* ಅರಳಿಕಟ್ಟಿ ಫೌಂಡೇಷನ್ ಕಾರ್ಯ ಶ್ಲಾಘಿಸಿದ ಗೋವಿಂದ ಕಾರಜೋಳ
* ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಚೆಕ್ ಹಸ್ತಾಂತರ
* ಕೊರೋನಾ ಸಂದರ್ಭದಲ್ಲಿ ಮಾನವೀಯತೆ ಮೆರೆದ ಅರಳಿಕಟ್ಟಿ ಫೌಂಡೇಷನ್
ಬಾಗಲಕೋಟೆ(ಮೇ.23): ಕೋವಿಡ್ ಸೋಂಕಿತರಿಗೆ ಅಗತ್ಯವಾಗಿರುವ ಒಂದು ಕಂಟೇನರ್ ಆಕ್ಸಿಜನ್‍ನ್ನು ಕೊಂಡುಕೊಳ್ಳಲು ಜಿಲ್ಲಾಡಳಿತಕ್ಕೆ 3.60 ಲಕ್ಷ ರೂ.ಗಳ ಚೆಕ್‌ನ್ನು ನೀಡುವುದರ ಮೂಲಕ ಅರಳಿಕಟ್ಟಿ ಫೌಂಡೇಷನ್ ಮಾನವೀಯತೆ ಮೆರೆದಿದೆ. ನಗರದ ಪಿಡಬ್ಲೂಡಿ ಐಬಿ ಆವರಣದಲ್ಲಿ ಶನಿವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಚೆಕ್ ಹಸ್ತಾಂತರ ಮಾಡಲಾಗಿದೆ.
undefined
ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, 3.60 ಲಕ್ಷ ರೂ. ಆಕ್ಸಿಜನ್ ಕೊಳ್ಳಲು ನೀಡುವುದರ ಮೂಲಕ ಮುಧೋಳದ ಅರಳಿಕಟ್ಟಿ ಫೌಂಡೇಷನ್ ಸಂಕಷ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಫೌಂಡೇಷನ್ ಮುಧೋಳ ನಗರದಲ್ಲಿ 5 ರೂ. ಪಹಣಿ ಉತಾರೆ ನೀಡುವುದು, ಪ್ರವಾಹ ಬಂದಾಗ ಅನ್ನ ದಾಸೋಹ, ಸ್ಪರ್ಧಾತ್ಮ ಪರೀಕ್ಷೆ ತಯಾರಿ ವಿದ್ಯಾರ್ಥಿಗಳಿಗೆ ಹೈಟೆಕ್ ಗ್ರಂಥಾಲಯ, ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಹಾಗೂ ಕ್ರೀಡೆ ಸಾಂಸ್ಕೃತಿಕ ಕಾರ್ಯ ಮಾಡುವುದರ ಮೂಲಕ ಮೆಚ್ಚುಗೆ ಪಾತ್ರವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬಾಗಲಕೋಟೆ: ಮುಧೋಳ ನಗರಸಭಾ ಅಧ್ಯಕ್ಷ ಕೋವಿಡ್‌ಗೆ ಬಲಿ
ಚೆಕ್ ನೀಡಿದ ಸಂಸ್ಥೆಯ ಅಧ್ಯಕ್ಷೆ ಸವಿತಾ ಅರಳಿಕಟ್ಟಿ ಹಾಗೂ ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ ಮಾತನಾಡಿ, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬಿಡಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಟಿ.ಭೂಬಾಲನ ಇದ್ದರು.