ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ವಿಷಯಾಧಾರಿತ ಪ್ರದರ್ಶನ ಅಯೋಜಿಸಲಾಗಿದ್ದು, ಮಕ್ಕಳಿಗೆ ರಾಮಾಯಣಮಹಾಕಾವ್ಯದ ಬಗ್ಗೆ ಹೂವಿನ ಕಲಾಕೃತಿಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಪ್ರದರ್ಶನಕ್ಕೆ ಸುಮಾರು 2.75 ಕೋಟೆ ರು.ಹಣ ಖರ್ಚು ಮಾಡಲಾಗುತ್ತಿದೆ ಎಂದ ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್
ಮುಳಬಾಗಿಲು(ಡಿ.16): ಗಣರಾಜ್ಯೋತ್ಸವ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ವಿಷಯಾಧಾರಿತ 217ನೇ ಫಲಪುಷ್ಪ ಪ್ರದರ್ಶನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಇಂದಿನಿಂದ (0.16) ಆರಂಭವಾಗಲಿದ್ದು, ಹನ್ನೆರಡು ದಿನಗಳವರೆ ಅಂದರೆ 22ರವರೆಗೆ ನಡೆಯಲಿದೆ.
ಇಂದು(ಗುರುವಾರ) ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಫಲಪುಷ ಪ್ರದರ್ಶನ ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅತಿಥಿಗಳಾಗಿ ಭಾಗವಹಿಸುವರು ಎಂದು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ತಿಳಿಸಿದರು.
ಬೆಂಗ್ಳೂರು ಲಾಲ್ಬಾಗ್ ರೀತಿ ಊಟಿಯಲ್ಲಿ ವಿಂಟರ್ ಫ್ಲವರ್ ಫೆಸ್ಟ್!
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ವಿಷಯಾಧಾರಿತ ಪ್ರದರ್ಶನ ಅಯೋಜಿಸಲಾಗಿದ್ದು, ಮಕ್ಕಳಿಗೆ ರಾಮಾಯಣಮಹಾಕಾವ್ಯದ ಬಗ್ಗೆ ಹೂವಿನ ಕಲಾಕೃತಿಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಪ್ರದರ್ಶನಕ್ಕೆ ಸುಮಾರು 2.75 ಕೋಟೆ ರು.ಹಣ ಖರ್ಚು ಮಾಡಲಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಉದ್ಯಾನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಡಾ.ಎಂ.ಜಗದೀಶ್ ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಬರೆಯಲು ಕುಳಿತಿರುವ ದೃಶ್ಯ, ಆಶ್ರಮ, ಹುತ್ತ, ಜಟಾಯು ಪಕ್ಷಿ, ರಾಮಾ ಯಣ ಮಹಾಕಾವ್ಯ ಕೃತಿಯ ಪ್ರತಿಕೃತಿ, ತಪಸ್ಸಿಗಾಗಿ ಕೂತು ಅವರ ಸುತ್ತಲೂ ಹುತ್ತ ಬೆಳೆದಿರುವುದು ಹೀಗೆ ನಾನಾ ಪ್ರತಿಕೃತಿಗಳನ್ನು ಪ್ರದರ್ಶನದಲ್ಲಿ ನಿರ್ಮಿಸ ಲಾಗಿದೆ. ರಾಮಾಯಣದ ಒಲೆಗರಿ ಹಸ್ತ ಪ್ರತಿಗಳ ಪ್ರದರ್ಶನ, ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡದಿರುವ ಫಾಗರ್ಸ್ ಹೀಗೆ ಹಲವು ಆಕರ್ಷಣೆ ಗಳಿರುತ್ತವೆ ಎಂದು ತಿಳಿಸಿದರು.
1.50 ಲಕ್ಷ ಡಚ್ ಗುಲಾಬಿ ಹೂವು:
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ (ವಾಲ್ಮೀಕ) ಕಲಾಕೃತಿಯ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಈ ಕಲಾಕೃತಿಯ ಪೀಠಭಾಗವು 10 ಅಡಿ ಎತ್ತರ ಮತ್ತು 38 ಅಡಿ ಸುತ್ತಳತೆಯನ್ನು ಹೊಂದಿದ್ದು, 1.50 ಲಕ್ಷಡಚ್ ಗುಲಾಬಿ ಹೂವುಗಳನ್ನು ಹಾಗೂ 4 4 ಕ್ವಿಂಟಲ್ ಪಿಂಚ್ ಗುಲಾಬಿ ಹೂವುಗಳನ್ನು ಬಳಲಾಗುವುದು. 3 ಕಿಂಟಲ್ ಹೈದರಾಬಾದ್ ಸೇವಂ ತಿಗೆ ಹೂವುಗಳನ್ನು ಬಳಸಲಾಗುವುದು. ಹೂವುಗಳನ್ನು ಎರಡು ಬಾರಿ ಬದಲಿಸಲಾಗುವುದು. (ಹೀಗಾಗಿ ಈ ಹೂವುಗಳು ದ್ವಿಗುಣ ಪ್ರಮಾಣದಲ್ಲಿರುತ್ತವೆ) ರಾಮಾಯಣದ ಸಂಪೂರ್ಣ ಚಿತ್ರಣವನ್ನು ಹೂವುಗಳು, ಪ್ರತಿಕೃತಿಗಳು, ರಾಮ-ಸೀತೆ, ಲಕ್ಷ್ಮಣರ ಕುರಿತು ತಿಳಿಸಲಾಗುವುದು ಎಂದು ಹೇಳಿದರು.
ಉಳಿದಂತೆ ಎಂದಿನಂತೆ ಗಾಜಿನ ಮನೆ ಸುತ್ತ ನವಿಲು, ಹೂವಿನ ಜಲಪಾತಗಳು, ಹ್ಯಾಂಗಿಂಗ್ ಪಾಟ್ಗಳು, ವರ್ಟಿಕಲ್ ಗಾರ್ಡನ್, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಹೂ ಗಿಡಗಳು, ತರಕಾರಿ ಮತ್ತು ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿರುತ್ತದೆ.
ಭದ್ರತೆ, ಮೂಲ ಸೌಲಭ್ಯ:
ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ರಕ್ಷಣೆಗೆ ಅಗತ್ಯ ಭದ್ರತಾ ಸಿಬ್ಬಂದಿ ಜತೆಗೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗು ವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ತಾತ್ಕಾಲಿಕ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ ಮಾಡಲಾ ಗಿದೆ. ಗಾಜಿನ ಮನೆ, ಎಲ್ಲಾ ಪ್ರವೇಶ ದ್ವಾರಗಳು ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ.
26ರವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಟ ಹಿನ್ನಲೆಯಲ್ಲಿ ಬಾಗ್ ವ್ಯಾಪ್ತಿ ಯಲ್ಲಿ ಜ.16 ರ ಗುರುವಾರದಿಂದ 26ರವರೆಗೆ 11 ದಿನಗಳು ಸಂಚಾರ ವ್ಯವಸ್ಥೆಯಲ್ಲಿ ಬದಲಾ ಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಈ ಫಲಪುಷ್ಪ ಪ್ರದರ್ಶನಕ್ಕೆ ಗಣ್ಯರು, ಸಾರ್ವಜನಿಕರು, ಪ್ರವಾಸಿಗರು ದೇಶ-ವಿದೇಶಿ ಪ್ರೇಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿ ದಂತೆ ಸುಮಾರು 8 ರಿಂದ 10 ಲಕ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಜನ ಸಂದಣಿ ಹಿನ್ನಲೆಯಲ್ಲಿ ವಿಲನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತಲ್ಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಹನ ನಿಲುಗಡೆ ಸ್ಥಳಗಳು 1. ಡಾ. ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿದ್ವಿ-ಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. 2. ಕೆ.ಹೆಚ್.ರಸ್ತೆ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆಗೆ ಅವಕಾಶ, 3. ಡಾಣಣ ಮರಿಗೌಡ ರಸ್ತೆ-ಹಾಪ್ ಕಾಮ್ಸ್ನಲ್ಲಿ ಬೈಕು ಹಾಗೂ ಕಾರುಗಳ ನಿಲುಗಡೆ ವ್ಯವಸ್ಥೆ ಕಲಿಸಲಾಗಿದೆ. 4 ಜೆ.ಸಿ.ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರುಗಳ ನಿಲುಗಡೆ
ನಿಲುಗಡೆ ನಿಷೇಧಿತ ರಸ್ತೆಗಳು
1. ಡಾ: ಮರಿಗೌಡ ರಸ್ತೆ, ಲಾಲ್ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳು.
2. ಕೆ.ಹೆಚ್.ರಸ್ತೆ, ಕೆ.ಹೆಚ್ .ವೃತ್ತದಿಂದ ಶಾಂತಿನಗರ ಜಂಕನ್ವರೆಗೆ ರಸ್ತೆಯ ಎರಡು ಕಡೆ.
3. ಲಾಲ್ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ ಭಾಗ್ ಮುಖ್ಯದ್ವಾರದವರೆಗೆ
4. ಸಿದಯ, ರಸ್ತೆ, ಊರ್ವಶಿ ಥಿಯೇಟರ್ ಜಂಕನ್ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ವರೆಗೆ.
5. ಬಿಟಿಎಸ್ ಬಸ್ ನಿಲ್ದಾಣದ ಜಂಕನ್ನಿಂದ ಅಂಚೆ ಕಚೇರಿ ರಸ್ತೆಯ ಎರಡು ಕಡೆ.
6. ಕ್ಟಂಬಿಗಲ್ ರಸ್ತೆಯ ಎರಡೂ ಕಡೆ.
7 ಲಾಲ್ಬಾಗ್ ಪಶ್ಚಿಮದ್ವಾರದಿಂದ ಆರ್. ವಿ. ಟೀಚರ್ಸ್ ಕಾಲೇಜುವರೆಗೆ.
8. ಆರ್.ವಿ.ಟೀಚರ್ಸ್ ಕಾಲೇಜ್ನಿಂದ ಅಶೋಕ ಪಿಲ್ಲರ್ವರೆಗೆ
9. ಅಶೋಕ ಪಿಲ್ಲರ್ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ಮಾರ್ಗ ಬದಲಾವಣೆ
ಲಾಲ್ಬಾಗ್ಗೆ ಒಂದೇ ದಿನ 2.45 ಲಕ್ಷ ಜನ: ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 3.98 ಕೋಟಿ ಗಳಿಕೆ
ಮೆಟ್ರೋ ಬಳಸುವಂತೆ ಪೊಲೀಸರ ಮನವಿ ಫಲಪುಷ್ಪ ಪ್ರದರ್ಶನ ಹಿನ್ನಲೆಯಲ್ಲಿ ಡಾ. ಮರೀಗೌಡ ರಸ್ತೆ, ಲಾಲ್ಬಾಗ್ ರಸ್ತೆ, ಕೆ. ಹೆಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಕಾರಣ ಬಿಎಂಟಿಸಿ ಬಸ್ಗಳು ಹಾಗೂ ಮೆಟ್ರೋ ಬಳಸುವಂತೆ ಸಾರ್ವಜನಿ ಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಆನ್ಲೈನ್ನಲ್ಲೇ ಟಿಕೆಟ್ ಪಡೆಯಿರಿ
ಆನ್ಲೈನ್ನಲ್ಲೇ ಟಿಕೆಟ್ ಪಡೆಯಿರಿ ಆನ್ಲೈನ್ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿದೆ. ಆಸಕ್ತರು ವೆಬ್ಸೈಟ್: hasiru.karnataka. gov.in/floweshow/ login.aspx ಗೆ ಭೇಟಿ ನೀಡಿ ಅಥವಾ ಮೊಬೈಲ ಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್ ಲೈನ್ ಟಿಕೆಟ್ ಬುಕ್ ಮಾಡಬಹುದು.