ಬೆಂಗಳೂರು: ಜೈ ಶ್ರೀರಾಮ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಮುಸ್ಲಿಮರಿಂದ ಹಲ್ಲೆ!

By Sathish Kumar KH  |  First Published Apr 17, 2024, 7:03 PM IST

ಶ್ರೀರಾಮ ನವಮಿ ಆಚರಣೆ ಮುಗಿಸಿಕೊಂಡು ಜೈ ಶ್ರೀರಾಮ್ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಮುಸ್ಲಿಂ ಯುವಕರ ಗುಂಪು ಬಂದು ಹಲ್ಲೆ ನಡೆದಿದ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.


ಬೆಂಗಳೂರು (ಏ.17): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಮುಗಿಸಿ ಕಾರಿನಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿಕೊಂಡು ಹೋಗುತ್ತಿದ್ದ ಮೂವರು ಹಿಂದೂ ಯುವಕರ ಕಾರನ್ನು ಅಡ್ಡಗಟ್ಟಿದ ಮುಸ್ಲಿಂ ಯುವಕರ ಗುಂಪೊಂದು ಇಲ್ಲಿ ಶ್ರೀರಾಮ್ ಎನ್ನಂಗಿಲ್ಲ, ಓನ್ಲಿ ಅಲ್ಲಾ.. ಅಲ್ಲಾ ಹು ಅಕ್ಬರ್ ಎನ್ನಬೇಕು ಎಂದು ಹಲ್ಲೆ ಮಾಡಿದ ಘಟನೆ ನಡೆದಿದೆ.

ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಮೂವರು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಮೂವರು ಬಾಲಕರು ಕಾರಿನಲ್ಲಿ ಹೋಗುತ್ತಿದ್ದಾಗ ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರು ಕಾರನ್ನು ಅವರನ್ನು ತಡೆದು ನಿಲ್ಲಿಸಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕಾರಿನ ಬಳಿ ಬಂದು ಯುವಕರು ಏನು ನೀವು ಜೈ ಶ್ರೀರಾಮ್ ಎಂದು ಹೇಳಬೇಕಾ? ಇಲ್ಲಿ ಜೈ ಶ್ರೀ ರಾಮ್ ಇಲ್ಲಾ... ಒನ್ಲೀ ಅಲ್ಲಾ... ಅಲ್ಲಾ ಹು  ಅಕ್ಬರ್  ಎಂದು ಹೇಳಬೇಕು ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

Tap to resize

Latest Videos

undefined

ಪ್ರಭು ಶ್ರೀರಾಮನಿಗೆ ಮನಮೋಹಕ ಸೂರ್ಯ ತಿಲಕ! ಈ ಅದ್ಭುತ ದೃಶ್ಯಾವಳಿ ಕಣ್ತುಂಬಿಕೊಳ್ಳಿ..

ಆಗ ಕಾರಿನಲ್ಲಿ ಕುಳಿತಿದ್ದ ಹಿಂದೂ ಯುವಕರು ನಮ್ಮ ಹಬ್ಬ ನಾವು ಏನಾದ್ರೂ ಮಾಡ್ಕೋತೀವಿ. ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡ್ತಿವಾ? ನಿಮ್ಮ ಹಬ್ಬದಲ್ಲಿ ಬಂದು ನಾವು ಹೀಗೆ ಮಾಡ್ತೀವಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ನಂತರ ಅವ್ಯಾಚ್ಯ ಶಬ್ದಗಳ ನಿಂದನೆ ಹೆಚ್ಚಾಗಿದೆ. ಈ ವೇಳೆ ಮುಸ್ಲಿಂ ಯುವಕರು ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಮುಂದಾದಾಗ, ಇವರೂ ಕೂಡ ಕಾರಿನಿಂದ ಇಳಿದು ಹೊರಗೆ ಬಂದು ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಇನ್ನು ಬೈಕ್‌ನಲ್ಲಿದ್ದ ಮುಸ್ಲಿಂ ಇಬ್ಬರು ಮುಸ್ಲಿಂ ಯುವಕರ ಜೊತೆಗೆ ಅಲ್ಲಿಯೇ ಇದ್ದ ಮತ್ತಿಬ್ಬರು ಮುಸ್ಲಿಂ ಯುವಕರು ಸೇರಿ ಕಾರಿನಲ್ಲಿ ಬಂದಿದ್ದವರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಈ ಘಟನೆ ನಂತರ ಕಾರಿನಲ್ಲಿದ್ದ ಯುವಕರು ವಿದ್ಯಾರಣ್ಯ ಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲು ಮಾಡಿದ್ದಾರೆ. ಸದ್ಯ ರಸ್ತೆಯಲ್ಲಿ ಅಡ್ಡಗಟ್ಟಿ ಪುಂಡಾಟ ಮಾಡಿದವರಿಗಾಗಿ ಪೊಲೀಸರಿಂದ ಹುಡುಕಾಟ ಮಾಡಲಾಗುತ್ತಿದೆ. 

ಇನ್ನು ಘಟನೆಯಲ್ಲಿ ಹಲ್ಲೆಗೊಳಗಾದ ಯುವಕ ಪವನ್ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿ, ನಾವು ಸಹಕಾರನಗರದಿಂದ ಎಂಎಸ್ ಪಾಳ್ಯಗೆ ಪ್ರಯಾಣ ಮಾಡುತ್ತಿದ್ದೆವು. ರಾಮನವಮಿ ಇದ್ದರಿಂದ ನಾವು ರಾಮನ ಫ್ಲಾಗ್ ಅನ್ನು ಹಿಡಿದುಕೊಂಡು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಹೋಗುತ್ತಿದ್ದೆವು. ಸಡನ್ ಆಗಿ ಇಬ್ರು ಮುಸ್ಲೀಂ ಯುವಕರು ಬಂದರು. ಕ್ಯಾ ಮದರ್ ಚು** ಕ್ಯಾ ಬೋಲೆಗಾ.. ಶ್ರೀ ರಾಮ್ ನಹಿ ಅಲ್ಲಾ ಅಕ್ಬರ್ ಬೋಲೋ ಅಂದ್ರು. ನಾವು ಇದು ನಮ್ ಹಬ್ಬ ನಾವ್ಯಾಕೆ ನಾವು ನಿಮ್ ಹಬ್ಬ ಇದ್ದಾಗ ನಿಮ್ ತಂಟೆಗೆ ಬರ್ತಿವಾ ಅಂತ ಕೇಳುದ್ವಿ. ಆಗ ನಮ್ಮ ಕಾರು ಮತ್ತು ನಮ್ಮ ಕೈಲಿದ್ದ ಕೇಸರಿ ಬಾವುಟವನ್ನು ಕಿತ್ತು ಹಾಕಿದರು.

ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ

ನಮಗೆ ಹೊಡೆಯುವದಕ್ಕೆಂದೇ ಇನ್ನೂ ಮೂವರನ್ನು ಕರೆತಂದರು: ನಂತರ, ಇದನ್ನು ನಾವು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದರು. ನಂತರ ಓಡಿಹೋಗಿ ಮತ್ತೆ ಮೂವರನ್ನು ಕರೆದುಕೊಂಡು ಬಂದರು. ನಮ್ಮ ಫ್ರೆಂಡ್‌ಗೆ ದೊಣ್ಣೆಲಿ ಹೊಡೆದರು, ಅವನಿಗೆ ರಕ್ತ ಸುರಿಯುತ್ತಿದ್ದರೂ ಬಿಡದೇ ಮತ್ತೆ ಹಲ್ಲೆ ಮಾಡಿದರು. ನನ್ನ ಜೊತೆಗಿದ್ದ ವಿನಾಯಕ್ ಹಾಗೂ ರಾಹುಲ್ ಇಬ್ರಿಗೂ ಗಾಯ ಆಯ್ತು. ಅಲ್ಲಿದ್ದ ಯಾರೂ ಕೂಡ ನಮ್ ಸಹಾಯಕ್ಕೆ ಬರ್ಲಿಲ್ಲ. ಆಮೇಲೆ ನಾನೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ‌ಮಾಡಿ ಮಾಹಿತಿ ಕೊಟ್ಟೆ. ಅಲ್ಲಿಗೆ ಪೊಲೀಸರು ಬಂದ ಮೇಲೆ ನಮ್ಮ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಿ ಅಲ್ಲಿಂದ ಪುಂಡರ ಗುಂಪು ಪರಾರಿ ಆಗಿದೆ ಎಂದು ಯುವಕ ಪವನ್ ಹೇಳಿದ್ದಾನೆ.

click me!