* ನರ್ಸ್ ಗಳ ಕೊರತೆಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆ ಸ್ಥಗಿತ
* ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ
* ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಧರಣಿ ಎಚ್ಚರಿಕೆ
ಚಾಮರಾಜನಗರ, (ಮೇ.29): ಆ ಆಸ್ಪತ್ರೆ ಚಾಮರಾಜನಗರ ಜಿಲ್ಲೆಯ ಬಡವರಿಗೆ, ಮಧ್ಯಮ ವರ್ಗದವರ ಪಾಲಿನ ಆಶಾಕಿರಣ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಾಣ ಮಾಡಿದ್ರೂ ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆಯಿದೆ. ಈ ಹಿನ್ನೆಲೆ ಶಸ್ತ್ರಚಿಕಿತ್ಸೆಗಳು ಸ್ಥಗಿತಗೊಂಡಿವೆ.
ರಾಷ್ಟ್ರಪತಿ, ಸಿಎಂ ಇಬ್ಬರೂ ಕಳೆದ ವರ್ಷ ಉದ್ಘಾಟನೆ ಮಾಡಿದ್ರು. ಆಡಳಿತ ಮಂಡಳಿ ನರ್ಸ್ ನೇಮಕಕ್ಕೆ ಪ್ರಸ್ತಾವಣೆ ಸಲ್ಲಿಸಿದ್ರೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಆಸ್ಪತ್ರೆ ಇದ್ರು ಕೂಡ ಜನರ ಪಾಲಿಗೆ ಇಲ್ಲದಾಗಿದೆ.ಇದೀಗ ಶಾಸಕರೊಬ್ಬರು ಸಿಎಂ, ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದು ಕೂಡಲೇ ಆಸ್ಪತ್ರೆಗೆ ನರ್ಸ್ ನೇಮಿಸದಿದ್ರೆ ಧರಣಿ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ...
undefined
ಗಡಿ ಜಿಲ್ಲೆ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಆಸ್ಪತ್ರೆ. ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಅನಾರೋಗ್ಯ ಪೀಡಿತರು ಈ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಹರಿದುಬರುತ್ತಾರೆ. ಸಣ್ಣಪುಟ್ಟ ಚಿಕಿತ್ಸೆಯಿಂದ ಹಿಡಿದು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತವೆ. ಅಂದಾಜು ಪ್ರತಿದಿನ 40 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. ಆದ್ರೆ ಸದ್ಯ ನರ್ಸ್ ಮತ್ತು ಸಿಬ್ಬಂದಿಗಳ ಕೊರತೆಯಿಂದ ರೋಗಿಗಳ ಪಾಡು ಹೇಳತಿರದಾಗಿದೆ.
ಜ್ವರ ಎಂದು ಆಸ್ಪತ್ರೆಗೆ ದಾಖಲಾದವಳು ವಾಪಸ್ ಶವವಾಗಿ ಬಂದಳು, ನವ ವಿವಾಹಿತೆಯ ದುರಂತ ಸಾವು
ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಯಲ್ಲಿ ನರ್ಸ್ ಗಳ ಕೊರತೆಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆ ಸ್ಥಗಿತಗೊಂಡಿದ್ದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ಸಂಖ್ಯೆಯ ನರ್ಸ್ ಹಾಗು ಡಿ ಗ್ರೂಪ್ ನೌಕರರ ನೇಮಕಾತಿಗೆ ಸಿಎಂ ಗೆ ಪತ್ರ ಬರೆದಿದ್ದೇನೆ, ಕೂಡಲೇ ಸ್ಪಂಧಿಸದಿದ್ದರೆ ಆಸ್ಪತ್ರೆ ಯಲ್ಲೇ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು 180 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಯಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿರುವುದರಿಙದ ಬಡ ರೋಗಿಗಳ ಪರದಾಡಬೇಕಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೀರಾ ನಿಮ್ಮಿಷ್ಟ ಬಂದಂಗೆ ಮಾಡ್ತೀರಾ? ಎಂದು ಪ್ರಶ್ನಿಸಿದ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ತೋರಿಸಿ, ಆರೋಗ್ಯ ಸಚಿವರಿಗೆ ಫೋನ್ ಮಾಡಿದ್ರೆ ತೆಗೆಯಲ್ಲ ಬಡರೋಗಿಗಳು ಏನು ಮಾಡಬೇಕು? ಎಂದು ಕಿಡಿಕಾರಿದರು.
750 ಹಾಸಿಗೆ ಸೌಲಭ್ಯದ ಆಸ್ಪತ್ರೆ ಯಲ್ಲಿ ಹೊರಗುತ್ತಿಗೆ ಸೇರಿದಂತೆ ಕೇವಲ 110 ಮಂದಿ ನರ್ಸ್ಗಳು ಇದ್ದು ಇನ್ನೂ 200 ಕ್ಕು ಹೆಚ್ಚು ನರ್ಸ್ಗಳ ಅಗತ್ಯ ಇದೆ ಸಾಕಷ್ಟು ಸಂಖ್ಯೆಯ ನರ್ಸ್ಗಳಿಲ್ಲದೆ ವೈದ್ಯರು ಶಸ್ತ್ರ ಚಿಕಿತ್ಸೆ ಯನ್ನೆ ಮುಂದೂಡುತ್ತಿದ್ದಾರೆ ಕಳೆದ ಅಕ್ಟೋಬರ್ ನಲ್ಲಿ ಸಿಎಂ ಬಸವರಾಬೊಮ್ಮಾಯಿ ಉದ್ಘಾಟಿಸಿದ್ದ ನೂತನ ಆಸ್ಪತ್ರೆಗೆ 200 ಕ್ಕು ಹೆಚ್ಚು ನರ್ಸ್ ಗಳ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆ ಮಾಡಕಾಗಿದೆ ಆದರೆ ಈ ಪ್ರಸ್ತಾಪಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಈಗಾಗ್ಲೇ ಸಿಎಂ ಸೇರಿದಂತೆ ಆರೋಗ್ಯ ಸಚಿವರಿಗೂ ಪತ್ರ ಬರೆದಿದ್ದೇನೆ.ಆಸ್ಪತ್ರೆಗೆ ನರ್ಸ್ ನೇಮಕವಾಗದಿದ್ರೆ ಆಸ್ಪತ್ರೆ ಬಳಿ ಧರಣಿ ಕೂರುವ ಎಚ್ಚರಿಕೆ ನೀಡಿದ್ದಾರೆ..
ಸದ್ಯ ನರ್ಸ್ಗಳ ಕೊರತೆಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡರೋಗಿಗಳು ಪರದಾಡುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. 200 ಕ್ಕೂ ಹೆಚ್ಚು ನರ್ಸ್ಗಳ ಅವಶ್ಯಕತೆ ಆಸ್ಪತ್ರೆಗೆ ಇದೆ. ಹೀಗಾಗಿ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರದ ಮಟ್ಟದಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ಇನ್ನು ಕೇಲವೇ ದಿನಗಳಲ್ಲಿ ನರ್ಸ್ಗಳ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂಬುದು ಅಧಿಕಾರಿಗಳ ಮಾತು..
ಒಟ್ನಲ್ಲಿ 175 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಆಸ್ಪತ್ರೆಯಲ್ಲಿ ನರ್ಸ್ಗಳ ಕೊರತೆ ಸರ್ಕಾರದ ಆಡಳಿತಕ್ಕೆ ಹಿಡಿದ ಕೈ ಗನ್ನಡಿ.ಸಿಎಂ ಬಸವರಾಜ್ ಬೊಮ್ಮಾಯಿ,ಆರೋಗ್ಯ ಸಚಿವ ಸುಧಾಕರ್ ಇತ್ತ ಗಮನಹರಿಸಿ ನರ್ಸ್ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾರಾ ಅನ್ನೋದ್ನ ಕಾದುನೋಡಬೇಕಾಗಿದೆ...