ಮಹಿಳೆಯರಿಗೆ ಉಚಿತ ಸಾರಿಗೆ ಸಂಚಾರ ವ್ಯವಸ್ಥೆ ಇದ್ದುದರಿಂದ ಗುರುಗುಂಟಾದಲ್ಲಿ ಬಸ್‌ಗಾಗಿ ಮಹಿಳೆಯರ ದಂಡೆ ನೆರೆದಿತ್ತು. ಗುರುಗುಂಟಾದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕಿಕ್ಕಿರಿದು ಜಮಾವಣೆಗೊಂಡಿದ್ದರು. ಬೆಳಗಿನ 6.30ಕ್ಕೆ ಬರುವ ಬಸ್‌ಗಳು ಬರಲಿಲ್ಲ. 9.30ರ ಬಳಿಕ ಬಸ್ ಬಂದಾಗ ಜನರಿಗೆ ಬಸ್ಸಿನಲ್ಲಿ ಪ್ರಯಾಣಿಸಲು ಜಾಗ ಸಿಗದೇ ಬಸ್ ಏರಲು ನೂಕು ನುಗ್ಗಲು ಉಂಟಾಯಿತು.
ಲಿಂಗಸುಗೂರು(ಜೂ.21): ರಾಷ್ಟ್ರೀಯ ಹೆದ್ದಾರಿ 150(ಎ)ಯ ಕಲಬುರಗಿ, ಸುರಪುರ ಹಾಗೂ ಲಿಂಗಸುಗೂರಿಗೆ ಬೆಳಿಗ್ಗೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೇ ಪರ ಊರುಗಳಿಗೆ ತೆರಳಲು ಅಣಿಯಾಗಿದ್ದು, ಪ್ರಯಾಣಿಕರು ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು 2 ಗಂಟೆಗೂ ಅಧಿಕ ಕಾಲ ತೀವ್ರ ಸಮಸ್ಯೆ ಎದುರಿಸಿದರು.
ಕಲಬುರಗಿ, ಯಾದಗಿರಿ, ಶಹಪುರ, ಸುರಪುರ, ದೇವದುರ್ಗ, ಲಿಂಗಸುಗೂರು, ಸಿಂಧನೂರು, ಬಳ್ಳಾರಿ, ಹೊಸಪೇಟೆ, ದಾವಣಗೇರೆ, ಹೂವಿನಹಡಗಲಿ, ಇಲಕಲ್, ಬಾಗಲಕೋಟೆ ಸೇರಿದಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಇಪತ್ತಕ್ಕೂ ಅಧಿಕ ಬಸ್‌ಗಳು ಸಂಚಾರ ಮಾಡುತ್ತವೆ. ಇದರಿಂದ ದೇವಾಪುರ ಕ್ರಾಸ್, ಶಾಂತಪೂರ, ತಿಂಥಣಿ ಬ್ರಿಜ್, ಗುರುಗುಂಟಾದಿಂದ ಶಾಲಾ-ಕಾಲೆಜುಗಳಿಗೆ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ ತೆರಳುತ್ತಾರೆ. ಆದರೆ ಬೆಳಗಿನ 6 ಗಂಟೆಯಿಂದ 9 ಗಂಟೆಯವರೆಗೂ ಬಸ್‌ಗಳು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾದು ಸುಸ್ತಾದರು. ಯಾಕೆ ಬಸ್‌ಗಳು ಬರುತ್ತಿಲ್ಲ ಎಂಬುದು ತಿಳಿಯಲಿಲ್ಲ.
undefined
ರಾಯಚೂರು: ಮಸ್ಕಿ ಬೈಪಾಸ್‌ಗೆ 180 ಕೋಟಿ ಬಿಡುಗಡೆ
ಇನ್ನು ಮಹಿಳೆಯರಿಗೆ ಉಚಿತ ಸಾರಿಗೆ ಸಂಚಾರ ವ್ಯವಸ್ಥೆ ಇದ್ದುದರಿಂದ ಗುರುಗುಂಟಾದಲ್ಲಿ ಬಸ್‌ಗಾಗಿ ಮಹಿಳೆಯರ ದಂಡೆ ನೆರೆದಿತ್ತು. ಗುರುಗುಂಟಾದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕಿಕ್ಕಿರಿದು ಜಮಾವಣೆಗೊಂಡಿದ್ದರು. ಬೆಳಗಿನ 6.30ಕ್ಕೆ ಬರುವ ಬಸ್‌ಗಳು ಬರಲಿಲ್ಲ. 9.30ರ ಬಳಿಕ ಬಸ್ ಬಂದಾಗ ಜನರಿಗೆ ಬಸ್ಸಿನಲ್ಲಿ ಪ್ರಯಾಣಿಸಲು ಜಾಗ ಸಿಗದೇ ಬಸ್ ಏರಲು ನೂಕು ನುಗ್ಗಲು ಉಂಟಾಯಿತು.
ಬಸ್‌ಗಳು ಸರಿಯಾದ ಸಮಯಕ್ಕೆ ಬರದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿನ ಅವಧಿಗೆ ತೆರಳಲು ಸಾಧ್ಯವಾಗಲಿಲ್ಲ. ನಿನ್ನೆ ಭಾನುವಾರ ರಜೆ ಇತ್ತು. ಎಂದಿನಂತೆ ಕಾಲೇಜಿಗೆ ತೆರಳಲು 7 ಗಂಟೆಯಿಂದ ಬಸ್ಸಿಗಾಗಿ ಕಾದು ಕುಳಿತಿರುವೆ ಬಸ್‌ಗಳು ಇನ್ನೂ ಬಂದಿಲ್ಲ. ದಿನಾಲು ಇಷ್ಟೊತ್ತಿಗೆ ಇಪ್ಪತ್ತು ಅಧಿಕ ಬಸ್‌ಗಳು ಬಂದು ಹೋಗುತ್ತಿದ್ದವು, ಸೋಮವಾರ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಆರಂಭವಾಗುವ ಜೊತೆಗೆ ರೈತರಿಗೆ ಗಳೆ-ಗಾಡಿ, ರಂಟೆ-ಕುಂಟೆ ಕೆಲಸಗಳು ಇರುವುದಿಲ್ಲ. ಬಿತ್ತನೆ ಸಮಯವಾದ್ದರಿಂದ ಬಿತ್ತನೆ ಬೀಜ, ಕೃಷಿ ಸಲಕರಣೆಗಳ ಖರೀದಿಗೆ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಹೋಗುತ್ತಾರೆ. ಇದರಿಂದ ಸೋಮವಾರ ರಶ್ ಇರುತ್ತದೆ. ಅದರೆ ಸಾರಿಗೆ ಇಲಾಖೆ ಸರಿಯಾದ ಸಮಯಕ್ಕೆ ಬಸ್ ಓಡಿಸುತ್ತಿಲ್ಲ ಇದರಿಂದ ಹೆದ್ದಾರಿ ಊರುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ದಂಡು ಜಮಾವಣೆಗೊಂಡು ಜನದಟ್ಟಣೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.