ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸೋಮವಾರ ಒಕ್ಕಲಿಗ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ( ನ. 0 8 ) : ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸೋಮವಾರ ಒಕ್ಕಲಿಗ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಒಕ್ಕಲಿಗ ಮುಖಂಡರ ಬ್ಯಾಟರಂಗೇಗೌಡ ಮಾತನಾಡಿ, ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತಾವಧಿ 2022ರ ಮಾಚ್ರ್ 31ಕ್ಕೆ ಪೂರ್ಣಗೊಂಡಿದ್ದು, ಸಹಕಾರ ಇಲಾಖೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದ ಕಾರಣ ಕರ್ನಾಟಕ ಹೈಕೋರ್ಚ್ ಸದರಿ ಆಡಳಿತಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಆದೇಶ ಮಾಡಿದೆ. ಹೈಕೋರ್ಟಿನ ಆದೇಶವನ್ನು ನೆಪವಾಗಿಟ್ಟುಕೊಂಡು 2008-09ನೇ ಸಾಲಿನಿಂದಲೂ ಸುಮಾರು 22 ಸಾವಿರ ಜನರು ಷೇರು ಹಣ ಹೂಡಿಕೆ ಮಾಡಿ, ಸದಸ್ಯತ್ವಕ್ಕಾಗಿ ಕಾಯುತ್ತಿದ್ದರೂ ಅವರಿಗೆ ಸದಸ್ಯತ್ವ ನೀಡದೆ ಕೆಲವು ವ್ಯಕ್ತಿಗಳ ಕಡೆಯಿಂದ ಶಿಫಾರಸ್ಸಾಗಿ ಇತ್ತೀಚೆಗೆ ಷೇರು ಶುಲ್ಕ ತುಂಬಿರುವ 500 ಜನರಿಗೆ ಮಾತ್ರ ಸದಸ್ಯತ್ವ ನೀಡಿ, ಅವರನ್ನೇ ಮತದಾರರೆಂದು ಘೋಷಿಸಿ, ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದಿದ್ದಾರೆ.
ಬೆಳ್ಳಿ ಬ್ಲಡ್ ಬ್ಯಾಂಕ್ನ ಬೆಳ್ಳಿ ಲೋಕೇಶ್ ಮಾತನಾಡಿ, ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವ್ಯಕ್ತಿ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಮತದಾರರ ಕರಡು ಪಟ್ಟಿಗೆ ಸುಮಾರು 125ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಒಂದಕ್ಕೂ ಉತ್ತರ ನೀಡಿಲ್ಲ. ನ್ಯಾಯಾಲಯದ ನಿಗದಿಪಡಿಸಿದ್ದ ಅವಧಿ ಮುಗಿಯುತ್ತಾ ಬಂದಿದ್ದರೂ, ನ್ಯಾಯಾಲಯಕ್ಕೆ ಹೆಚ್ಚಿನ ಕಾಲಾವಕಾಶಕ್ಕೆ ಅರ್ಜಿ ಸಲ್ಲಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಳೆದ 10-12 ವರ್ಷಗಳಿಂದ ಸದಸ್ಯತ್ವಕ್ಕಾಗಿ ಷೇರು ಹಾಕಿ ಕಾಯುತ್ತಿರುವ ಆರ್ಹ ಒಕ್ಕಲಿಗ ಜನಾಂಗದ ವ್ಯಕ್ತಿಗಳಿಗೆ ಅನ್ಯಾಯವಾಗಲಿದೆ. ಕೂಡಲೇ ಆಡಳಿತಾಧಿಕಾರಿಯನ್ನು ವಜಾ ಮಾಡಿ, ಬೇರೊಬ್ಬರನ್ನು ನೇಮಕ ಮಾಡಿ, ಚುನಾವಣಾ ಪ್ರಕ್ರಿಯೆಯನ್ನು ಮೊದಲಿನಿಂದ ಪ್ರಾರಂಭಿಸಬೇಕು. ಅರ್ಹರಿಗೆ ಸದಸ್ಯತ್ವ ನೀಡಿ, ಅವರಿಗೂ ಮತ ಹಾಕುವ ಹಕ್ಕು ನೀಡಿದ ನಂತರವೇ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ದೇವಪ್ರಕಾಶ್, ವಕೀಲರಾದ ರವಿಗೌಡ, ಚಿಕ್ಕರಂಗಣ್ಣ, ಕೆಂಪರಾಜು, ಕೈದಾಳ ರಮೇಶ್, ಸತ್ಯಪ್ಪ, ವಿಜಯಕುಮಾರ್, ಮಂಜುನಾಥಗೌಡ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸಕುಮಾರ್, ಮನೋಹರಗೌಡ, ಲಕ್ಕೇಗೌಡ, ಕುಣಿಗಲ್ ಶ್ರೀನಿವಾಸಗೌಡ, ಚಿಕ್ಕಸಾರಂಗಿ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆಡಳಿತಾಧಿಕಾರಿಯನ್ನು ವಜಾಗೊಳಿಸಲು ಒತ್ತಾಯ
ಒಕ್ಕಲಿಗ ಮುಖಂಡರ ಒತ್ತಾಯದಂತೆ ಮನವಿ ಸ್ವೀಕರಿಸಲು ತುಮಕೂರು ಉಪವಿಭಾಗಾಧಿಕಾರಿ ಅಜಯ್ ಅವರೊಂದಿಗೆ ಆಗಮಿಸಿದ, ಸಹಕಾರ ಇಲಾಖೆಯ ಡಿ.ಆರ್.ಎನ್.ವೆಂಕಟೇಶ್ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಒಕ್ಕಲಿಗ ಮುಖಂಡರು, ಆಡಳಿತಾಧಿಕಾರಿಗಳೊಂದಿಗೆ ನೀವು ಸಹ ಸೇರಿ ಅರ್ಹರಿಗೆ ಸದಸ್ಯತ್ವ ನೀಡದೆ ಅನ್ಯಾಯ ಮಾಡುತ್ತಿದ್ದೀರಿ. ಮೊದಲು ಆಡಳಿತಾಧಿಕಾರಿಯನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು. ಈ ವೇಳೆ ಕೆಲ ಕಾಲ ಅಧಿಕಾರಿಯೊಂದಿಗೆ ಜೋರು ಮಾತಿನಲ್ಲಿಯೇ ವಾಗ್ವಾದಕ್ಕಿಳಿದರು. ಉಪವಿಭಾಗಾಧಿಕಾರಿ ಅಜಯ್ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ, ಮುಂದಿನ ಎರಡು ದಿನದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ಒಕ್ಕಲಿಗ ಮುಖಂಡರು ಸಭೆ ಕರೆದು ಚರ್ಚೆ ನಡೆಸಿ,ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.
ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ
ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸುವಂತೆ ಒತ್ತಾಯ