ಜೂನ್ 27ನೇ ತಾರೀಖು ಶಿಗ್ಗಾವಿ ಪಟ್ಟಣದಲ್ಲಿರುವ ಸಿಎಂ ನಿವಾಸದ ಮುಂದೆ ಧರಣಿ ಕೂರಲು ನಿರ್ಧರಿಸುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ವರದಿ: ಪವನ್ ಕುಮಾರ್,ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ (ಮೇ.29): ಜೂನ್ 27ನೇ ತಾರೀಖು ಶಿಗ್ಗಾವಿ ಪಟ್ಟಣದಲ್ಲಿರುವ ಸಿಎಂ ನಿವಾಸದ ಮುಂದೆ ಧರಣಿ ಕೂರಲು ನಿರ್ಧರಿಸುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಹಾವೇರಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಬೊಮ್ಮಾಯಿ ನಿವಾಸದ ಮುಂದೆ ಪ್ರತಿಭಟನಾ ಧರಣಿ ಮಾಡುತ್ತೇವೆ.ಮುಖ್ಯಮಂತ್ರಿ ಬೊಮ್ಮಾಯಿ ನಿವಾಸದ ಎದುರು ಶಾಸಕ ಬಸನಗೌಡ ಯತ್ನಾಳರಿಂದಲೇ ಪ್ರತಿಭಟನೆಗೆ ಚಾಲನೆ ಕೊಡುತ್ತಾರೆ.
undefined
ಬಹುಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಮೀಸಲಾತಿ ಒತ್ತಾಯ ಮಾಡಿದರೂ ಸರ್ಕಾರ ಕಣ್ಣಿದ್ದು ಕುರುಡಾಯಿತು.ಕಳೆದ ವರ್ಷ ಸೆಪ್ಟೆಂಬರ್ 15 ರೊಳಗೆ ಮೀಸಲಾತಿ ನೀಡುತ್ತೇವೆ ಎಂದು ಯಡಿಯೂರಪ್ಪ ಮಾತು ತಪ್ಪಿದರು.ಆದರೆ ಯಡಿಯೂರಪ್ಪ ಬಳಿಕ ಬೊಮ್ಮಾಯಿ ಸಿಎಂ ಆದರು. ಬೊಮ್ಮಾಯಿಯವರು ಸಿಎಂ ಆದ ಮೇಲೆ ಮತ್ತಷ್ಟು ವಿಶ್ವಾಸ ಬಂತು. ಮೀಸಲಾತಿ ನೀಡ್ತೀವಿ ಅಂತಮಾತುಕೊಟ್ಟರು. ಆದರೆ ಆಗಲಿಲ್ಲ.
Haveri: ಸಿಎಂ ಬೊಮ್ಮಾಯಿ ನಂಬಿಕಸ್ಥನಲ್ಲ: ಜಯಮೃತ್ಯುಂಜಯ ಸ್ವಾಮೀಜಿ
ಬಜೆಟ್ ಅಧಿವೇಶನ ಮುಗಿದರೂ ಕೊಟ್ಟ ಮಾತು ಈಡೇರಿಸಲಿಲ್ಲ.ಮಾತು ತಪ್ಪಿರೋ ಕಾರಣಕ್ಕೆ ಅನಿವಾರ್ಯವಾಗಿ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ ಸತ್ಯಾಗ್ರಹ ಮಾಡುವ ನಿರ್ಧಾರ ಮಾಡಿದ್ದೆವು.ಆದರೆ ಸಿಎಂ ಮನೆ ಮುಂದೆಯೇ ಪ್ರತಿಭಟನೆ ಮಾಡಿದರೆ ಪರಿಣಾಮಕಾರಿ ಎಂದು ನಿರ್ಧರಿಸಿದ್ದೇವೆ.ಜೂನ್ 27 ನೇ ತಾರೀಕು ಬೆಳಿಗ್ಗೆ 9 ಗಂಟೆಯಿಂದ ಶುರುವಾಗಿ ಸಂಜೆ ವರೆಗೆ ಪ್ರತಿಭಟನೆ ನಡೆಸಲಾಗುತ್ತದೆ.ಅಲ್ಲಿಂದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ಚಾಲನೆ ನೀಡ್ತೀವಿ.
ಸಿಎಂ ನಿವಾಸದ ಮುಂದೆ ಧರಣಿಗೆ ಚಾಲನೆ ಕೊಡ್ತಾರೆ ಶಾಸಕ ಯತ್ನಾಳ: ಯತ್ನಾಳ್‌ರನ್ನು ಕರೆಸಿ ಸಿಎಂ ಮನೆ ಮುಂದೆ ಹೋರಾಟಕ್ಕೆ ಚಾಲನೆ ಕೊಡಲಾಗುತ್ತದೆ. ಅಂದು ವಿನಯ್ ಕುಲಕರ್ಣಿ, ವಿಜಯಾನಂದ ಕಾಶೆಪ್ಪನವರ ಸಹಿತ ಇರಲಿದ್ದಾರೆ.ಪ್ರತಿಭಟನಾ ಧರಣಿಗೆ ಶಿಗ್ಗಾವಿಯ ಎಲ್ಲಾ ಜನರಿಗೂ ಆಮಂತ್ರಣ ಕೊಡುತ್ತೇವೆ.ಧರಣಿಗೆ ಆಮಂತ್ರಣ ಕೊಡಲು ಜನ ಜಾಗೃತಿ ಸಭೆ ಮಾಡುತ್ತೇವೆ. ಮುಖ್ಯಮಂತ್ರಿ ಬೊಮ್ಮಾಯಿಗೆ ಎರಡ್ಮೂರು ದಿನಗಳಲ್ಲಿ ಪತ್ರ ಬರೆಯುವೆ.ಸಿಎಂ ಗೃಹ ಕಚೇರಿಯಲ್ಲಿ ಪಂಚಮಸಾಲಿ ಶಾಸಕರ ಸಭೆ ಕರೆದು ಬೊಮ್ಮಾಯಿ ಸ್ಪಷ್ಟತೆ ನೀಡಲಿ.
2A ಧ್ವನಿ ಎತ್ತಿರುವ ಜಯ ಮೃತ್ಯುಂಜಯ ಸ್ವಾಮಿಗಳು ಪೀಠತ್ಯಾಗ ಮಾಡಲಿ: ಪುಟ್ಟಸಿದ್ದ ಶೆಟ್ಟಿ
ಈ ಕುರಿತು ಸಿಎಂ ಬೊಮ್ಮಾಯಿಗೆ ಪತ್ರ ಬರೆಯುವೆ. ಈ ಸಮಾಜದ ಋಣ ನಿಮ್ಮ ಮೇಲೆ ಬಹಳ ಇದೆ. ಇದನ್ನ ಸಾಕಷ್ಟು ಬಾರಿ ಬೊಮ್ಮಾಯಿ ಕೂಡಾ ಹೇಳಿದ್ದಾರೆ.ಮುಂದೆ ಯತ್ನಾಳ ಮುಖ್ಯಮಂತ್ರಿ ಆದರೂ ಮೀಸಲಾತಿ ಕೊಡುವ ವಿಚಾರಕ್ಕೆ ಅವರಿಗೂ ಟೈಂ ಕೊಡ್ತೀವಿ.ಯಾರೇ ಮುಖ್ಯಮಂತ್ರಿ ಆದರೂ ನಾವು ಹೋರಾಟ ಮಾಡೇ ಮಾಡ್ತೀವಿ ಅಂತ ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.