ಗ್ಯಾರಂಟಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳು ಹೆಸರು ನೋಂದಾಯಿಸಲು ಕರೆ

By Kannadaprabha NewsFirst Published Feb 16, 2024, 8:49 AM IST
Highlights

ಸರ್ಕಾರ ಜಾರಿಗೊಳಿಸಿರುವ ವಿವಿಧ ಪಂಚಗ್ಯಾರಂಟಿ ಯೋಜನೆಗಳನ್ನು ಅರ್ಜಿ ಸಲ್ಲಿಸದೇ ಬಾಕಿಯಿರುವ ಹಾಗೂ ಅರ್ಜಿಸಲ್ಲಿಸಿ ಯೋಜನೆಯ ಸವಲತ್ತು ದೊರೆಯದ ಅರ್ಹ ಫಲಾನುಭವಿಗಳು ಕೂಡಲೆ ಹೆಸರು ನೋಂದಾಯಿಸಿಕೊಂಡು ಯೋಜನೆಗಳ ಸದುಪಯೋಗ ಪಡೆಯುವಂತೆ ಸರ್ಕಾರದ ಮನವಿಗೆ ಸಾರ್ವಜನಿಕರು ಸ್ಪಂದನೆ ನೀಡಬೇಕು ಎಂದು ಸಿಡಿಪಿಒ ಅಂಬಿಕಾ ತಿಳಿಸಿದು.

 ಕೊರಟಗೆರೆ :  ಸರ್ಕಾರ ಜಾರಿಗೊಳಿಸಿರುವ ವಿವಿಧ ಪಂಚಗ್ಯಾರಂಟಿ ಯೋಜನೆಗಳನ್ನು ಅರ್ಜಿ ಸಲ್ಲಿಸದೇ ಬಾಕಿಯಿರುವ ಹಾಗೂ ಅರ್ಜಿಸಲ್ಲಿಸಿ ಯೋಜನೆಯ ಸವಲತ್ತು ದೊರೆಯದ ಅರ್ಹ ಫಲಾನುಭವಿಗಳು ಕೂಡಲೆ ಹೆಸರು ನೋಂದಾಯಿಸಿಕೊಂಡು ಯೋಜನೆಗಳ ಸದುಪಯೋಗ ಪಡೆಯುವಂತೆ ಸರ್ಕಾರದ ಮನವಿಗೆ ಸಾರ್ವಜನಿಕರು ಸ್ಪಂದನೆ ನೀಡಬೇಕು ಎಂದು ಸಿಡಿಪಿಒ ಅಂಬಿಕಾ ತಿಳಿಸಿದು.

ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ತಾಲೂಕುಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ಪಂಚಗ್ಯಾರಂಟಿ ಯೋಜನೆಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಪ್ರತಿ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯುತ್ತಿದೆ, ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 47,724 ಮಂದಿ ಅರ್ಜಿಸಲ್ಲಿಸಿದ್ದು, ಈಗಾಗಲೆ 39,453 ಮಂದಿ ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ತಿಂಗಳು 2 ಸಾವಿರ ರು.ಗಳು ಖಾತೆಗೆ ಜಮಾ ಮಾಡಲಾಗುತ್ತಿದೆ, ಉಳಿದ 540 ಮಂದಿಯ ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಣ ಜಮಾ ಆಗುತ್ತಿಲ್ಲ. ಹಣ ಜಮಾ ಆಗದ ಫಲಾನುಭವಿಗಳು ತಮ್ಮ ಕಚೇರಿಗೆ ಬಂದು ತಮ್ಮ ಅರ್ಜಿ ಪರಿಶೀಲಿಸಿ ತಮ್ಮ ಖಾತೆಯನ್ನು ಪರಿಶೀಲಿಸಿ ಸಮಸ್ಯೆ ಅರಿತು ಸರಿಪಡಿಸುವಂತೆ ತಿಳಿಸಿದರು.

ಅಂಚೆ ಕಚೇರಿಯಲ್ಲಿ ಆಧಾರ ಜೋಡಣೆಯೊಂದಿಗೆ ಖಾತೆ ತೆರದು ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮಿ ಯೋಜನೆಯ ಸವಲತ್ತು ಪಡೆಯುವಂತೆ ತಿಳಿಸಿದ ಅವರು ಇದರೊಂದಿಗೆ 2023 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲಮೋ ಪದವಿ ಪಡೆದ ನಿರುದ್ಯೋಗಿಗಳಿಗೆ 3000 ಸಾವಿರ ಹಾಗೂ 1500 ರು. ನಿರುದ್ಯೋಗಿ ಭತ್ಯ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯುವಂತೆ ಸೂಚಿಸಿದ ಅವರು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯ ಸಿಗುತ್ತಿದೆ, ಶಕ್ತಿಯೋಜನೆ ಜಾರಿಯಾದಾಗಿನಿಂದ ಮಹಿಳೆಯಿಗೆ ಸದರಿ ಯೋಜನೆಯಿಂದಲೂ ಹಣ ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.

ಬೆಸ್ಕಾಂ ಇಲಾಖೆಯ ಎಂಜಿನಿಯರ್‌ ಪ್ರಸನ್ನಕುಮಾರ್‌ ಮಾತನಾಡಿ, ಸರ್ಕಾರದ 5 ಮಹತ್ವಾಕಾಂಕ್ಷಿ ಯೋಜನೆಗಳಿಂದ ಸಾಮಾನ್ಯ ಜನರು, ಮಧ್ಯಮವರ್ಗದವರಿಗೆ ಅನಕೂಲವಾಗಿದ್ದು ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಇದರಿಂದ ತಾಲೂಕಿನಲ್ಲಿ ಇಲ್ಲಿಯವರೆಗೂ 46,532 ಮಂದಿ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದಿದ್ದು ವಿವಿಧ ಸಮಸ್ಯಗಳಿಂದ 752 ಮಂದಿಗೆ ವಿವಿಧ ಸಮಸ್ಯೆಗಳಿಂದ ಯೋಜನೆ ದೊರೆತಿಲ್ಲ ಎಂದರು. ಗೃಹ ಜ್ಯೋತಿ ಯೋಜನೆಯ ಹಣದ ಮೊತ್ತ 1.25 ಕೋಟಿ ಹಣ ಸರ್ಕಾರ ಇಲಾಖೆಗೆ ತುಂಬುತ್ತಿದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬೆಸ್ಕಾಂ ಅಧಿಕಾರಿ ನಟರಾಜು, ಸಿಡಿಪಿಒ ಇಲಾಖೆಯ ಮಮತಾಜ್, ರತ್ನಾ, ಗ್ರಾ.ಪಂ.ಅಧ್ಯಕ್ಷೆ ಗುಲ್ಜಾರ್‌ಬಾನು, ಉಪಾಧ್ಯಕ್ಷೆ ರಾಮು ಎಲ್ಲಾ ಸದಸ್ಯರು ಗ್ರಾ.ಪಂ. ಪಿಡಿಒ ವಸಂತಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಕವಿತಾ, ಕಂದಾಯ ಇಲಾಖೆಯ ಶಿರಸ್ದೇದಾರ್‌ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

click me!