ಚಿಕ್ಕಮಗಳೂರು: ಕುಂಚದಲ್ಲಿ ಅರಳಿದ ಕಾಫಿನಾಡಿನ ಪ್ರಾಕೃತಿಕ ಸೊಬಗು..!

By Girish Goudar  |  First Published Aug 23, 2023, 8:10 PM IST

ಚಿಕ್ಕಮಗಳೂರು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಈ ಬಾರಿ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಹತ್ತು ದಿನಗಳ ಜಿಲ್ಲೆಯ ಮಾನ್ಸೂನ್ ಸೊಬಗಿನ ಮಾನ್ಸೂನ್ ಶೀರ್ಷಿಕೆಯಡಿಯಲ್ಲಿ ಕಲಾವಿದ ಹೆಚ್.ಎಂ.ಹರ್ಷ ರವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಯುವ ಕಲಾವಿವರು ಕಾಫಿನಾಡಿನ ಪ್ರಾಕೃತಿಕ ಸೊಬಗನ್ನು ಅನಾವರಣಗೊಳಿಸಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಆ.23):  ನಿಸರ್ಗದ ಅನುಕರಣೆಯನ್ನು ಕಲಾವಿದನು, ಸಾಹಿತಿಯು ಹಾಗೂ ಸಂಗೀತಗಾರರು ಲಲಿತ ಕಲೆಗಳ ಮುಖಾಂತರ ಹಿಂದಿನಿಂದಲು ತನ್ನದೆ ಆದ ಪ್ರಕಾರಗಳ ಮುಖಾಂತರ ಮಾಡುತ್ತಾ ಬಂದಿರುತ್ತಾನೆ, ಈ ತರಹದ ಪ್ರಯತ್ನ ಕಾಫಿನಾಡಿನ ಯುವ ಕಲಾವಿದರು ಕ್ಯಾನ್ವಾಸ್ ಹಾಗೂ ಬಣ್ಣಗಳ ಮುಖಾಂತರ ಅಭಿವ್ಯಕ್ತಿಪಡಿಸಿದ್ದಾರೆ.

Tap to resize

Latest Videos

undefined

ಚಿಕ್ಕಮಗಳೂರು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಈ ಬಾರಿ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಹತ್ತು ದಿನಗಳ ಜಿಲ್ಲೆಯ ಮಾನ್ಸೂನ್ ಸೊಬಗಿನ ಮಾನ್ಸೂನ್ ಶೀರ್ಷಿಕೆಯಡಿಯಲ್ಲಿ ಕಲಾವಿದ ಹೆಚ್.ಎಂ.ಹರ್ಷ ರವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಯುವ ಕಲಾವಿವರು ಕಾಫಿನಾಡಿನ ಪ್ರಾಕೃತಿಕ ಸೊಬಗನ್ನು ಅನಾವರಣಗೊಳಿಸಿದ್ದಾರೆ.

ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಯುವತಿ: ರಂಭಾಪುರಿ ಶ್ರೀ ಶುಭಹಾರೈಕೆ

ಪ್ರಾಕೃತಿಕ ವೈಭವ ಚಿತ್ರಗಳಲ್ಲಿ ಅನಾವರಣ :

ಹೆಬ್ಬೆ ಮತ್ತು ಸಿರಿಮನೆ ಜಲಪಾತ, ಬಾಬಾಬುಡನ್‌ಗಿರಿಯಲ್ಲಿರುವ ಗಾಳಿಕೆರೆ, ೧೨ ವರ್ಷಕ್ಕೊಮ್ಮೆ ಅರಳುವ ನೀಲಿಕುರಂಜಿ, ಚಂದ್ರದ್ರೋಣ ಪರ್ವತ ತಪ್ಪಲಿನಲ್ಲಿ ಹಸಿರಿನಿಂದ ಕಂಗೊಳಿಸುವ ಗಿರಿಶಿಖರಗಳು, ಚಾರ್ಮಾಡಿಘಾಟಿಯಲ್ಲಿ ತೆರಳುವಾಗ ಉಗಮಿಸಿ ಮೆರೆಯಾಗುವ ಝರಿಗಳು, ಕುದುರೆಮುಖ ದ ನಿಸರ್ಗ, ಭದ್ರಾಹಿನ್ನೀರಿನ ದೃಶ್ಯಕಾವ್ಯಗಳು ಕಲಾವಿದರ ಕುಂಚದಲ್ಲಿ ಅರಳಿವೆ ನೋಡುಗರ ಮನ ಸೆಳೆಯುತ್ತಿವೆ.ಯುವಕಲಾವಿದರು. ರಚಿಸಿರುವ ಚಿತ್ರಗಳಲ್ಲಿ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಅರಳುವ ವಿಶೇಷವಾದ ಹೂವುಗಳನ್ನು ಕಲಾವಿದರು ಕೈಗಳಲ್ಲಿ  ವರ್ಣರಂಜಿತವಾಗಿ ಮೂಡಿಬಂದಿವೆ. ನೋಡುಗರನ್ನು ಕೈಬೀಸಿ ಕರೆಯುತ್ತಿವೆ.ಕುಂಚದಲ್ಲಿ ಅರಳಿನಿಂತಿರುವ ಹೂಗಳ ವಿಶೇಷವೆಂದರೆ ಇವುಗಳ ಪ್ರಕೃತಿ,ತೋಟಗಳಲ್ಲಿ  ಬೆಳೆಯುವ ಸಾಮಾನ್ಯ ಹೂವುಗಳಾಗಿದ್ದು, ಅವುಗಳನ್ನು ನಮ್ಮಲ್ಲಿ ಕಳೆ ಎಂದು ಕರೆಯುವುದುಂಟು, ಆದರೆ ನಗರ ಪ್ರದೇಶದಲ್ಲಿ ಅವುಗಳನ್ನು ಪ್ರತ್ಯೇಕಿಸಿ ಹೂದಾನಿಯಲ್ಲಿ ಅಲಂಕಾರಿಕವಾಗಿ ಬೆಳೆಸಿ ಸಂತೋಷ ಪಡುವುದನ್ನು  ಕಾಣುತ್ತೇವೆ.ಆ ಹೂವುಗಳನ್ನು ಶಾಂತಿನಿಕೇತನ ಚಿತ್ರಕಲಾಮಹಾವಿದ್ಯಾಲಯದ ಕಲಾವಿದರು.ಕ್ಯಾನ್ವಾಸಿನ ಮೇಲೆ ಆಕರ್ಷಕವಾಗಿ ಚಿತ್ರಿಸಿದ್ದಾರೆ. ಅವುಗಳನ್ನು ಮನೆಗಳ ಹಾಗೂ ಕಚೇರಿಗಳ ಗೋಡೆಗಳಲ್ಲಿ ಅಲಂಕರಿಸಿರುವ ರೀತಿಯಲ್ಲಿ ವರ್ಣಮಯವಾಗಿ ಚಿತ್ರಿಸಿರುವುದು ನೋಡುಗರ ತನ್ನತ್ತ ಸೆಳೆಯುತ್ತವೆ.

ಹೆಬ್ಬೆ ಜಲಪಾತವನ್ನು ದೃಶ್ಯಕಾವ್ಯ :

ಜಿಲ್ಲೆಯ ದೃಶ್ಯವೈಭವವನ್ನು ನೆನಪಿಸುವ ಹೆಬ್ಬೆಜಲಪಾತವನ್ನು ದೃಶ್ಯಕಾವ್ಯವನ್ನಾಗಿಸಿರುವ ಕಲಾವಿದ  ನಿತೇಶ್,ಧುಮ್ಮಿಕ್ಕಿಹರಿಯುವ ಕಲ್ಲುಗಳ ಸಂದಿಗಳಲ್ಲಿ ಝುಳು ಝುಳು ನೀನಾದದೊಂದಿಗೆ ಹಾಲ್ನೋರೆ ಸೂಸುವ ರಮಣೀಯ ದೃಶ್ಯ ಸಿರಿಮನೆ ಜಲಪಾತವನ್ನು ನಿಶ್ಚಿತಗೌಡ ಅವರ ಕರಗಳಲ್ಲಿ ಸುಂದರವಾಗಿ ಮೂಡಿಬಂದಿದ್ದು ನೋಡುಗರ ಮನ ಸೆಳೆಯುತ್ತಿದೆ.ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ದತ್ತಪೀಠದ ಸಮೀಪದ ಗಿರಿಶಿಖರಕ್ಕೆ ಕಳಸಪ್ರಾಯದಂತಿರುವ  ಗಾಳಿಕೆರೆಯ ಸೊಬಗು, ತಣ್ಣನೆಯ ತಂಗಾಳಿಯ ಅನುಭೂತಿಯನ್ನು ಕಲಾವಿದೆ ಐಶ್ವರ್ಯ ನೋಡುಗರಿಗೆ ಕಟ್ಟಿಕೊಟ್ಟಿದ್ದಾರೆ.ಭದ್ರಹಿನ್ನೀರಿನ ದೃಶ್ಯಕಾವ್ಯವನ್ನು ಕ್ಯಾನ್ವಾಸಿನ ಮೇಲೆ ತಂದಿರುವವರು. ಕಲಾವಿದರಾದ ಸಿಂಚನಾಕಶ್ಯಪ್ ಮತ್ತು ರಾಕೇಶ್ ಅವರುಗಳು ವಿನೂತನ ಶೈಲಿಯಲ್ಲಿ ಸೃಜನಾತ್ಮಕವಾಗಿ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿಕೊಟ್ಟ ತಹಶೀಲ್ದಾರ್‌

ಕುದುರೆಮುಖದ ನಿಸರ್ಗವನ್ನು ಕುಂಚದಲ್ಲಿ ಅರಳಿಸಿರುವವರು ಕಲಾವಿದರಾದ ಗ್ರೀಶ್ಮ ಹಾಗೂ ಗಾನವಿ. ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಶ್ರೇಣಿಯಲ್ಲಿ 12 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಕರ್ನಾಟಕ ಸೇರಿದಂತೆ ಬೇರೆ ರಾಜ್ಯದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ನೀಲಿಕುರಂಜಿ ಮನಸ್ಸನ್ನು ಮುದಗೊಳಿಸುವ ಸನ್ನಿವೇಶವನ್ನು ಕಲಾವಿದ ಪೆಟ್ರಿಶಿಯಾ ಸೃಷ್ಟಿಸಿದ್ದಾರೆ.ಕಡಲತಡಿಯ ಜಿಲ್ಲೆಗಳಿಗೆ ತೆರಳುವಾಗ ಸಿಗುವ ಚಾರ್ಮಾಡಿಘಾಟಿಯಲ್ಲಿ ಮಳೆಗಾಲದಲ್ಲಿ ಸೃಷ್ಟಿಯಾಗುವ ಝರಿಗಳು ಮತ್ತು ಜಲಪಾತಗಳು ಸೃಷ್ಟಿಸುವ ನಿಗರ್ಸದ ವೈಭವನ್ನು ನೋಡಿದವರಿಗೆ ಮತ್ತೆ ಮತ್ತೆ ಹೋಗಬೇಕೆಂದೆನಿಸುತ್ತದೆ. ಕಾನನದ ನಿಶಬ್ದ ವಾತಾವರಣದಲ್ಲಿ ಧುಮ್ಮಿಕ್ಕಿ ಹರಿಯುವ ಹನುಮನಗುಂಡಿಯ ಜಲಪಾತವನ್ನು ಕಲಾವಿದ  ರಾಜೇಶ್ ಅದ್ಬುತವಾಗಿ ಕುಂಚದಲ್ಲಿ ಸೆರೆಹಿಡಿದಿದ್ದಾರೆ.

ಈ ಎಲ್ಲ ಚಿತ್ರಪಟಗಳು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್ ಜಿಲ್ಲಾ ಆಟದ ಮೈದಾನದ ಪಕ್ಕದ ಸ್ಕೌಟ್ಸ್ ಭವನದಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಆಗಸ್ಟ್ 30 ರವರೆಗೆ  ಈ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ತಪ್ಪದೆ ನೋಡಿ ಜಿಲ್ಲೆಯ ಪ್ರಾಕೃತಿ ಸೌಂದರ್ಯವನ್ನು ಆಸ್ವಾದಿಸುವ ಅವಕಾಶವಿದೆ.

click me!