ಅತಿಯಾದ ಹಣದ ವ್ಯಾಮೋಹದಿಂದ ನೆಮ್ಮದಿ ಹಾಳು: ಕೃಷ್ಣ ಬೈರೇಗೌಡ

Naveen Kodase, Kannadaprabha News |   | Kannada Prabha
Published : Jan 29, 2026, 01:50 PM IST
krishna byre gowda

ಸಾರಾಂಶ

ಹೋಬಳಿಯ ಕಲ್ಲೇ ಸೋಮನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಲೋಕಾರ್ಪಣೆಗೊಳಿಸಿದರು. ಹಣ, ಅಧಿಕಾರದಿಂದ ಸಿಗದ ಮನಸ್ಸಿನ ನೆಮ್ಮದಿಯು ಕೇವಲ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಬಾಗೂರು: ಮನುಷ್ಯ ಎಷ್ಟು ಬೇಕಾದರೂ ದುಡ್ಡು ಸಂಪಾದಿಸಬಹುದು, ಕೀರ್ತಿ ಸಂಪಾದಿಸಬಹುದು ಆದರೆ ಅವನಿಗೆ ನೆಮ್ಮದಿ ಸಿಗುವುದಿಲ್ಲ ಅವನ ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ದೇವಾಲಯಗಳಿಗೆ ಹೋಗುವುದರಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಮನುಷ್ಯನಿಗೆ ಎಂದಿಗೂ ಹಣ ಅಧಿಕಾರದಿಂದ ನೆಮ್ಮದಿ ಸಿಗಲ್ಲ

ಹೋಬಳಿಯ ಕಲ್ಲೇ ಸೋಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮನುಷ್ಯನಿಗೆ ಎಂದಿಗೂ ಹಣ ಅಧಿಕಾರ ಕೀರ್ತಿ ಇದರ ಹಿಂದೆಯೇ ಪ್ರತಿನಿತ್ಯ ಓಡುತ್ತಿದ್ದಾನೆ ಆದರೆ, ಅವನು ನೆಮ್ಮದಿಯನ್ನು ಸಂಪಾದಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅದು ಎಲ್ಲರಿಗೂ ಸಿಗುವ ವಸ್ತುವಲ್ಲ ಅದು ಕೇವಲ ದೇವಾಲಯಗಳಲ್ಲಿ ಮಾತ್ರ ಸಿಗುತ್ತದೆ. ಇದರಿಂದಲೇ ಅನೇಕರು ತಮ್ಮ ನೆಮ್ಮದಿಯನ್ನು ದೇವಾಲಯಗಳಲ್ಲಿ ಹುಡುಕುತ್ತಾರೆ ಇದನ್ನು ಅರಿತರೆ ಮಾತ್ರ ಮನುಷ್ಯನ ನಡವಡಕೆಗಳನ್ನು ತಿದ್ದಿಕೊಳ್ಳಲು ಸಾಧ್ಯ ಎಂದರು.

ಗ್ರಾಮದ ಶ್ರೀ ಬಸವೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇರುವ ಬಗ್ಗೆ ತಿಳಿಸಿದ್ದಾರೆ. ಭಕ್ತನಿಗೆ ದೇವರ ಮೇಲಿರುವ ನಂಬಿಕೆ ಎಂದು ಹುಸಿಯಾಗುವುದಿಲ್ಲ. ಆ ಕಾರಣದಿಂದಲೇ ಧಾರ್ಮಿಕ ಭಾವನೆಗೆ ಅಷ್ಟೊಂದು ಶಕ್ತಿ ಇರುವುದು ದೇವಾಲಯ ನಿರ್ಮಾಣದ ಜೊತೆಗೆ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು. ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ವಿಶೇಷವಾಗಿ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಆರ್ಥಿಕವಾಗಿ ಸದೃಢವಾಗಲು ಕಾರಣವಾಗಿದೆ ಎಂದರು.

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಈ ಭಾಗದ ಕೆರೆಕಟ್ಟೆಗಳನ್ನು ತುಂಬಿಸಲು ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೂ ಹೆಚ್ಚಿನ ಅನುದಾನ ಕೊಡಲಾಗುತ್ತದೆ ಹಾಗೂ ದೇವಾಲಯದ ಅಭಿವೃದ್ಧಿ ಕೆಲಸಗಳಿಗೂ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂಎ ಗೋಪಾಲಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ದೂರ ದೃಷ್ಟಿ ಯೋಜನೆಗಳ ಪರಿಣಾಮವಾಗಿ ತಾಲೂಕಿನ ಅನೇಕ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ಈ ಭಾಗದಲ್ಲೂ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ಯೋಜನೆ ಪೂರ್ಣಗೊಳಿಸಿ ತಗಡೂರು ಎಂ ಶಿವರ ಕೆಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ. ಇನ್ನೂ ರಾಜ್ಯದಲ್ಲೇ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲಿ ತಾಲೂಕು 2ನೇ ಸ್ಥಾನ ಪಡೆದಿದೆ ತಮ್ಮ ವಿಧಾನಪರಿಷತ್ ಸದಸ್ಯರ ಅವಧಿಯಲ್ಲಿ ದೇವಾಲಯ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಿರುವುದಾಗಿ ತಿಳಿಸಿದರು. ಗ್ರಾಮಕ್ಕೆ ಇದೆ ಮೊದಲ ಬಾರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಂಕ್ರಪ್ಪ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್‌ಪಿ ಪ್ರಕಾಶ್ ಗೌಡ, ಚನ್ನರಾಯಪಟ್ಟಣ ನಗರ ಪ್ರಾಧಿಕಾರ ಅಧ್ಯಕ್ಷ ಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಉಪ ತಹಸಿಲ್ದಾರ್ ಮೋಹನ್, ಕಂದಾಯ ಅಧಿಕಾರಿ ರಾಜು, ಕಾಂಗ್ರೆಸ್ ಮುಖಂಡ ಮಹೇಶ್, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭರತೇಶ್, ಉಪಾಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಮೃತ್ಯುಂಜಯ, ಖಜಾಂಚಿ ಲಕ್ಷ್ಮಿ ಗೌಡ , ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

PREV
Read more Articles on
click me!

Recommended Stories

ದಾವಣಗೆರೆ ಒಂದು ಮದುವೆ-ಎರಡು ಹೆಣ: ಪತಿ ಹಾಗೂ ಮಾವನ ಸಾವಿಗೆ ಕಾರಣರಾದ ಪತ್ನಿ, ಪ್ರಿಯಕರ ಅರೆಸ್ಟ್!
ಚಿನ್ನದ ದರ ಇಳಿಯಲೆಂದು ಹರಕೆ, ಮುನಿದ ಚಿನ್ನ ಒಲಿಯಲಿ: ದೇವಿಗೆ ಅಪರೂಪದ ಬೇಡಿಕೆ ಇಟ್ಟ ಭಕ್ತ!