ಚಿಕ್ಕಮಗಳೂರು: ಸರ್ಕಾರಿ ಬಸ್‌ ಪರ್ಚ್ ಕಟ್, ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದ ಶಾಸಕಿ ನಯನಾ ಮೋಟಮ್ಮ

By Girish Goudar  |  First Published Sep 21, 2023, 3:15 AM IST

ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ 60 ಸೀಟ್ ಸರ್ಕಾರಿ ಬಸ್ಸಿನಲ್ಲಿ 110 ಕ್ಕೂ ಹೆಚ್ಚು ಜನ ಇದ್ದರು. ಅದರಲ್ಲಿ, ಧಾರ್ಮಿಕ ಕ್ಷೇತ್ರದ ಪ್ರವಾಸಕ್ಕೆ ಬಂದಿದ್ದ ಮಹಿಳೆಯರು ಹೆಚ್ಚು. ಬಸ್ಸು ಘಾಟಿ ರಸ್ತೆಯ ತಿರುವಿನಲ್ಲಿ ಓವರ್ ಲೋಡ್ ನಿಂದ ಸಂಚರಿಸಲಾಗದೆ ಪರ್ಚ್ (ಬ್ಲೇಡ್) ಕಟ್ ಆಗಿ ಅಲ್ಲೇ ನಿಂತಿದೆ. ಇದರಿಂದ ಹತ್ತಾರು ಮಹಿಳೆಯರು ಇಳೆ ಸಂಜೆಯಲ್ಲಿ ರಸ್ತೆ ಮಧ್ಯೆಯೇ ಕಾಲ ಕಳೆದಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ‌ಸುವರ್ಣ, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.21): ಓವರ್ ಲೋಡ್ ನಿಂದ ಸರ್ಕಾರಿ ಬಸ್ಸಿನ ಪರ್ಚ್ (ಬ್ಲೇಡ್)  ಕಟ್ ಆಗಿ ಸರ್ಕಾರಿ ಬಸ್ ರಸ್ತೆ ಮಧ್ಯ ನಿಂತು ಪ್ರಯಾಣಿಕರು ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ನಿನ್ನೆ(ಬುಧವಾರ) ನಡೆದಿದೆ. 

Latest Videos

undefined

ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ 60 ಸೀಟ್ ಸರ್ಕಾರಿ ಬಸ್ಸಿನಲ್ಲಿ 110 ಕ್ಕೂ ಹೆಚ್ಚು ಜನ ಇದ್ದರು. ಅದರಲ್ಲಿ, ಧಾರ್ಮಿಕ ಕ್ಷೇತ್ರದ ಪ್ರವಾಸಕ್ಕೆ ಬಂದಿದ್ದ ಮಹಿಳೆಯರು ಹೆಚ್ಚು. ಬಸ್ಸು ಘಾಟಿ ರಸ್ತೆಯ ತಿರುವಿನಲ್ಲಿ ಓವರ್ ಲೋಡ್ ನಿಂದ ಸಂಚರಿಸಲಾಗದೆ ಪರ್ಚ್ (ಬ್ಲೇಡ್) ಕಟ್ ಆಗಿ ಅಲ್ಲೇ ನಿಂತಿದೆ. ಇದರಿಂದ ಹತ್ತಾರು ಮಹಿಳೆಯರು ಇಳೆ ಸಂಜೆಯಲ್ಲಿ ರಸ್ತೆ ಮಧ್ಯೆಯೇ ಕಾಲ ಕಳೆದಿದ್ದಾರೆ. 

ಚಿಕ್ಕಮಗಳೂರು: ಮಹಿಳೆಯೊಂದಿಗೆ ಏಕಾಂತದಲ್ಲಿದ್ದ ವೇಳೆ ಸಿಕ್ಕಿಬಿದ್ದು ಹಿಗ್ಗಾಮುಗ್ಗಾ ಒದೆ ತಿಂದ ಡಾಕ್ಟರ್‌..!

ರಸ್ತೆಯಲ್ಲಿ ಸಾಗುವ ವೇಳೆಯಲ್ಲಿ‌ ಕಟ್ ಆದ ಬ್ಲೇಡ್ : 

ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್ಸುಗಳ ಸಂಖ್ಯೆ ತೀರಾ ಕಡಿಮೆ. ಬೆರಳೆಣಿಕೆಯಷ್ಟು ಬಸ್ ಅಷ್ಟೆ ಇರೋದು. ಬೇರೆ-ಬೇರೆ ಭಾಗದಿಂದ ಬಂದು ಕೊಟ್ಟಿಗೆಹಾರದಲ್ಲಿ ಕಾಯುತ್ತಿದ್ದ ಜನ ಬಸ್ ಬರುತ್ತಿದ್ದಂತೆ ತುಂಬಿಕೊಂಡಿದ್ದಾರೆ.  ಕೊಟ್ಟಿಗೆಹಾರದಿಂದ ಸಾಕಷ್ಟು ಮಹಿಳೆಯರು ಬಸ್ ಹತ್ತಿದ ಪರಿಣಾಮ ಕೊಟ್ಟಿಗೆಹಾರದಿಂದ 12 ಕಿ.ಮೀ. ದೂರ ಹೋಗುತ್ತಿದ್ದಂತೆ ಬಸ್ಸಿನ ಪರ್ಚ್ ಕಟ್ ಆಗಿ ಅಲ್ಲೆ ನಿಂತಿದೆ. ಬೇರೆ ಬಸ್ಸಿಲ್ಲದೆ ಜನ ರಸ್ತೆ ಬದಿ ಕೂತು ಕಾಯುತ್ತಿದ್ದರು. 

ಕಷ್ಟ ಕೇಳಿದ‌ ಶಾಸಕಿ

ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ ರಸ್ತೆ ಬದಿ ಕೂತಿದ್ದ ಮಹಿಳೆಯರ ಕಷ್ಟ ಕೇಳಿ ಕೂಡಲೇ ಕೆ.ಎಸ್.ಆರ್.ಟಿ.ಸಿ. ಡಿಸಿಗೆ ಫೋನ್ ಮಾಡಿ ಕೂಡಲೇ ಬೇರೆ ಬಸ್ ಕಳಿಸುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಬಸ್ ಬರದಿದ್ದರೆ ನನಗೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋಗಿದ್ದಾರೆ.

click me!