ಚಿತ್ರದುರ್ಗ ಜಿಲ್ಲೆಯಾದ್ಯಂತ ಸುರಿದ ತುಂತುರು ಮಳೆ ಬಾರಿ ದುಷ್ಪರಿಣಾಮ ತಂದೊಡ್ಡಿದೆ. ಹೀಗಾಗಿ ಸಾಲಸೂಲಮಾಡಿ ಬಿತ್ತನೆ ಮಾಡಿದ ಪೈರು ವಿನಾಶದ ಅಂಚಿನಲ್ಲಿದ್ದು, ಅನ್ನದಾತ ಸಂಕಷ್ಟದ ಸುಳಿಗೆ ಸಿಲುಕುವ ಆತಂಕದಲ್ಲಿದ್ದಾನೆ. ಹೀಗಾಗಿ ಸರ್ಕಾರ ರೈತರ ಆತಂಕ ಶಮನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಬೇಕಿದೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜು.25): ಮಳೆ ಬಂದ್ರೆ ಸಾಕಪ್ಪ ಅಂತ ಮಳೆರಾಯನ ಜಪಮಾಡೋ ಬಯಲುಸೀಮೆ ಜನರು. ಈಗ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರೋ ತುಂತುರು ಮಳೆ ಹಾಗೂ ಶೀತ ವಾತಾವರಣದಿಂದಾಗಿ ಕೆಲವೆಡೆ ಬಿತ್ತನೆಯಾದ ವಿವಿಧ ಬೆಳೆ ಹಾನಿಯಾಗಿದ್ದು, ಹಲವೆಡೆ ಬಿತ್ತನೆಗೆ ಮಳೆರಾಯ ಅಡ್ಡಿಯಾಗಿದ್ದಾನೆ. ಈ ಕುರಿತು ವರದಿ ಇಲ್ಲಿದೆ.
ಹೀಗೆ ಹೆಚ್ಚಾದ ಶೀತದಿಂದಾಗಿ ಕೊಳೆಯುತ್ತಿರುವ ಈರುಳ್ಳಿ ಹಳದಿ ಬಣ್ಣಕ್ಕೆ ತಿರುಗಿರುವ ಮೆಕ್ಕೆಜೋಳ. ಬೆಳೆಹಾನಿಯಾಗುವ ಆತಂಕದಲ್ಲಿ ಅನ್ನದಾತರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು,ಚಿತ್ರದುರ್ಗ ತಾಲ್ಲೂಕಿನ ಹಳೇ ಕಲ್ಲಳ್ಳಿ ಗ್ರಾಮ. ಹೌದು ಕೇವಲ ಇದು ಈ ಗ್ರಾಮದ ಕಥೆಯಲ್ಲ.ಚಿತ್ರದುರ್ಗ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಬಿತ್ತನೆಯಾದ ಮೆಕ್ಕೆಜೋಳ,ಈರುಳ್ಳಿಸೇರಿದಂತೆ ವಿವಿಧ ಬೆಳೆಗಳ ಪರಿಸ್ಥಿತಿ ಇದೇ ರೀತಿಯಾಗಿದೆ. ಈಬಾರಿ ಸಕಾಲಕ್ಕೆ ಮಳೆಯಾಗಿದ್ದು, ಉತ್ತಮ ಬೆಳೆ ಬರಲಿದೆ.ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಆದ ನಷ್ಟದಿಂದಾಗಿ ಮಾಡಿದ ಸಾಲ ತೀರಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಕಳೆದ ಒಂದುವಾರದಿಂದ ನಿರಂತರವಾಗಿ ಸುರಿದ ತುಂತುರು ಮಳೆಯ ಪರಿಣಾಮ ಶೀತ ಹೆಚ್ಚಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊಳೆಕೆಯೊಡೆದ ಈರುಳ್ಳಿ ಪೈರು ಗೆಡ್ಡೆಯಾಗುವ ಮುನ್ನವೇ ಕೊಳೆಯುತ್ತಿದೆ.ಮೆಕ್ಕೆಜೋಳದ ಗರಿಗಳು ಹಳದಿ ಬಣ್ಣಕ್ಕೆತಿರುಗಿ ಒಣಗಿ ಹೋಗ್ತಿವೆ.ಹೀಗಾಗಿ ಕೋಟೆನಾಡಿನ ಅನ್ನದಾತರು ಕಂಗಾಲಾಗಿದ್ದಾರೆ.
ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ: 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ..!
ಇನ್ನು ಈ ಜಿಲ್ಲೆಯಾದ್ಯಂತ ಸತತ ಒಂದು ವಾರದಿಂದ ಸೂರ್ಯದರ್ಶನವಾಗಿಲ್ಲ.ಹೀಗಾಗಿ ಶೀತಗಾಳಿ ಹಾಗು ತಂಪಾದ ವಾತಾವರಣ ವೈಪರೀತ್ಯದಿಂದಾಗಿ ಬಿತ್ತಿದ ಬೆಳೆಗಳು ನಾಶವಾಗುವ ಆತಂಕವಿದ್ದು,ಖಾಲಿ ಇರುವ ಜಮೀನಿನಲ್ಲಿ ಹೊಸಬೆಳೆ ಬಿತ್ತನೆ ಮಾಡಲು ಸಹ ಸಾಧ್ಯವಾಗ್ತಿಲ್ಲ. ಹೀಗಾಗಿ ದಿಕ್ಕು ತೋಚದಂತಾಗಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಅನ್ನದಾತರು ಆಗ್ರಹಿಸಿದ್ದಾರೆ.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಸುರಿದ ತುಂತುರು ಮಳೆ ಬಾರಿ ದುಷ್ಪರಿಣಾಮ ತಂದೊಡ್ಡಿದೆ. ಹೀಗಾಗಿ ಸಾಲಸೂಲಮಾಡಿ ಬಿತ್ತನೆ ಮಾಡಿದ ಪೈರು ವಿನಾಶದ ಅಂಚಿನಲ್ಲಿದ್ದು, ಅನ್ನದಾತ ಸಂಕಷ್ಟದ ಸುಳಿಗೆ ಸಿಲುಕುವ ಆತಂಕದಲ್ಲಿದ್ದಾನೆ. ಹೀಗಾಗಿ ಸರ್ಕಾರ ರೈತರ ಆತಂಕ ಶಮನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಬೇಕಿದೆ.