ಯೆ ಸಾಂಗವಾಗಿ ನೆರವೇರಿತು. ಗಾನಯೋಗಿ ಪದ್ಮಶ್ರೀ ಪುರಸ್ಕೃತ ಪಂಡಿತ ಎಂ. ವೆಂಕಟೇಶ ಕುಮಾರ ಅವರು ಹಸಿರು ನಿಶಾನೆ ತೋರುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಬಸವಪಟ ಆರೋಹಣದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಗಜಗಾಂಭಿರ್ಯದಲ್ಲಿ ಮಹಾರಥೋತ್ಸವ ಸಾಗಿತು. ಇದಕ್ಕೂ ಮೊದಲು ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥೋತ್ಸವ ರಥ ಬೀದಿಯಲ್ಲಿ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಬಾಳೆ ಹಣ್ಣು ಎಸೆಯುತ್ತಿದ್ದರು. ಅಚ್ಚರಿ ಎಂದರೇ ಶ್ರೀ ಗಳ ಜೊತೆಯಲ್ಲಿ ವೇದಿಕೆ ಹಂಚಿಕೊಂಡ ಕೆಲವರು ಬಾಳೆ ಹಣ್ಣು ಎಸೆಯುತ್ತಿರುವುದು ಕಂಡು ಬಂದಿತು.
ಯಡಿಯೂರಪ್ಪ ಬಗ್ಗೆ ಮಾತಾಡೋ ಹಕ್ಕು ರಮೇಶ್‌ಗಿಲ್ಲ: ವಿಜಯೇಂದ್ರ
ಗವಿಸಿದ್ದೇಶ್ವರ ಪಲ್ಲಕ್ಕಿ ಹೊತ್ತರೆ ಅಧಿಕಾರ ಸಿಗುತ್ತದೆ ಎನ್ನುವ ನಂಬಿಕೆಯಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯಂದ್ರ ಪಲ್ಲಕ್ಕಿ ಹೊತ್ತು ಗಮನ ಸೆಳೆದರು. ಈ ಹಿಂದೆ ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ, ಕಳೆದ ವರ್ಷ ಡಿಕೆಶಿ ಪಲ್ಲಕ್ಕಿ ಹೊತ್ತಿದ್ದರು. ರಥೋತ್ಸವ ವೇಳೆ ರಥಕ್ಕೆ ನನ್ನ ಮದುವೆ ಮಾಡು ಅಜ್ಜ ಎಂದು ಬರೆದು ಭಕ್ತನೊಬ್ಬ ಬಾಳೆಹಣ್ಣು ಎಸೆದು ಸಮರ್ಪಿಸಿದ್ದು ವಿಶೇಷವಾಗಿತ್ತು.
ಮುಗಿಲುಮುಟ್ಟಿದ ಕರತಾಡನ:
ಗವಿಸಿದ್ದೇಶ್ವರ ಮಹಾರಥೋತ್ಸವ ಸಾಂಗವಾಗಿ ಸಾಗಿ, ಪಾದಗಟ್ಟೆ ತಲುಪಿ ಮರಳಿ ಬಂದು ಮೂಲ ಸ್ಥಾನಕ್ಕೆ ತಲುಪುತ್ತಿದ್ದಂತೆ ಲಕ್ಷ ಲಕ್ಷ ಭಕ್ತರ ಕರತಾಡನ ಮುಗಿಲುಮುಟ್ಟಿತ್ತು. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ, ವಿಜಯಪುರದ ಹುಬ್ಬಳ್ಳಿ ಷಣ್ಮುಖಾ ರೂಢ ಮಠದ ಶ್ರೀ ಅಭಿನವ ಸಿದ್ದಾರೂಢ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ, ಹಿರಿಯ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯಂದ್ರ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಇದ್ದರು.
Koppal: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ, 10 ಲಕ್ಷಕ್ಕೂ ಅಧಿಕ ಜನ ಭಾಗಿ
ಗವಿಸಿದ್ದೇಶ್ವರ ಮಹಾರಥೋತ್ಸವದಲ್ಲಿ ಜನಸ್ತೋಮ ಕಂಡರೆ ಕುಂಭಮೇಳ ದರ್ಶನದಂತೆ ಭಾಸವಾಗುತ್ತದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ನಗರದಲ್ಲಿ ಗವಿಸಿದ್ದೇಶ್ವರ ರಥೋತ್ಸವದಲ್ಲಿ ಮಾತನಾಡಿದ ಅವರು, ಕೊಪ್ಪಳ ಜಾತ್ರೆಗೆ ಮತ್ತೊಂದು ಜಾತ್ರೆಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಆಕಾಶಕ್ಕೆ ಆಕಾಶವೇ ಸಾಟಿ ಎನ್ನುವಂತೆ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯೇ ಸಾಟಿ. ಅದಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸ್ವಾಮೀಜಿ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದಾರೆ. ನಿಮ್ಮೆಲ್ಲ ಭಕ್ತಿ ಬಹಳ ಶ್ರೇಷ್ಠವಾಗಿದೆ ಎಂದರು.
ಬಾಲ್ಕಿಯ ಶ್ರೀಗುರುಬಸವ ಪಟ್ಟದದೇವರು ಮಾತನಾಡಿ, ಕೊಪ್ಪಳ ಜಾತ್ರೆ ವಿಶೇಷವಾಗಿದೆ. 12ನೇ ಶತಮಾನದಲ್ಲಿ ದಾಸೋಹ ಮಾಡು ತ್ತಿದ್ದರು ಎನ್ನುವುದನ್ನು ಕೇಳಿದ್ದೆವು, ಓದಿದ್ದೆವು. ಆದರೆ ಕೊಪ್ಪಳದಲ್ಲಿ ಅದನ್ನು ಕಣ್ಣಾರೆ ಕಂಡಿದ್ದೇವೆ ಎಂದರು.