ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇನ್ನೂ ನಾಲ್ಕು ದಿನಗಳ ಕಾಲ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಅ.20): ನಗರದಲ್ಲಿ ಮಳೆ ಆರ್ಭಟ ಮತ್ತೆ ಜೋರಾಗಿದ್ದು, ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಸುರಿದಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ.
ನಗರದಲ್ಲಿ ಎರಡು ದಿನದಿಂದ ಮೋಡ ಕವಿದ ಮತ್ತು ಚಳಿಯ ವಾತಾವರಣವಿದ್ದು, ಅ.23ರವರೆಗೂ ಮಳೆ ಬೀಳಲಿದೆ. ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ಮುನ್ಸೂಚನೆ ನೀಡಿದೆ.
undefined
ಸೋಮವಾರ ಬೆಳಗ್ಗೆಯಿಂದಲೆ ಮೋಡ ಮುಸುಕಿನ ವಾತಾವರಣ ಇತ್ತು. ಕೆಲವು ಬಡಾವಣೆಗಳಲ್ಲಿ ತುಂತುರು ಮಳೆ ಸುರಿದಿದ್ದು, ದೊಡ್ಡ ಪ್ರಮಾಣದಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ.
ಧಾರಾಕಾರ ಮಳೆ ಸುರಿದಿದೆ
ಮಳೆಯಿಂದ ಕೆ.ಆರ್.ವೃತ್ತ, ಬ್ರಿಯಾಂಡ್ ಚಚ್‌ರ್ ವೃತ್ತ, ಓಕಳಿಪುರಂ ಮತ್ತು ಶಿವಾನಂದ ಅಂಡರ್‌ಪಾಸ್ ಸೇರಿ ಕೆಲ ರಸ್ತೆಗಳು ಕೆರೆಯಂತಾಗಿದ್ದವು. ಮಲ್ಲತ್ತಹಳ್ಳಿ ಎನ್‌ಜಿಎಫ್ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ಬಡಾವಣೆಯಿಂದ ನೀರು ಹರಿದು ಹೋಗುವ ಸ್ಥಳದಲ್ಲಿ ಅಪಾರ್ಟ್‌ಮೆಂಟ್ ಕಟ್ಟಿದ್ದರಿಂದ ಮಳೆ ನೀರು ಬಡಾವಣೆಯನ್ನು ತುಂಬಿಕೊಳ್ಳುತ್ತದೆ. ಸುಮಾರು 10ಕ್ಕೂ ಅಧಿಕ ಮನೆಗಳಿಗೆ ಕೊಳಚೆ ಸಹಿತ ಮಳೆ ನೀರು ತುಂಬಿಕೊಂಡಿತ್ತು. ಮನೆ ಮಂದಿಯಲ್ಲಾ ಜಾಗರಣೆ ಮಾಡಿದರು.