ಉತ್ತರ ಕನ್ನಡ: ಕೈಕೊಟ್ಟ ಮಳೆ, ಬತ್ತದ ಬೆಳೆ ಇಳಿಮುಖ, ಆತಂಕದಲ್ಲಿ ಅನ್ನದಾತ..!

By Kannadaprabha News  |  First Published Aug 18, 2023, 10:23 PM IST

ಈ ಬಾರಿ ರೈತರ ಪರಿಸ್ಥಿತಿ ಬಿಗಡಾಯಿಸಿದೆ. ಮುಂಗಾರು ಒಂದು ತಿಂಗಳ ಕಾಲ ವಿಳಂಬವಾಗಿದ್ದರಿಂದ ರೈತರಿಗೆ ಬಿತ್ತನೆ, ನಾಟಿ ಕಾರ್ಯಕ್ಕೆ ವಿಳಂಬವಾಯಿತು. ಜುಲೈದಲ್ಲಿ ಮಳೆ ಆರಂಭವಾಯಿತು ಎಂದು ಸಂತಸದಿಂದ ಬಿತ್ತನೆ ಮಾಡಿದರೆ ಹೊಲ ಗದ್ದೆ ಜಲಾವೃತವಾಗಿ ಬಿತ್ತಿದ ಬೀಜವೂ ನೀರು ಪಾಲಾಯಿತು. ನಂತರ ಹಾಗೂ ಹೀಗೂ ಬಿತ್ತನೆ, ನಾಟಿ ಮಾಡಿದರೆ ಈಗ ಮತ್ತೆ ಮಳೆಯೇ ಇಲ್ಲ.


ವಸಂತಕುಮಾರ ಕತಗಾಲ

ಕಾರವಾರ(ಆ.18): ಈ ಬಾರಿ ಮುಂಗಾರು ಕೈಕೊಟ್ಟು ತಿಂಗಳ ತರುವಾಯ ಮಳೆ ಶುರುವಾಯಿತು. ನಂತರ 15 ದಿನಗಳ ಅಬ್ಬರದ ಮಳೆ ಬಳಿಕ ಮತ್ತೆ ಮಳೆ ಕೈಕೊಟ್ಟಿದೆ. ಇದರಿಂದ 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬತ್ತದ ಬೆಳೆ ಕಡಿಮೆಯಾಗಿದೆ. ಬಿರು ಬಿಸಿಲು ಮನೆ ಮಾಡಿದೆ. ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

Tap to resize

Latest Videos

undefined

ಜೂನ್‌ ತಿಂಗಳ ಆರಂಭದಲ್ಲಿ ಶುರುವಾಗಬೇಕಿದ್ದ ಮುಂಗಾರು ಜುಲೈ ಮೊದಲ ವಾರದಲ್ಲಿ ಶುರುವಾಯಿತು. ಆಗ ಉಂಟಾಗಿದ್ದೇ ಅಬ್ಬರದ ಮಳೆ. ಜಿಲ್ಲೆಯಾದ್ಯಂತ 15 ದಿನಗಳ ಕಾಲ ಬಿಟ್ಟು ಬಿಡದೆ ಮಳೆ ಸುರಿಯಿತು. ಮನೆಗಳಿಗೆ ನೀರು ನುಗ್ಗಿತು. ಹೊಲ ಗದ್ದೆಗಳು ಜಲಾವೃತವಾದವು. ರಸ್ತೆಯ ಮೇಲೆ ಮರ, ಗಿಡಗಳು ಬಿದ್ದು, ಗುಡ್ಡ ಕುಸಿದು ಸಂಚಾರಕ್ಕೂ ವ್ಯತ್ಯಯ ಉಂಟಾಯಿತು. ಭಾರಿ ಪ್ರವಾಹದ ಭಯ ಹುಟ್ಟಿಸಿತು. ಜು. 20ರ ತನಕ ಮಳೆ ಅಬ್ಬರಿಸಿತು.

ಶಾಸಕ ಹೆಬ್ಬಾರ್‌ ನಡೆಯ ಬಗ್ಗೆ ಮೂಡಿದ ಕುತೂಹಲ: ಬಾಂಬೆ ಬಾಯ್ಸ್‌ ಮರಳಿ ಕಾಂಗ್ರೆಸ್‌ಗೆ?

ಅದಾದ ನಂತರ ಕಣ್ಮರೆಯಾದ ಮಳೆ ಇದುವರೆಗೂ ಬಾರದೆ ರೈತರು ಚಿಂತಿತರಾಗಿದ್ದಾರೆ. ಈ ಬಾರಿ ರೈತರ ಪರಿಸ್ಥಿತಿ ಬಿಗಡಾಯಿಸಿದೆ. ಮುಂಗಾರು ಒಂದು ತಿಂಗಳ ಕಾಲ ವಿಳಂಬವಾಗಿದ್ದರಿಂದ ರೈತರಿಗೆ ಬಿತ್ತನೆ, ನಾಟಿ ಕಾರ್ಯಕ್ಕೆ ವಿಳಂಬವಾಯಿತು. ಜುಲೈದಲ್ಲಿ ಮಳೆ ಆರಂಭವಾಯಿತು ಎಂದು ಸಂತಸದಿಂದ ಬಿತ್ತನೆ ಮಾಡಿದರೆ ಹೊಲ ಗದ್ದೆ ಜಲಾವೃತವಾಗಿ ಬಿತ್ತಿದ ಬೀಜವೂ ನೀರು ಪಾಲಾಯಿತು. ನಂತರ ಹಾಗೂ ಹೀಗೂ ಬಿತ್ತನೆ, ನಾಟಿ ಮಾಡಿದರೆ ಈಗ ಮತ್ತೆ ಮಳೆಯೇ ಇಲ್ಲ. ಉತ್ತರ ಕನ್ನಡದಲ್ಲಿ ಬೃಹತ್‌ ನೀರಾವರಿ ಯೋಜನೆಗಳಿಲ್ಲ. ಬತ್ತದ ಬೆಳೆ ಬಹುಪಾಲು ಮಳೆಯಾಶ್ರಿತ ಬೆಳೆಯೇ ಹೌದು. ಹೀಗಾದರೆ ಬತ್ತದ ಬೆಳೆ ಸಂಪೂರ್ಣ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ಆಗಸ್ವ್‌ ತಿಂಗಳ ಆರಂಭದಿಂದ ಬಿಟ್ಟೂಬಿಡದೆ ಬಿಸಿಲು ಕಾಡುತ್ತಿದೆ. ಏಪ್ರಿಲ…, ಮೇ ತಿಂಗಳಿನಂತೆ ಬಿಸಿಲ ಝಳ ಉಂಟಾಗಿದೆ. ಮೈದುಂಬಿಕೊಂಡಿದ್ದ ಹಳ್ಳ-ಕೊಳ್ಳಗಳು ಸೊರಗಲಾರಂಭಿಸಿವೆ. ಮತ್ತೆ ಮಳೆ ಯಾವಾಗ ಬಂದೀತು. ನಾಟಿ ಮಾಡಿದ ಹೊಲ ಗದ್ದೆಗಳ ಭವಿಷ್ಯ ಏನು ಎಂದು ರೈತರು ವಿಚಾರ ಮಾಡುತ್ತಿದ್ದಾರೆ. ಮಳೆಯಾಗದಿದ್ದಲ್ಲಿ ಬರಗಾಲದ ಬೇಗುದಿ ಎದುರಾಗಲಿದೆ. 

ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬತ್ತದ ಬೆಳೆ ಇಳಿಮುಖವಾಗಿದೆ. ಕಳೆದ ವರ್ಷ 44500 ಹೆಕ್ಟೇರ್‌ ಪ್ರದೇಶದಲ್ಲಿ ಬತ್ತದ ನಾಟಿ ಮಾಡಲಾಗಿತ್ತು. ಈ ಬಾರಿ 41 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ. 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬತ್ತ ಬೆಳೆಗೆ ಬದಲಾಗಿ ಜೋಳ ಬೆಳೆಯಲು ರೈತರು ಮುಂದಾಗಿದ್ದಾರೆ. ಮಳೆಯ ಅಭಾವದಿಂದಾಗಿ ಜೋಯಿಡಾ, ಸಿದ್ದಾಪುರ ಹಾಗೂ ಶಿರಸಿಯಲ್ಲಿ ಬತ್ತದ ನಾಟಿ ವಿಳಂಬವಾಗಿದೆ.

ಉತ್ತರಕನ್ನಡ: ಇಲಾಖೆಗಳ ಜಂಗಿ ಕುಸ್ತಿಯಿಂದ ಬಳಕೆಯಾಗದ ತೇಲುವ ಜೆಟ್ಟಿ

ನಾಟಿ ಮಾಡಿದ ಗದ್ದೆಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಸದ್ಯದಲ್ಲೇ ಮಳೆ ಬಾರದಿದ್ದರೆ ಬತ್ತದ ಸಸಿಗಳು ಒಣಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸುವಂತಾಗಿದೆ ಎಂದು ಬತ್ತದ ಬೆಳೆಗಾರ ಮಂಜುನಾಥ ಗೌಡ ಹೇಳಿದ್ದಾರೆ.  

ಮಳೆಯ ವಿಳಂಬದಿಂದ ನಾಟಿ ಕಾರ್ಯಕ್ಕೂ ಹಿನ್ನಡೆ ಉಂಟಾಗಿದೆ. ಆಗಸ್ವ್‌ ಅಂತ್ಯದೊಳಗೆ ನಾಟಿ ಆಗುವ ಸಾಧ್ಯತೆ ಇದೆ. ಆದರೆ ಮುಂಗಾರು ಮಳೆ ವಿಳಂಬವಾಗಿದ್ದರಿಂದ 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬತ್ತದ ಬೆಳೆಗೆ ಬದಲು ಮೆಕ್ಕೆಜೋಳ ಬೆಳೆಯಲು ರೈತರು ಮುಂದಾಗಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.  

click me!