ಶಾಲೆಗಳ ಆರಂಭಕ್ಕೆ ಪೋಷಕರ ವಿರೋಧ

By Kannadaprabha NewsFirst Published Oct 4, 2020, 9:30 AM IST
Highlights

ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುವುದಕ್ಕೆ ಪೋಷಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ

ಕೋಲಾರ (ಅ.04):  ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಹಾವಳಿ ಕಡಿಮೆ ಆಗಿಲ್ಲ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆಗೆಯುವುದು ಸರಿಯಲ್ಲ. ಶಾಲೆ ತೆರೆಯುವ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸುವ ವೇಳೆ ಶೇ.60 ರಿಂದ 70 ರಷ್ಟುಮಂದಿ ಪೋಷಕರು ಶಾಲೆಗಳನ್ನು ಅವಸರದಿಂದ ತೆರೆಯುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಖಾಸಗಿ ಶಾಲೆಗಳ ಒತ್ತಡಕ್ಕೆ ಬಿದ್ದು ಶಾಲೆಗಳನ್ನು ತೆರೆಯುವ ದುಸ್ಸಾಹಸಕ್ಕೆ ಕೈಹಾಕಿದರೆ ದೊಡ್ಡ ಅನಾಹುತ ಉಂಟಾಗುವ ಸಾಧ್ಯತೆಗಳಿವೆ. ಕೊರೊನಾ ಬಗ್ಗೆ ನಮ್ಮಲ್ಲಿ ಇನ್ನೂ ಸರಿಯಾದ ಜಾಗೃತಿ ಇಲ್ಲದಾಗಿದೆ, ದೇಶದಲ್ಲಿ ಕೊರೋನಾ ಸಂಖ್ಯೆ ಲಕ್ಷ ಗಟ್ಟಲೆ ಏರುತ್ತಲೇ ಇದೆ, ಆದರೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಬಳಸುವವರ ಸಂಖ್ಯೆಯೂ ಕಡಿಮೆ.

"

ಶಾಲೆಗಳನ್ನು ಆರಂಭಿಸಲು ವಿರೋಧ

ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ಸರಿಯಾಗಿ ಬಳಸದೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸದ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಮಂತ್ರಿಯೂ ಸೇರಿದಂತೆ ಕೆಲವು ಸಂಸದರು, ಶಾಸಕರು ಪ್ರಾಣ ಕಳೆದು ಕೊಂಡಿದ್ದಾರೆ. ಈ ಸಾವುಗಳ ಹಿನ್ನೆಲೆಯಲ್ಲೇ ಕೇಂದ್ರದಲ್ಲಿ ಸಂಸತ್‌ ಮತ್ತು ರಾಜ್ಯದಲ್ಲಿ ಸದನಗಳನ್ನು ರದ್ಧುಗೊಳಿಸಲಾಗಿದೆ. ಕೊರೊನಾ ಭಯದಿಂದ ಸಂಸತ್‌ ಮತ್ತು ಸದನವನ್ನು ರದ್ದುಗೊಳಿಸಿರುವ ಸರ್ಕಾರಗಳು ಶಾಲೆಗಳನ್ನು ತೆರೆಯುವ ಹುಚ್ಚಾಟಕ್ಕೆ ಕೈ ಹಾಕುವುದು ಒಳ್ಳೆಯದಲ್ಲ ಎಂಬುದು ಪೋಷಕರ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಮಹತ್ವದ ಮಾಹಿತಿ ನೀಡಿದ ಸಚಿವರು ..

ನಮ್ಮ ಮಕ್ಕಳಿಗೆ ಒಂದು ವರ್ಷ ಶಾಲೆಯಲ್ಲಿ ಕಲಿಕೆ ಇಲ್ಲದಿದ್ದರೂ ಪರವಾಗಿಲ್ಲ, ಮಕ್ಕಳು ಈ ವರ್ಷ ಓದದೆ ಇದ್ದರೂ ಪರವಾಗಿಲ್ಲ, ನಾವು ನಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸುವುದಿಲ್ಲ. ನಮಗೆ ಮಕ್ಕಳ ಪ್ರಾಣಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ ಬೇಕು ಹಾಗಂತ ಅವರ ಪ್ರಾಣಕ್ಕೆ ಕುತ್ತು ಬರುವ ಸಂದರ್ಭದಲ್ಲಿ ಅವರನ್ನು ಶಾಲೆಗೆ ಕಳಿಸಿ ಓದಿಸಬೇಕೆನ್ನುವುದೇನು ನಮಗಿಲ್ಲ ಎನ್ನುತ್ತಾರೆ ಪೋಷಕರು.

ಸೋಂಕು ನಿಯಂತ್ರಣಕ್ಕೆ ಬಂದಿಲ್ಲ

2020 ನೇ ವರ್ಷವನ್ನು ಶೂನ್ಯ ವರ್ಷವೆಂದು ಘೋಷಣೆ ಮಾಡಿದ್ದು ಆಗಿದೆ, ಈಗಾಗಲೇ 7 ತಿಂಗಳು ದಾಟಿ 8 ನೇ ತಿಂಗಳಿಗೆ ಕಾಲಿಟ್ಟಿದ್ದೇವೆ ಇನ್ನು ಮೂರು ತಿಂಗಳು ಕೊರೊನಾ ಸೋಂಕು ಕಡಿಮೆ ಆಗುವ ಯಾವ ಸೂಚನೆಗಳೂ ಇಲ್ಲ, ಜತೆಗೆ ಕೊರೊನಾಗೆ ಕಳೆದ ಒಂದು ವರ್ಷದಿಂದಲೂ ಯಾವುದೇ ಔಷಧವನ್ನೂ ಕಂಡು ಹಿಡಿಯಲೂ ಸಾಧ್ಯವಾಗಿಲ್ಲ ಇಂತಹ ಸಂದರ್ಭದಲ್ಲಿ ಅಪಾಯದ ಸನ್ನಿವೇಶಗಳಲ್ಲಿ ಶಾಲೆ ಯಾಕೆ ತೆಗೆಯಬೇಕು ಎನ್ನುವುದು ಪೋಷಕರ ಪ್ರಶ್ನೆಯಾಗಿದೆ.

ಖಾಸಗಿ ಶಾಲೆಗಳ ಲಾಬಿ:

ಶಾಲೆಗಳು ಬೇಕಾಗಿರುವುದು ಮಕ್ಕಳಿಗೆ, ಅದರ ಜವಾಬ್ದಾರಿ ಇರುವುದು ಪೋಷಕರಿಗೆ ಆದರೆ ಸರ್ಕಾರ ಯಾಕೆ ಇಷ್ಟೊಂದು ಅವಸರ ಪಡುತ್ತಿದೆ ಎಂದು ಪ್ರಶ್ನೆ ಮಾಡುವ ಪೋಷಕರು, ಇದೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡ, ಅವರ ಒತ್ತಡ ಮತ್ತು ಲಾಭಿಯಿಂದಾಗಿ ಸರ್ಕಾರ ಶಾಲೆಗಳನ್ನು ತೆರೆಯುವ ಅವಸರ ಮಾಡುತ್ತಿದೆ ಎಬುದು ಪೋಷಕರ ಆರೋಪ.

ಕರ್ನಾಟಕ ರಾಜ್ಯದಲ್ಲಿ ಸೋಂಕಿತರ 6 ಲಕ್ಷ ದಾಟಿದೆ, ಮೃತ ಪಟ್ಟವರ ಸಂಖ್ಯೆ 9119. ಹೀಗೆ ಪ್ರತಿದಿನ ನೂರಾರು ಮಂದಿ ಸಾಯುತ್ತಲೇ ಇದ್ದಾರೆ, ಇತ್ತ ಕೋಲಾರ ಜಿಲ್ಲೆಯಲ್ಲಿಯಲ್ಲಿಯೂ ಸೋಂಕಿತರ ಸಂಖ್ಯೆ ಕಡಿಮೆ ಏನಿಲ್ಲ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6073 ಕ್ಕೆ ಏರಿಕೆ ಆಗಿದೆ, ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 89 ಕ್ಕೆ ಏರಿಕೆ ಆಗಿದೆ. ಪ್ರತಿ ದಿನ 50 ರಿಂದ 100 ಕೇಸುಗಳು ಇದ್ದೇ ಇರುತ್ತವೆ. ಸೋಂಕಿತನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ ಇಂತಹ ಸ್ಥಿತಿಯಲ್ಲಿ ಶಾಲೆಗಳನ್ನು ತೆರೆದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

10 ರಿಂದ 12ನೇ ತರಗತಿವರೆಗೆ ಮಾತ್ರ ತರಗತಿ ಆರಂಭ

ಮಕ್ಕಳಿಗೆ ಕೊರೋನಾ ಸೋಂಕಿನ ಅರಿವಿರುವುದಿಲ್ಲ, ಶಾಲೆಗಳಲ್ಲಿ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಷ್ಟುಸುಲಭವಲ್ಲ. ಒಂದು ವೇಳೆ ಮಕ್ಕಳಿಗೆ ಈ ಸೋಂಕು ಹರಡಿದರೆ ಸಾವು ಸೋವು ಹೆಚ್ಚಾಗುವ ಸಾಧ್ಯತೆ ಇದೆ. ಸಣ್ಣ ಮಕ್ಕಳಲ್ಲಿಯೇ ಕೊರೊನಾ ಸೋಂಕು ಬಂದು ಬಿಟ್ಟರೆ ಅವರು ದೊಡ್ಡವರಾದರೂ ಅವರಲ್ಲಿ ಆ ಸೋಂಕಿನ ಆಪಾಯದಿಂದ ಬೇರೆ ಬೇರೆ ರೋಗಗಳಿಗೆ ಅತಿ ಸುಲಭವಾಗಿ ತುತ್ತಾಗುತ್ತಾರೆ ಎನ್ನುವ ಬಗ್ಗೆಯೂ ವೈದ್ಯರು ಹೇಳುತ್ತಿರುವುದರಿಂದ ಇಂತಹ ಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಎನ್ನುತ್ತಾರೆ ಪೋಷಕರು.

ಶಾಲಾಮಕ್ಕಳಿಗೆ ಕೊರೋನಾ ದೃಢ

"

click me!