ಪಾವಗಡ: ನಾಸಿರ್‌ 2ನೇ ಬಾರಿ ರಾಜ್ಯಸಭೆ ಟಿಕೆಟ್‌: ಅಭಿನಂದನೆ ಸಲ್ಲಿಕೆ

By Kannadaprabha News  |  First Published Feb 16, 2024, 8:54 AM IST

ಎರಡನೇ ಬಾರಿಗೆ ರಾಜ್ಯ ಸಭಾ ಸದಸ್ಯರಾಗಿ ಹಿರಿಯ ಮುಖಂಡ ನಾಸಿರ್‌ ಹುಸೇನ್‌ ಅವರಿಗೆ ಟಿಕೆಟ್‌ ನೀಡಿದ್ದು, ಮುಸ್ಲಿಂ ಸಮಾಜ ಹಾಗೂ ಇತರೆ ಎಲ್ಲಾ ವರ್ಗಗಳಲ್ಲಿ ಅತ್ಯಂತ ಸಂತಸ ತಂದಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಪಾವಗಡ ಷಾಬಾಬು (ಷರೀಷ್‌) ಹರ್ಷ ವ್ಯಕ್ತಪಡಿಸಿದ್ದಾರೆ.


ಪಾವಗಡ: ಎರಡನೇ ಬಾರಿಗೆ ರಾಜ್ಯ ಸಭಾ ಸದಸ್ಯರಾಗಿ ಹಿರಿಯ ಮುಖಂಡ ನಾಸಿರ್‌ ಹುಸೇನ್‌ ಅವರಿಗೆ ಟಿಕೆಟ್‌ ನೀಡಿದ್ದು, ಮುಸ್ಲಿಂ ಸಮಾಜ ಹಾಗೂ ಇತರೆ ಎಲ್ಲಾ ವರ್ಗಗಳಲ್ಲಿ ಅತ್ಯಂತ ಸಂತಸ ತಂದಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಪಾವಗಡ ಷಾಬಾಬು (ಷರೀಷ್‌) ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಪ್ರಗತಿ ಕುರಿತು ರಾಜ್ಯ ಸಭೆಯಲ್ಲಿ ಸದಾ ಧ್ವನಿ ಎತ್ತುವ ದೂರದೃಷ್ಟಿಯ ನಾಯಕರೆಂದರೆ ಡಾ. ನಾಸಿರ್‌ ಹುಸೇನ್. ಇವರ ಜನಪರ ಹಾಗೂ ಸಂಘಟನತ್ಮಕ ಸೇವೆ ಪರಿಗಣಿಸಿ ಕೇಂದ್ರ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಸಭೆಗೆ ಟಿಕೆಟ್‌ ನೀಡಿರುವುದು ಹೆಮ್ಮೆಯ ವಿಚಾರ. ಹೀಗಾಗಿ ಡಾ. ನಾಸಿರ್‌ ಹುಸೇನ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Latest Videos

undefined

ಮುಖಂಡರೊಂದಿಗೆ ಚರ್ಚಿಸಿ ಕುಪೇಂದ್ರ ರೆಡ್ಡಿ ಕಣಕ್ಕೆ

ಬೆಂಗಳೂರು(ಫೆ.16): ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದರೆ ಜೆಡಿಎಸ್ ಕಾರ್ಯತಂತ್ರ ಇದ್ದೇ ಇರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎನ್‍ಡಿಎ ಕೂಟಕ್ಕೆ ಸೇರಿದ ನಂತರ ಯಾವುದೇ ಹೋರಾಟ ಮತ್ತು ತೀರ್ಮಾನಗಳನ್ನು ಜಂಟಿಯಾಗಿಯೇ ತೆಗೆದುಕೊಳ್ಳುತ್ತಿದ್ದೇವೆ. ಬುಧವಾರ ನಮ್ಮ ಕೇಂದ್ರದ ವರಿಷ್ಠರು ಮತ್ತು ಜೆಡಿಎಸ್‌ನ ರಾಜ್ಯದ ಹಿರಿಯರು ಚರ್ಚಿಸಿ ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದರು ಎಂದು ವಿವರಿಸಿದರು.

ರಾಜ್ಯಸಭೆ ಅಖಾಡಕ್ಕೆ 5ನೇ ಅಭ್ಯರ್ಥಿ ಕುಪೇಂದ್ರ ಪ್ರವೇಶ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ- ಜೆಡಿಎಸ್ ಒಟ್ಟಾಗಿ ನಮ್ಮ ಅಭ್ಯರ್ಥಿ ಗೆಲ್ಲುವ ದೃಷ್ಟಿಯಿಂದ ತಂತ್ರಗಾರಿಕೆಯನ್ನು ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ ಎಂದರು.

click me!