3 ತಿಂಗಳಿಂದ ಚಿಕಿತ್ಸೆ: 6 ಬಾರಿ ಪರೀಕ್ಷೆಯಲ್ಲೂ ಕೊರೋನಾ ಪಾಸಿಟಿವ್

By Kannadaprabha NewsFirst Published Jun 16, 2020, 7:26 AM IST
Highlights

ದ.ಕ.ಜಿಲ್ಲೆಯ ವೃದ್ಧರಿಬ್ಬರಲ್ಲಿ ಪತ್ತೆಯಾದ ಕೊರೋನಾ ಸೋಂಕು ಇದೀಗ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಆರು ಬಾರಿ ಗಂಟಲು ದ್ರವ ತಪಾಸಣೆ ನಡೆಸಿದರೂ ಕೊರೋನಾ ಪಾಸಿಟಿವ್‌ ಕಾಣಿಸುತ್ತಿದೆ. ಹೀಗಾಗಿ ಇವರಿಬ್ಬರು ಮೂರು ತಿಂಗಳು ಕಳೆದರೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿಲ್ಲ.

ಮಂಗಳೂರು(ಜೂ.16): ದ.ಕ.ಜಿಲ್ಲೆಯ ವೃದ್ಧರಿಬ್ಬರಲ್ಲಿ ಪತ್ತೆಯಾದ ಕೊರೋನಾ ಸೋಂಕು ಇದೀಗ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಆರು ಬಾರಿ ಗಂಟಲು ದ್ರವ ತಪಾಸಣೆ ನಡೆಸಿದರೂ ಕೊರೋನಾ ಪಾಸಿಟಿವ್‌ ಕಾಣಿಸುತ್ತಿದೆ. ಹೀಗಾಗಿ ಇವರಿಬ್ಬರು ಮೂರು ತಿಂಗಳು ಕಳೆದರೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿಲ್ಲ.

ವಂದೇ ಭಾರತ್‌ ಮಿಷನ್‌ನಡಿ ಮೇ 12ರಂದು ಮೊದಲ ಅಂತಾರಾಷ್ಟ್ರೀಯ ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಆಗಮಿಸಿದ 81 ವರ್ಷ ಮತ್ತು 76 ವರ್ಷದ ವೃದ್ಧರಿಬ್ಬರು ಈ ಅಚ್ಚರಿಗೆ ಕಾರಣವಾಗಿದ್ದಾರೆ.

ಕಾಸರಗೋಡು ವಿದ್ಯಾರ್ಥಿಗಳಿಗೆ ಗಡಿ ಭಾಗದಿಂದ ಬಸ್‌ ಸೌಲಭ್ಯ..!

ದುಬೈನಿಂದ ಬಂದ ಇವರನ್ನು ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಅವರಿಗೆ ಕೊರೋನಾ ಪಾಸಿಟಿವ್‌ ಬಂದ ಬಳಿಕ ಅವರಿಗೆ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಚ್ಚರಿಯ ಸಂಗತಿ ಎಂದರೆ, ಅವರು ಮೇಲ್ನೋಟಕ್ಕೆ ಗುಣಮುಖರಾದಂತೆ ಕಂಡುಬಂದರೂ ಪ್ರತಿ ಬಾರಿ ಗಂಟಲು ದ್ರವದ ಸ್ಯಾಂಪಲ್‌ ಪರೀಕ್ಷೆ ವೇಳೆ ಪಾಸಿಟಿವ್‌ ಬರುತ್ತಿದೆ. ಇದು ವೈದ್ಯರು ತಲೆಕೆಡಿಸುವಂತೆ ಮಾಡಿದೆ.

ಚಿಕಿತ್ಸೆ ಬಳಿಕ ಕ್ವಾರೆಂಟೈನ್‌ನಲ್ಲಿದ್ದ ಇವರ ಪತ್ನಿ ಹಾಗೂ ಪುತ್ರಿ ಗುಣಮುಖರಾಗಿ ಮನೆ ಸೇರಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಂತರಾಗಿರುವ ಇವರ ಗಂಟಲು ದ್ರವ ತಪಾಸಣೆ ಆರು ಬಾರಿ ಮಾಡಿದರೂ ಸೋಂಕು ಇದೆ ಎಂದು ಕಾಣಿಸಿಕೊಳ್ಳುತ್ತಿದೆ. ಇನ್ನೊಬ್ಬರು 76 ವರ್ಷದ ವೃದ್ಧರು ತಮ್ಮ ಪತ್ನಿಯೊಂದಿಗೆ ದುಬೈಯಲ್ಲಿರುವ ಪುತ್ರಿಯ ಮನೆಗೆ ತೆರಳಿದ್ದು, ಅಲ್ಲಿ ಅಳಿಯ ಹಾಗೂ ಪುತ್ರಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅವರು ಗುಣಮುಖರಾಗಿದ್ದಾರೆ. ಈ ವೃದ್ಧ ದಂಪತಿ ಮೇ 18ರಂದು ಮಂಗಳೂರಿಗೆ ಆಗಮಿಸಿದ್ದರು. ಆದರೆ, ಕ್ವಾರೆಂಟೈನ್‌ನಲ್ಲಿದ್ದ ಅವರ ಪತ್ನಿ ನೆಗೆಟಿವ್‌ ಬಂದು ಮನೆ ಸೇರಿದ್ದಾರೆ. ಪಾಸಿಟಿವ್‌ ಬಂದಿರುವ ಈ ವೃದ್ಧರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ಆರು ಬಾರಿ ಕೋವಿಡ್‌ ಸೋಂಕು ತಪಾಸಣೆ ಮಾಡಿದಾಗಲೂ ಪಾಸಿಟಿವ್‌ ಕಾಣಿಸುತ್ತಿದೆ.

ಕಾಡು ಪ್ರಾಣಿ ಎಂದು ತಿಳಿದು ಹಾರಿಸಿದ ಗುಂಡು ಗೆಳಯನಿಗೆ ಬಿತ್ತು...!

ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿರುವ ಇವರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಕುಟುಂಬಸ್ಥರಿಗೆ ಕರೆ ಮಾಡಿ ಒಂದು ಸಲ ಮನೆಗೆ ಕರೆದುಕೊಂಡು ಹೋಗಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿಯೇ ಇದ್ದ ಇವರು ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ರೆ ಬಾರದೇ ಮಾತ್ರೆ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸೋಂಕು ನೆಗೆಟಿವ್‌ ಬಾರದೇ ಮನೆಗೆ ಕಳುಹಿಸಲಾಗದೇ ವೈದ್ಯರು ಅಸಹಾಯಕರಾಗಿದ್ದಾರೆ.

ಹೋಂ ಕ್ವಾರಂಟೈನ್‌ ಚಿಕಿತ್ಸೆಗೆ ಸಿದ್ಧತೆ?:

ಈ ವಿಚಿತ್ರ ಕೇಸಿಗೆ ಹೋಂ ಕ್ವಾರಂಟೈನ್‌ ಮಾಡಿ ಅಲ್ಲಿಯೇ ಚಿಕಿತ್ಸೆ ನೀಡಿದರೆ ಹೇಗೆ ಎಂಬ ಬಗ್ಗೆ ವೈದ್ಯರು ಆಲೋಚಿಸುತ್ತಿದ್ದಾರೆ. ಕೋವಿಡ್‌ ಪೂರ್ತಿ ಕಡಿಮೆಯಾಗಿ ನೆಗೆಟಿವ್‌ ಬಾರದೆ ಡಿಸ್ಚಾಜ್‌ರ್‍ ಮಾಡುವಂತಿಲ್ಲ. ಇಲ್ಲಿಯೇ ಇದ್ದರೂ ಕೋವಿಡ್‌ ನೆಗೆಟಿವ್‌ ಬರುತ್ತಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಪರ್ಯಾಯ ಚಿಕಿತ್ಸಾ ಕ್ರಮದ ಬಗ್ಗೆ ವೈದ್ಯರು ಚಿಂತನೆ ನಡೆಸುತ್ತಿದ್ದಾರೆ. ಇವರನ್ನು ಮನೆ ಅಥವಾ ಮನೆಯ ವಾತಾವರಣದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿ ಗುಣಪಡಿಸುವತ್ತ ವೈದ್ಯರು ಆಲೋಚಿಸುತ್ತಿದ್ದಾರೆ.

40 ಜನ ಐಸಿಯುಗೆ: ರಾಜ್ಯದಲ್ಲಿ ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ!

ಈ ಇಬ್ಬರು ಹಿರಿಯ ನಾಗರಿಕರ ಬಗ್ಗೆ ತಜ್ಞರ ಜೊತೆ ಚರ್ಚಿಸಲಾಗುವುದು. ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಆದರೆ ಇದು ಅಷ್ಟುಸುಲಭವಲ್ಲ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ರಮಾನಂದ ಬಾಯರಿ ತಿಳಿಸಿದ್ದಾರೆ.

click me!