ಬೆಂಗಳೂರು-ಬೆಳಗಾವಿ ವಂದೇ ಎಕ್ಸ್‌ಪ್ರೆಸ್ ರೈಲಲ್ಲಿ ಕೊಟ್ಟ ವಡೆಯಲ್ಲಿ ಬೋಲ್ಟ್ ಪತ್ತೆ! ಪ್ರಯಾಣಿಕರು ಶಾಕ್!

Kannadaprabha News   | Kannada Prabha
Published : Nov 29, 2026, 07:08 AM IST
Vande Bharat Express food bolt

ಸಾರಾಂಶ

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ಖರೀದಿಸಿದ್ದ ವಡಾದಲ್ಲಿ ಬೋಲ್ಟ್ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಇದು ಪ್ರೀಮಿಯಂ ರೈಲಿನಲ್ಲಿ ಪೂರೈಸಲಾಗುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಮೂಡಿಸಿದೆ.

ಬೆಳಗಾವಿ (ನ.29): ಪ್ರೀಮಿಯಂ ರೈಲು ಎಂದೇ ಗುರುತಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌(Vande Bharat Express)ನಲ್ಲಿ ಪ್ರಯಾಣಿಕರಿಗೆ ನೀಡಿದ ಆಹಾರದಲ್ಲಿ ಬೋಲ್ಟ್(Bolt) ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಉಪಾಹಾರಕ್ಕಾಗಿ ಖರೀದಿಸಿದ್ದ ವಡಾದಲ್ಲಿ ಬೋಲ್ಟ್ ಕಂಡುಬಂದಿದ್ದು, ರೈಲಿನಲ್ಲಿ ಪೂರೈಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ.

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಘಟನೆ

ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ನ.27ರಂದು ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ಸಮರ್ಥ ಕೋಡಿಯಾಳ(Samartha Kodial) ಎಂಬುವರು ಉಪಾಹಾರಕ್ಕಾಗಿ ವಡಾ ಖರೀದಿಸಿದ್ದರು. ಅದನ್ನು ಸೇವಿಸುವ ಸಂದರ್ಭದಲ್ಲಿ ಒಳಗೆ ಬೋಲ್ಟ್ ಇರುವುದು ಕಂಡುಬಂದಿದೆ ಎನ್ನಲಾಗಿದೆ.

ವಡಾದಲ್ಲಿ ಬೋಲ್ಟ್ ಕಂಡು ಪ್ರಯಾಣಿಕರು ಶಾಕ್

ಆಹಾರದಲ್ಲಿ ಬೋಲ್ಟ್ ಕಂಡು ಪ್ರಯಾಣಿಕರು ಆಘಾತಕ್ಕೊಳಗಾಗಿದ್ದಾರೆ. ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಆಹಾರದಲ್ಲಿ ಇಂತಹ ವಸ್ತು ಪತ್ತೆಯಾಗಿರುವುದು ಆಹಾರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಆಹಾರದ ಗುಣಮಟ್ಟ ಪರಿಶೀಲನೆ ಹಾಗೂ ಪೂರೈಕೆಯ ಮೇಲ್ವಿಚಾರಣೆ ಸರಿಯಾಗಿ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಘಟನೆಯಿಂದ ಅಸಮಾಧಾನಗೊಂಡ ಸಮರ್ಥ ಕೋಡಿಯಾಳ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ರೈಲ್ವೆ ಇಲಾಖೆಯ ಗಮನ ಸೆಳೆದಿದ್ದಾರೆ. ವಂದೇ ಭಾರತ್‌ನಂತಹ ಪ್ರೀಮಿಯಂ ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಆಹಾರ ಪೂರೈಕೆಯಲ್ಲಿ ಕಟ್ಟುನಿಟ್ಟಿನ ಗುಣಮಟ್ಟದ ಪರಿಶೀಲನೆ ಅಗತ್ಯವಾಗಿದೆ. ಆಹಾರದಲ್ಲಿ ಬೋಲ್ಟ್ ಪತ್ತೆಯಾಗಿರುವ ಘಟನೆಗೆ ಯಾರು ಹೊಣೆ? ಆಹಾರ ಪೂರೈಕೆಗೂ ಮುನ್ನ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ರೈಲ್ವೆ ಇಲಾಖೆ ಘಟನೆ ಕುರಿತು ಪರಿಶೀಲನೆ ನಡೆಸಿ, ಲೋಪ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಲೀಟರ್‌ಗೆ ಎಷ್ಟು ಕಡಿತ? ಪರಿಷ್ಕೃತ ದರಪಟ್ಟಿ ವಿವರ ಇಲ್ಲಿದೆ
ದೇವಸ್ಥಾನಕ್ಕೆ ಬೀಗ ಹಾಕಿದ್ದಾಯ್ತು, ಈಗ ನಿಖಿಲ್ ಭೇಟಿ ವೇಳೆಯೇ ಕರೆಂಟ್ ಕಟ್!