ಯಾದಗಿರಿ: ಉದ್ಯೋಗ ಖಾತ್ರಿ ಬಿಲ್ ಪಾವತಿಗೂ ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಓ, ಕಂಪ್ಯೂಟರ್ ಆಪರೇಟರ್, ಆಡಿಯೋ ವೈರಲ್!

By Ravi Janekal  |  First Published Dec 23, 2023, 6:47 PM IST

ಉದ್ಯೋಗ ಖಾತ್ರಿ ಕಾಮಗಾರಿ ಬಿಲ್ ಪಾವತಿಸಲು ಕಂಪ್ಯೂಟರ್ ಆಪರೇಟರ್‌ನೊಬ್ಬ ಗ್ರಾಪಂ ಸದಸ್ಯನಿಗೇ ಲಂಚಕ್ಕೆ ಬೇಡಿಕೆ ಇಟ್ಟ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಪಂನಲ್ಲಿ ನಡೆದಿದೆ. ದುಡ್ಡು ಕೊಟ್ಟರೆ ಕಾಮಗಾರಿ ದುಡ್ಡು ಕೊಡೋದು ಎಂದು ಬೆದರಿಕೆ. ಈ ಘಟನೆಯ ಆಡಿಯೋ ಸಂಭಾಷಣೆ ವೈರಲ್ ಆಗಿದೆ.


ಯಾದಗಿರಿ (ಡಿ.23): ಉದ್ಯೋಗ ಖಾತ್ರಿ ಕಾಮಗಾರಿ ಬಿಲ್ ಪಾವತಿಸಲು ಕಂಪ್ಯೂಟರ್ ಆಪರೇಟರ್‌ನೊಬ್ಬ ಗ್ರಾಪಂ ಸದಸ್ಯನಿಗೇ ಲಂಚಕ್ಕೆ ಬೇಡಿಕೆ ಇಟ್ಟ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಪಂನಲ್ಲಿ ನಡೆದಿದೆ. ದುಡ್ಡು ಕೊಟ್ಟರೆ ಕಾಮಗಾರಿ ದುಡ್ಡು ಕೊಡೋದು ಎಂದು ಬೆದರಿಕೆ. ಈ ಘಟನೆಯ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

ಹಿಜಾಬ್ ಮೇಲಿನ ನಿಷೇಧ ಹಿಂಪಡೆಯುವ ಕುರಿತು ಚರ್ಚಿಸಿ ನಿರ್ಧಾರ: ಸಿಎಂ ಸಿದ್ದರಾಮಯ್ಯ ಯೂಟರ್ನ್!

Latest Videos

undefined

ಗ್ರಾಮ ಪಂಚಾಯ್ತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿರುವ  ರಮೇಶ್ ಎಂಬಾತನಿಂದ ಲಂಚಕ್ಕೆ ಬೇಡಿಕೆ. ಗ್ರಾ.ಪಂ ಸದಸ್ಯನಾಗಿರುವ ಮೋನಪ್ಪ ಎಂಬಾತನ ಬಳಿ ಹಣಕ್ಕೆ ಬೇಡಿಕೆಯಿಟ್ಟ ಆಪರೇಟರ್ ರಮೇಶ. ಕಾಮಗಾರಿ ಬಿಲ್ ಪಾವತಿಸಲು ಪಿಡಿಓಗೆ ಲಂಚ ಕೊಡಬೇಕಂತೆ. ಹೀಗಾಗಿ ಲಂಚ ಕೊಡದೇ ಬಿಲ್ ಪಾವತಿ ಮಾಡೊಲ್ಲ ಎಂದು ಕಂಪ್ಯೂಟರ್ ಆಪರೇಟರ್ ಬೆದರಿಕೆ. ಪಿಡಿಓ, ಕಂಪ್ಯೂಟರ್ ಆಪರೇಟರ್‌ ಕಿರುಕುಳಕ್ಕೆ ಬೇಸತ್ತು. ಫೋನ್‌ಪೇ ಮೂಲಕ 3200 ರೂ. ಅಪರೇಟರಿಗೆ ಹಣ ಸಂದಾಯ ಮಾಡಿದ್ದ ಗ್ರಾಪಂ ಸದಸ್ಯ.  ಆದರೆ ಇನ್ನುಳಿದ 5000 ಸಾವಿರ ರೂ. ಹಣಕ್ಕಾಗಿ ಪಿಡಿಓ ದುಡ್ಡು ಕೇಳ್ತಿದ್ದಾರೆಂದು ಕಂಪ್ಯೂಟರ್ ಆಪರೇಟರ್ ಮತ್ತೆ ಲಂಚಕ್ಕೆ ಬೇಡಿಕೆ. ಆಡಿಯೋ ರೆಕಾರ್ಡ್ ಹಾಗೂ ಪೋನ್ ಪೇ ಮೂಲಕ ಹಣ ಸಂದಾಯ ಮಾಡಿದ ಸ್ಕ್ರೀನ್ ಶಾಟ್ ವೈರಲ್. ಭ್ರಷ್ಟ ಪಿಡಿಓ, ಕಂಪ್ಯೂಟರ್ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ  ಜಿ.ಪಂ ಸಿಇಓಗೆ ಗ್ರಾಪಂ ಸದಸ್ಯ ದೂರು ನೀಡಿದ್ದಾರೆ.

ಹಿಜಾಬ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ಯಾಕೆ ಮೌನ? ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನೆ

click me!