* ಮುಧೋಳ ನಗರಸಭಾ ಅಧ್ಯಕ್ಷ ಸಿದ್ದನಾಥ ಮಾನೆ ಕೋವಿಡ್‌ಗೆ ಬಲಿ
* 5 ದಿನಗಳ ಹಿಂದೆಯಷ್ಟೇ ಕೋವಿಡ್‌ನಿಂದಲೇ ಮೃತಪಟ್ಟಿದ್ದ ಸಿದ್ದನಾಥ ಅವರ ತಾಯಿ
* ಸಿದ್ದನಾಥ ಸಾವಿಗೆ ಡಿಸಿಎಂ ಗೋವಿಂದ ಕಾರಜೋಳ ಸಂತಾಪ
ಬಾಗಲಕೋಟೆ(ಮೇ.23): ಜಿಲ್ಲೆಯ ಮುಧೋಳ ನಗರಸಭಾ ಅಧ್ಯಕ್ಷ ಕೋವಿಡ್‌ಗೆ ಬಲಿಯಾದ ಘಟನೆ ಇಂದು (ಭಾನುವಾರ) ಬೆಳಗಾವಿಯಲ್ಲಿ ನಡೆದಿದೆ. ಸಿದ್ದನಾಥ ಮಾನೆ (34) ಎಂಬುವರೇ ಕೊರೋನಾಗೆ ಬಲಿಯಾದವರಾಗಿದ್ದಾರೆ.
ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿದ್ದನಾಥ ಮಾನೆ ಅವರನ್ನ ಬೆಳಗಾವಿಯ ಖಾಸಗಿ ಆಸಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಸಿದ್ದನಾಥ ಮಾನೆ ಪಟ್ಟಿದ್ದಾರೆ. ಕಳೆದ 5 ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಕೋವಿಡ್‌ನಿಂದಲೇ ಸಿದ್ದನಾಥ ತಾಯಿ ಸಹ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಗುಲಬರ್ಗಾ ವಿವಿ ಮಾಜಿ ಕುಲಪತಿ ಪ್ರೊ. ಮೇಲಕೇರಿ ಕೊರೋನಾದಿಂದ ನಿಧನ
ಸಿದ್ದನಾಥ ಸಾವಿಗೆ ಮುಧೋಳ ಶಾಸಕ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶೋಕ ವ್ಯಕ್ತಪಡಿಸಿ, ಶೃದ್ದಾಂಜಲಿ ಸಲ್ಲಿಸಿದ್ದಾರೆ.