ವಿಜಯಪುರ: ಹೃದಯಾಘಾತದಿಂದ ಪೈಲ್ವಾನ್ ಶ್ರೀಕಾಂತ್‌ ನಾಯಕ್ ಸಾವು

By Girish Goudar  |  First Published Jul 25, 2024, 9:52 PM IST

ಏಕಾಏಕಿ ಬೆನ್ನು, ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶ್ರೀಕಾಂತ್ ಸಾವನ್ನಪ್ಪಿದ್ದಾರೆ. 


ವಿಜಯಪುರ(ಜು.25): ಹೃದಯಾಘಾತದಿಂದ ಪೈಲ್ವಾನ್ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ಇಂದು(ಗುರುವಾರ) ನಡೆದಿದೆ. ಶ್ರೀಕಾಂತ್ ನಾಯಕ್(30) ಮೃತಪಟ್ಟ ದುರ್ದೈವಿ. 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಪೈಲ್ವಾನ್ ಶ್ರೀಕಾಂತ್ ನಾಯಕ್‌ ಭಾರ ಎತ್ತುವ ಸ್ಪರ್ಧೆಗಳಿಗೆ ಹೆಸರುವಾಸಿಯಾಗಿದ್ದರು. ಶ್ರೀಕಾಂತ್ 240 ಕೆ.ಜಿ ವರೆಗೆ ಭಾರ ಎತ್ತಿ ಸಾಧನೆ ಮಾಡಿದ್ದರು. 
ಇಂದು ಏಕಾಏಕಿ ಬೆನ್ನು, ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶ್ರೀಕಾಂತ್ ಸಾವನ್ನಪ್ಪಿದ್ದಾರೆ. 

Tap to resize

Latest Videos

undefined

ಜುಂಬಾ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಪೈಲ್ವಾನ್ ಶ್ರೀಕಾಂತ್ ಅವರಿಗೆ ಮದುವೆಯಾಗಿ ಎರಡೂ ಮಕ್ಕಳನ್ನ ಹೊಂದಿದ್ದಾರೆ. ಕಳೆದ 18 ವರ್ಷಗಳಿಂದ ಭಾರ ಎತ್ತುವ ಸ್ಪರ್ಧೆಯಲ್ಲಿ ಶ್ರೀಕಾಂತ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಪೈಲ್ವಾನ್ ಶ್ರೀಕಾಂತ ಭಾರ ಎತ್ತುವ ಸ್ಪರ್ಧೆಗಳಲ್ಲಿ ಬೆಳ್ಳಿ ಗಧೆ, ಬೆಳ್ಳಿ ಕಡಗಗಳನ್ನ ಗೆದ್ದು ಸಾಧನೆ ಮಾಡಿದ್ದರು. 

click me!