ಪದ್ಮಶ್ರೀ ಪ್ರಶಸ್ತಿ ಪಡೆದರೂ ಜೋಗುತಿ ಬುಟ್ಟಿಯೇ ಜೀವನಕ್ಕಾಸರೆ: ಮಾಶಾಸನ ಬಾರದೆ ಮಂಜಮ್ಮ ಅಳಲು

Published : Nov 23, 2026, 05:14 PM IST
Manjamma Jogathi

ಸಾರಾಂಶ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ಕಳೆದ ನಾಲ್ಕೈದು ತಿಂಗಳಿಂದ ಮಾಶಾಸನ ಬಂದಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿರುವ ಕಾರಣ ಅವರು ಮತ್ತೆ ಬುಟ್ಟಿ ಹಣಿಯುವ ಕಾಯಕಕ್ಕೆ ಇಳಿದಿದ್ದಾರೆ.

ವಿಜಯನಗರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಬದುಕು ಸಾಗಿಸಲು ಮತ್ತೆ ಬುಟ್ಟಿ ಹಣಿಯುವ ಕಾಯಕಕ್ಕೆ ಇಳಿದಿದ್ದಾರೆ. ಸಮರ್ಪಕವಾಗಿ ಸಿಗದ ಮಾಶಾಸನ ಮತ್ತು ಕಾರ್ಯಕ್ರಮಗಳೂ ಇಲ್ಲದೆ ಆದಾಯಕ್ಕೆ ಪರದಾಟ ನಡೆಸಿದ್ದು, ಜೀವನ ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆ ಸ್ವಾವಲಂಬಿ ಬದುಕಿಗೆ ಮುಂದಾಗಿದ್ದಾರೆ.

ಪದ್ಮಶ್ರೀ ಪುರಸ್ಕೃತೆಗೆ ಎದುರಾಯ್ತು ಅನಿವಾರ್ಯತೆ: ಬುಟ್ಟಿಯೇ ಆಶ್ರಯ!

ಪದ್ಮಶ್ರೀ ಪ್ರಶಸ್ತಿ ಬಂದ ಬಳಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿ ಗೌರವ ಸಂಭಾವನೆ ನೀಡುತ್ತಿದ್ದರು. ಜೊತೆಗೆ ಮಾಶಾಸನ ಬರುತ್ತಿದ್ದ ಕಾರಣ ಜೀವನ ನಿರ್ವಹಣೆ ನಡೆಯಿತ್ತು. ಆದರೆ ಈಗ ಈಗ ಕಾರ್ಯಕ್ರಮಗಳೂ ಇಲ್ಲ, ಗೌರವ ಸಂಭಾವನೆಯೂ ಇಲ್ಲದಂತಾಗಿದ್ದು, ಇದರೊಂದಿಗೆ ಬುಟ್ಟಿ ಹಣೆಯುವ ಕಾಯಕದ ಮೊರೆ ಹೋಗಿದ್ದಾರೆ. ಒಂದು ಬುಟ್ಟಿ ಹಣಿಯಲು ಒಂದು ದಿನದ ಶ್ರಮ ಹಾಕಬೇಕಿದ್ದು, 300 ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುವ ಬುಟ್ಟಿಯನ್ನು 500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಮಂಜಮ್ಮ ಜೋಗತಿ ಅವರು ವಾಸಿಸುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಮಾಶಾಸನ ಬರುತ್ತಿಲ್ಲ, ಈ ಬಗ್ಗೆ ಸಮರ್ಪಕ ಉತ್ತರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ನೀಡಿಲ್ಲವಂತೆ. ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕು ಕಟ್ಟಿಕೊಳ್ಳಲು ಬುಟ್ಟಿ ಹಣಿಯುವ ಅನಿವಾರ್ಯತೆ ಎದುರಾಗಿದೆ.

ಈ ಬಗ್ಗೆ ಮಾತನಾಡಿರುವ ಮಂಜಮ್ಮ ಜೋಗತಿ ಅವರು, ಅಪ್ಪ-ಅಮ್ಮನಿಂದಲೇ ನಾನು ಬುಟ್ಟಿ ಹಣಿಯುವುದು ಕಲಿತೆ. ಚಿಕ್ಕವಯಸ್ಸಿನಿಂದಲೇ ಅಡುಗೆ ಮಾಡುವುದು, ಬುಟ್ಟಿ ಹಣಿಯುವುದು ಕಲಿತ್ತಿದ್ದೆ. ಆ ಬಳಿಕ ಇದನ್ನು ಮಾಡಿದ್ದೆ. ನಾನು ಸದಸ್ಯಳಾದ ಬಳಿಕ ಹೆಚ್ಚು ಓಡಾಟ ಮಾಡಬೇಕಾಯ್ತು. ಈಗ ಪದ್ಮಶ್ರೀ ಬಂದಿದೆ, ಆದ್ದರಿಂದ ಭಿಕ್ಷೆ ಬೇಡಲು ಹೋಗೋದಿಲ್ಲ. ಜನರು ಕೂಡ ಪ್ರಶಸ್ತಿ ಬಂದ ಮೇಲೆ ಭಿಕ್ಷೆ ಬೇಡುವುದು ಸರಿಯೇ ಅಂತ ಕೇಳ್ತಾರೆ. ಆದರೆ ನಾನು ಬುಟ್ಟಿಗಳನ್ನು ಎಲ್ಲಿಯೂ ಹೋಗಿ ಮಾರಾಟ ಮಾಡೋದಿಲ್ಲ. ಮನಗೆ ಬಂದವರಿಗೆ ನೋಡಿ ತೆಗೆದುಕೊಂಡು ಹೋಗ್ತಾರೆ. ಸಿನಿಮಾ ನಿರ್ಮಾಪಕರೊಬ್ಬರು ಒಟ್ಟಿಗೆ 15 ಬುಟ್ಟಿ ಮಾಡಲು ಹೇಳಿದ್ದಾರೆ. ಅವರಿಗಾಗಿಯೇ ಬ್ಯಾಗ್ ತಯಾರಿಸುವ ಕಾರ್ಯ ಮಾಡ್ತಿದ್ದೇವೆ. ಇದನ್ನು ಚಿಕ್ಕ ಕಾಯಕವಾಗಿ ಮಾಡುತ್ತಿದ್ದೇನೆ. ನನ್ನ ಬಳಿ ಇಂದ ಬ್ಯಾಗ್ ತೆಗೆದುಕೊಂಡ ಜನರು, ಪದ್ಮಶ್ರೀ ಮಂಜಮ್ಮ ಅವರು ಹಾಕಿದ್ದಾರೆ ಎಂದು ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಅದುವೇ ನನಗೆ ಬಹಳ ಸಂತಸ ನೀಡುತ್ತದೆ ಎಂದು ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..

PREV
Read more Articles on
click me!

Recommended Stories

ಜಪಾನ್‌ನ ಟೊಯೋಟಾ ಘಟಕಕ್ಕೆ ಸಿಎಂ ಡಿಕೆಶಿ ಭೇಟಿ, 10 ಲಕ್ಷ ವಾಹನ ಉತ್ಪಾದನಾ ವಿಸ್ತರಣೆಗೆ ರಾಜ್ಯ ಸರ್ಕಾರದ ಮುಕ್ತ ಆಹ್ವಾನ
ಕಾಡಾನೆಗಳ ಸ್ಥಳಾಂತರ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದ ನಯನಾ ಮೋಟಮ್ಮ, ಆದ್ರೆ ಸ್ಪೀಕರ್ ಸಿಗಲಿಲ್ಲ!