ಇಂದಿನ ಆಧನಿಕ ಶಿಕ್ಷಣ ಪದ್ಧತಿ ಅಂಕಗಳಿಕೆಗೆ ಸೀಮಿತವಾಗದೇ ಜ್ಞಾನ ಸಂಪಾದನೆಗೆ ಅಧಿಕ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ನಮ್ಮ ಮಕ್ಕಳು ಸುಶಿಕ್ಷಿತರಾಗಿ ನೆಲದ ಋಣ ತಿರೀಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮಲನಮೂರ್ತಿ ತಿಳಿಸಿದರು.
ಮಧುಗಿರಿ : ಇಂದಿನ ಆಧನಿಕ ಶಿಕ್ಷಣ ಪದ್ಧತಿ ಅಂಕಗಳಿಕೆಗೆ ಸೀಮಿತವಾಗದೇ ಜ್ಞಾನ ಸಂಪಾದನೆಗೆ ಅಧಿಕ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ನಮ್ಮ ಮಕ್ಕಳು ಸುಶಿಕ್ಷಿತರಾಗಿ ನೆಲದ ಋಣ ತಿರೀಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮಲನಮೂರ್ತಿ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿ ಹೊಸಕೆರೆ ಪಪೂ ಕಾಲೇಜಿನಲ್ಲಿ ನಡೆದ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿ, ನಮ್ಮ ಶಿಕ್ಷಣಕ್ಕೆ ಸಹಕರಿಸಿದ ಎಲ್ಲರ ಋಣ ತಿರೀಸಲು ಮುಂದಾಗಬೇಕು ಎಂದರು.
undefined
ಕೋಡ್ಲಾಪುರ ಪ್ರಭಾರ ಪ್ರಾಂಶುಪಾಲ ಎನ್. ಮಹಾಲಿಂಗೇಶ್ ಮಾತನಾಡಿ, ಗಳು ಮಾನಸಿಕ ಏಕಾಗ್ರತೆ ಬೆಳಸಿಕೊಳ್ಳುವ ಮೂಲಕ ನಿರಂತರ ಅಧ್ಯಯನಶೀಲರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.
ರಾಜ್ಯಮಟ್ಟದ ಎಸ್.ಎಸ್. ಹೀರೆಮಠ್, ಕಾವ್ಯಪ್ರಶಸ್ತಿ ಪುರಸ್ಕೃತರಾದ ಕವಿ, ವಕೀಲ ಬಿದಲೋಟಿ ರಂಗನಾಥ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕವಿ ಬಿದಲೋಟಿ ರಂಗನಾಥ್, ಮಕ್ಕಳು ಮೊಬೈಲ್‌ಗೆ ದಾಸರಾಗದೇ, ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಭೌದ್ಧಿಕತೆ ಬೆಳಸಿಕೊಂಡು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಗುರಿ ಸಾಧಿಸಬೇಕು ಎಂದರು.
ಪ್ರಾಂಶುಪಾಲ ರಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ದಿನದಲ್ಲಿ 18 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಕಠಿಣ ಪರಿಶ್ರಮದಿಂದ ಓದಿ ನಮ್ಮ ದೇಶಕ್ಕೆ ಸಂವಿಧಾನ ತಂದು ಕೊಟ್ಟು ವಿಶ್ವಕ್ಕೆ ಮಾದರಿಯಾಗಿ ವಿಶ್ವಜ್ಞಾನಿಯಾದರು. ವಿದ್ಯಾರ್ಥಿಗಳು ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಇದೇ ವೇಳೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಕುರಿತು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಿಬಿಸಿ ಉಪಾಧ್ಯಕ್ಷ ರಾಜಶೇಖರ್, ಸದಸ್ಯ ರಂಗಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳ ನಾಗರಾಜು, ಸದಸ್ಯರಾದ ಶಿವಣ್ಣ, ಉಪನ್ಯಾಸಕ ಸೈಯದ್ ಅರೀಫ್ ಪಾಷ, ಸೆಮಿಉಲ್ಲಾಖಾನ್, ಮಂಜುನಾಥ್, ಮೋಹನ್ ರಾಜ್, ಹರೀಶ್ ರವಿಕುಮಾರ್ ಇತರರಿದ್ದರು.