ಧಾರವಾಡ: ಇದು ಕಚೇರಿನಾ? ಪಾರ್ಕಿಂಗ್ ಜೋನಾ? ಜಿಲ್ಲಾಧಿಕಾರಿಗಳೇ ಏನಿದು ಅವ್ಯವಸ್ಥೆ?

By Ravi Janekal  |  First Published Mar 4, 2024, 1:18 PM IST

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಅಡ್ಡಾದಿಡ್ಡಿ ನಿಂತಿರುವ ಸರ್ಕಾರಿ ವಾಹನಗಳು. ಇದರಿಂದ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಓಡಾಡಲು ಸ್ಥಳವಿಲ್ಲದೆ ದಿನನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಧಾರವಾಡ ಜಿಲ್ಲಾಧಿಕಾರಿಗಳೇ ಈ ಸಮಸ್ಯೆ ಬಗೆಹರಿಸಿ ಎಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ.


 ಧಾರವಾಡ (ಮಾ.4): ವಿದ್ಯಾಕಾಶಿ ಧಾರವಾಡ ಸಣ್ಣ ಜಿಲ್ಲೆ, ಅದರಲ್ಲೂ ಪ್ರಮುಖವಾಗಿ ಧಾರವಾಡ ಎಂದರೆ ವಿದ್ಯಾವಂತರ ನಾಡು, ಸಾಹಿತಿಗಳ ನಾಡು ಎಂದೇ ಪರಿಚಿತ. ಆದರೆ ಇಲ್ಲಿನ ಕೆಲ ಸರಕಾರಿ ಅಧಿಕಾರಿಗಳು ಅವಿದ್ಯಾವಂತರಂತೆ ಕೆಲಸ ಮಾಡ್ತಾ ಇದ್ದಾರೆ ಎಂದರೆ ತಪ್ಪಾಗಲಾರದು. 

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾ ನೋಡಿದರೆ ಇದು ಜಿಲ್ಲಾಧಿಕಾರಿಗಳ ಕಚೇರಿನಾ? ಅಥವಾ ಕಾರ್ ಪಾರ್ಕಿಂಗ್ ಜೋನಾ  ಎಂದು ಕೆಲಸ ಪ್ರಜ್ಞಾವಂತರು ಮಾತನಾಡುವ ಪರಿಸ್ಥಿತಿ ಎದುರಾಗಿದೆ.

Latest Videos

undefined

ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದಿವ್ಯ ಪ್ರಭು ನೇಮಕವಾದಾಗಿನಿಂದಲೂ ಜಿಲ್ಲೆಯ ಎಲ್ಲ ಇಲಾಖೆಯಗಳ ಅಧಿಕಾರಿಗಳ ಸಭೆ ಕರೆದು ಬರ ನಿರ್ವಹಣೆಗೆ ಮೀಟಿಂಗ್ ಮೆಲೆ ಮೀಟಿಂಗ್ ನಡೆಸುವ ಮೂಲಕ ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೇರೆ ಬೇರೆ ತಾಲೂಕಿನಿಂದ ಬಂದ ಸರಕಾರಿ ಅಧಿಕಾರಿಗಳ ವಾಹನಗಳನ್ನ ಎಲ್ಲೆಂದರಲ್ಲೇ ಪಾರ್ಕ ಮಾಡುತ್ತಿದ್ದಾರೆ. ಇದರಿಂದ ಅಪಘಾತಗಳು ಆಗ್ತಾ ಇವೆ. ಯಾವ ಸರಕಾರಿ ಅಧಿಕಾರಿಗಳು ರೂಲ್ಸ್ ಪಾಲನೆ ಮಾಡುತ್ತಿಲ್ಲ. ದಿನನಿತ್ಯ ಕಾರು, ಬೈಕ್ ಅಪಘಾತ ಸಂಭವಿಸುತ್ತಿವೆ.

ಜಿಲ್ಲಾಧಿಕಾರಿ ಕಚೇರಿಯಿಂದ 50 ಅಡಿ ದೂರದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ವಾರ್ತಾ ಇಲಾಖೆ, ಜಿಲ್ಲಾ ಪಂಚಾಯತ ಕಚೇರಿ ಇವೆಲ್ಲವೂ ಕೇವಲ 50 ಅಡಿಯಲ್ಲಿ ಇರುವುದರಿಂದ ಪ್ರತಿ ದಿನ ನೂರಾರು ಜನರು ತಮ್ಮ ತಮ್ಮ‌ಕೆಲಸಗಳಿಗೆ ಬರ್ತಾರೆ. ಆಫೀಸ್‌ಗಳಿಗೆ ಎಡತಾಕುತ್ತಾರೆ. ಈ ವೇಳೆ ವಾಹನಗಳ ಓಡಾಟ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ಪಾರ್ಕಿಂಗ್ ಮಾಡಲು ಸಹ ಸ್ಥಳವಿಲ್ಲದಂತಾಗಿದೆ. ರಸ್ತೆಯುದ್ದಕ್ಕೂ ಸರ್ಕಾರಿ ವಾಹನಗಳದ್ದೇ ಕಾರುಬಾರು. ಪಾರ್ಕಿಂಗ್ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುವ ವಾಹನಗಳನ್ನ ಸರ್ಕಿಟ್‌ ಹೌಸ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಪಾರ್ಕಿಂಗ್ ಸಮಸ್ಯೆ ಕಡಿಯಾಗುತ್ತೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಸರ್ಕಾರಿ ವಾಹನಗಳಿಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಸಾರ್ವಜನಿಕರು ನಿರಾಳರಾಗುತ್ತಾರೆ. ದಿನನಿತ್ಯ ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಂತ ಸರ್ಕಾರಿ ವಾಹನಗಳಿಂದ ಸಾರ್ವಜನಿಕರು ಅಪಘಾತಕ್ಕೆ ಬಲಿಯಾಗುವುದು ತಪ್ಪುತ್ತದೆ.

ಇನ್ಮುಂದೆಯಾದ್ರೂ ಜಿಲ್ಲಾಧಿಕಾರಿಗಳು ಪಾರ್ಕಿಂಗ್ ಅವ್ಯವಸ್ಥೆಯನ್ನ ಸರಿ ಮಾಡ್ತಾರಾ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕು. ಧಾರವಾಡ ಜಿಲ್ಲಾಧಿಕಾರಿಗಳು ಖಡಕ್ ಅಧಿಕಾರಿಯಾಗಿರೋದರಿಂದ ಶೀಘ್ರ ಕ್ರಮ ಕೈಗೊಳ್ಳುತ್ತಾರೆಂಬ ಆಶಾಭಾವನೆ ಸಾರ್ವಜನಿಕರದ್ದು.

click me!