ಬಿಜೆಪಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪರಮಾಪ್ತ : ಅವಸರ ಸರಿಯಲ್ಲವೆಂದ್ರು ಶಾಸಕ

By Kannadaprabha NewsFirst Published Oct 20, 2020, 11:49 AM IST
Highlights

ಪಕ್ಷವೇ ಬೇರೆ ವೈಯಕ್ತಿಕ ಸಂಬಂಧವೇ ಬೇರೆ, ಸ್ನೇಹಕ್ಕಾಗಿ ಪಕ್ಷ ನಿಷ್ಠೆ ಬಿಡಲಸಾಧ್ಯ ಎಂದು ಯತೀಂದ್ರ ಸಿದ್ದರಾಮಯ್ಯ

ತುಮಕೂರು (ಅ.20) :  ಬಿಜೆಪಿ ಅಭ್ಯರ್ಥಿ ರಾಜೇಶಗೌಡ ನನ್ನ ಆಪ್ತ ಸ್ನೇಹಿತರೇ ಆದರೂ ವೈಯಕ್ತಿಕ ಸಂಬಂಧಗಳೇ ಬೇರೆ ರಾಜಕೀಯವೇ ಬೇರೆ ಎಂದು ಯತೀಂದ್ರ ಸ್ಪಷ್ಟಪಡಿಸಿದರು.

ಅವರು ಶಿರಾ ತಾಲೂಕು ಗೌಡಗೆರೆಯಲ್ಲಿ ಕೈ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದರು. ಅವರು ಸ್ನೇಹಿತರಾಗಿದ್ದಾಗ ಅವರ ತಂದೆ ಕಾಂಗ್ರೆಸ್‌ನಿಂದ ಲೋಕಸಭಾ ಸದಸ್ಯರಾಗಿದ್ದರು ಎಂದರು. ನಾವಿಬ್ಬರೂ ಲ್ಯಾಬ್‌ ಕೂಡ ಜೊತೆಗೆ ಮಾಡಿದ್ದೆವು. ಆಮೇಲೆ ಇಬ್ಬರು ಆಚೆ ಬಂದಿವಿ.

ಉಪ ಚುನಾವಣೆ : ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಅಭ್ಯರ್ಥಿ ಮುನಿರತ್ನ

ಶಿರಾ ಉಪಚುನಾವಣೆಗೆ ಕಾಂಗ್ರೆಸ್‌ ನಿಂದ ಟಿಕೆಚ್‌ ಕೊಡಿ ಅಂತಾ ರಾಜೇಶಗೌಡ ಕೇಳಿಕೊಂಡಿದ್ದರು. ಆದರೆ ಜಯಚಂದ್ರ ಅವರು ನಮ್ಮ ಹಿರಿಯರು. ಅವರೇ ಅಭ್ಯರ್ಥಿ ಅಂತ ಹೇಳಿದ್ವಿ ಎಂದರು.

ಟಿಕೆಟ್‌ ಕೊಡುವುದಕ್ಕೆ ಆಗುವುದಿಲ್ಲ. ಪಕ್ಷಕ್ಕೆ ಸೇರಿ ಕೆಲಸ ಮಾಡಿ ಅಂತಾ ರಾಜೇಶಗೌಡರಿಗೆ ಹೇಳಿದ್ವಿ. ಅವರಿಗೆ ಅವಸರಕ್ಕೆ ಟಿಕೆಟ್‌ ಬೇಕಿತ್ತು, ಹಾಗಾಗಿ ಬಿಜೆಪಿ ಸೇರಿದರು ಎಂದ ಅವರು ಸ್ನೇಹಿತರು ಅನ್ನುವ ಕಾರಣಕ್ಕೆ ಪಕ್ಷ ನಿಷ್ಠೆ ಬಿಡುವುದಕ್ಕೆ ಆಗುವುದಿಲ್ಲ ಎಂದರು.

click me!