ವಿಪರೀತ ಹೆಚ್ಚಿದ ತರಕಾರಿ ಬೆಲೆ: ಗ್ರಾಹಕ ತತ್ತರ..!

Published : Jun 14, 2023, 06:34 AM ISTUpdated : Jun 14, 2023, 06:36 AM IST
ವಿಪರೀತ ಹೆಚ್ಚಿದ ತರಕಾರಿ ಬೆಲೆ: ಗ್ರಾಹಕ ತತ್ತರ..!

ಸಾರಾಂಶ

ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ ಮಾರುಕಟ್ಟೆ ಜೊತೆಗೆ ಅಷ್ಟೇ ಅಲ್ಲ ಹಾಪ್‌ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ವಿಪರೀತವಾಗಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬೆಂಗಳೂರು(ಜೂ.14):  ಇತ್ತೀಚೆಗೆ ಸುರಿದ ಮಳೆ ತರಕಾರಿಗಳು ಕೊಳೆತು ನಾಶವಾಗಿರುವ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ತರಕಾರಿ ದರ ಗಣನೀಯವಾಗಿ ಏರಿಕೆಯಾಗಿದ್ದರೆ, ಬೇಸಿಗೆಯ ಪರಿಣಾಮ ಹೆಚ್ಚಾಗಿದ್ದ ಮೊಟ್ಟೆಯ ದರ ಹಾಗೆಯೇ ಮುಂದುವರಿದಿದೆ. ಮುಂದಿನ ಎರಡು ತಿಂಗಳ ಕಾಲ ಇದೇ ದರ ಮುಂದುವರಿವ ಸಾಧ್ಯತೆ ಇದೆ.

ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ ಮಾರುಕಟ್ಟೆ ಜೊತೆಗೆ ಅಷ್ಟೇ ಅಲ್ಲ ಹಾಪ್‌ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ವಿಪರೀತವಾಗಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ನಗರಕ್ಕೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ ತರಕಾರಿ ಪೂರೈಕೆ ಆಗುತ್ತದೆ. ಗಡಿಭಾಗ ತಮಿಳುನಾಡಿನ ಹೊಸೂರಿನಿಂದಲೂ ತರಕಾರಿ ಬರುತ್ತದೆ. ಆದರೆ, ಮಳೆಯ ಕಾರಣದಿಂದ ತರಕಾರಿಗಳು ಕೊಳೆತು ನಾಶವಾಗಿವೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಹಾಪ್‌ಕಾಮ್ಸ್‌ಗೆ ಊಟಿ ಸೇರಿ ಇತರ ಪ್ರದೇಶದಿಂದ ತರಕಾರಿ ಬರುತ್ತಿವೆ. ಸಾಗಾಣಿಕ ವೆಚ್ಚ ಹೆಚ್ಚಾಗುವುದರಿಂದ ಬೆಲೆ ಏರಿಕೆಯಾಗಿದೆ.

Bengaluru News: ನಗರದಲ್ಲಿ ಬೇಸಿಗೆಗೂ ಮುನ್ನ ತರಕಾರಿ ಬೆಲೆ ಗಗನಮುಖಿ..!

ಕೆ.ಆರ್‌.ಮಾರುಕಟ್ಟೆಯಲ್ಲಿ ಕಳೆದೊಂದು ತಿಂಗಳ ಹಿಂದೆ ಒಂದು ಕೇಜಿಗೆ .40​-.50ಕ್ಕೆ ಮಾರಾಟವಾಗುತ್ತಿದ್ದ ಬೀನ್ಸ್‌ ಈಗ .80 ದಾಟಿದೆ. .35 ಇದ್ದ ಬದನೆಕಾಯಿ .60-.80 ಇದೆ. ಅದೇ ರೀತಿ ಬಿಟ್‌ರೂಟ್‌ .30ರಿಂದ .50ಕ್ಕೆ ಏರಿಕೆಯಾಗಿದೆ. ನುಗ್ಗೆಕಾಯಿ .40ರಿಂದ .80ಕ್ಕೆ ಏರಿಕೆಯಾಗಿದೆ. ಬೆಂಡೆಕಾಯಿ .20ದಿಂದ .40-50ವರೆಗೆ ಹಾಗೂ ಕ್ಯಾರೆಟ್‌ .50ಕ್ಕೆ ಮಾರಾಟವಾಗುತ್ತಿದೆ.

ಶುಂಠಿ ದ್ವಿಶತಕ

ಮಾಚ್‌ರ್‍ ತಿಂಗಳ ಕೊನೆಯಲ್ಲಿ ಕೇಜಿಗೆ .100 ಇದ್ದ ಹಸಿಶುಂಠಿ ಬೆಲೆ ಸದ್ಯ ದ್ವಿಶತಕ ಮೀರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ .220 ರವರೆಗೆ ಹಸಿಶುಂಠಿ ಬೆಲೆ ಇದೆ. ಯಶವಂತಪುರ ಎಪಿಎಂಸಿಯಲ್ಲೇ .150-180 ಸಗಟು ಬೆಲೆಯಿದೆ. ಹಾಪ್‌ಕಾಮ್ಸ್‌ನಲ್ಲಿ ಒಂದು ಕೇಜಿ ಹಸಿಶುಂಠಿಗೆ ಗುರುವಾರ .235 ಬೆಲೆಯಿತ್ತು.

ಹೆಚ್ಚಿದ ಮೊಟ್ಟೆ ದರ

ಬೇಸಿಗೆಯಿಂದ ಉತ್ಪಾದನೆ ಕುಸಿತ, ಕೋಳಿ ಆಹಾರ ದರ ಏರಿಕೆ ಕಾರಣದಿಂದ ಮೊಟ್ಟೆಬೆಲೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಕೋಳಿಗಳು ಆಹಾರ ತಿನ್ನುವುದಕ್ಕಿಂತ ಹೆಚ್ಚು ನೀರು ಕುಡಿಯುತ್ತವೆ. ಇದರಿಂದ ಕೋಳಿಗಳ ಮೊಟ್ಟೆಇಡುವುದು ಕಡಿಮೆಯಾಗಿದೆ. ತಮಿಳುನಾಡಿನ ನಾಮಕ್ಕಲ್‌ನಿಂದ ರಾಜ್ಯಕ್ಕೆ ಮೊಟ್ಟೆಬರುತ್ತಿದೆ. ಮೊದಲು ಒಂದು ಮೊಟ್ಟೆಸಾಗಾಟಕ್ಕೆ 16-17 ಪೈಸೆ ವೆಚ್ಚ ತಗಲುತ್ತಿತ್ತು. ಈಗ 20-21 ಪೈಸೆಗೆ ಏರಿಕೆಯಾಗಿದೆ. ಹೀಗಾಗಿ, ಕೋಳಿ ಮೊಟ್ಟೆದರ ಏರಿಕೆಯಾಗಿದೆ ಎಂದು ನ್ಯಾಷನಲ್‌ ಎಗ್‌ ಕೋ ಆರ್ಡಿನೇಷನ್‌ ಕಮಿಟಿ ತಿಳಿಸಿದೆ.

ಬೀನ್ಸ್, ಟೊಮೆಟೋ ಬೆಲೆ ಕುಸಿತ; ರೈತರು ಕಂಗಾಲು!

ಪ್ರಸ್ತುತ ಮೊಟ್ಟೆಯ ಸಗಟು ಮಾರುಕಟ್ಟೆಯಲ್ಲಿ ಒಂದಕ್ಕೆ .5.65 ಇದೆ. ಚಿಲ್ಲರೆ ಮಾರಾಟಗಾರರು ಒಂದು ಮೊಟ್ಟೆಯನ್ನು .6.50​​ರಿಂದ .7ಕ್ಕೆ ಮಾರುತ್ತಿದ್ದಾರೆ ಎಂದು ಕರ್ನಾಟಕ ಕುಕ್ಕುಟ ಮಹಾಮಂಡಳಿ ತಿಳಿಸಿದೆ.

ತರಕಾರಿ ದರ (ಕೇಜಿ- ಹಾಪ್‌ಕಾಮ್ಸ್‌)

ಬೀನ್ಸ್‌ .125
ಮೂಲಂಗಿ .46
ಗುಂಡುಬದನೆ .78
ಟೊಮೆಟೋ .46
ಬಟಾಣಿ ಕಾಳು .148
ಬ್ರೊಕೋಲಿ .200
ನವಿಲುಕೋಸು .63
ನುಗ್ಗೆಕಾಯಿ .80
ಕೊತ್ತಂಬರಿ ಸೊಪ್ಪು .106
ಬೆಂಡೆಕಾಯಿ .54

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು