ಬೆಂಗಳೂರಿಂದ-ಸಂಡೂರಿಗೆ ಹೊರಡಬೇಕಿದ್ದ ಎಸ್‌ಆರ್‌ಜೆ ಸ್ಲೀಪರ್ ಬಸ್ ಮೆಜೆಸ್ಟಿಕ್‌ನಲ್ಲೇ ಬೆಂಕಿಗಾಹುತಿ!

By Sathish Kumar KH  |  First Published Apr 17, 2024, 11:38 PM IST

ಬೆಂಗಳೂರಿನಿಂದ ಸಂಡೂರಿಗೆ ಹೊರಡಬೇಕಿದ್ದ ಎಸ್‌ಆರ್‌ಜೆ ಸ್ಲೀಪರ್ ಕೋಚ್ ಬಸ್ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಿಂತಲ್ಲಿಯೇ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.


ಬೆಂಗಳೂರು (ಏ.17): ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಂಡೂರಿಗೆ ಹೊರಡಲು ನಿಂತಿದ್ದ ಎಸ್‌ಆರ್‌ಜೆ ಕಂಪನಿಯ ಖಾಸಗಿ ಬಸ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಇಡೀ ಬಸ್ ಧಗಧಹಿಸಿ ಉರಿದು ಹೋಗಿದೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. 

ಹೌದು, ಬೆಂಗಳೂರಿನಿಂದ ಪ್ರತಿನಿತ್ಯ ರಾತ್ರಿ 9 ಗಂಟೆಗೆ ಸಂಡೂರಿಗೆ ಪ್ರಯಾಣಿಕರನ್ನು ಹೊತ್ತೊಯ್ಯುವ ಎಸ್‌ಆರ್‌ಜೆ ಕಂಪನಿಯ ಖಾಸಗಿ ಬಸ್ ಮೆಜೆಸ್ಟಿಕ್ ನಿಲ್ದಾಣದ ಬಳಿ ಹೊತ್ತಿ ಉರಿದಿದೆ. ಈ ಬಸ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸುಮಾರು 20 ನಿಮಿಷಗಳ ಕಾಲ ಬಸ್ ಬೆಂಕಿಯ ಉಂಡೆಯಂತೆ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಇಡೀ ಬಸ್‌ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬಸ್‌ನ ಬಹುತೇಕ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಟೈರ್ ಸ್ಪೋಟ ಆಗುವುದನ್ನು ಅಗ್ನಿ ಶಾಮಕ ಸಿಬ್ಬಂದಿ ತಪ್ಪಿಸಿದ್ದಾರೆ.

Tap to resize

Latest Videos

undefined

ಬೆಂಗಳೂರು: ಜೈ ಶ್ರೀರಾಮ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಮುಸ್ಲಿಮರಿಂದ ಹಲ್ಲೆ!

ಪ್ರತಿನಿತ್ಯ ಬೆಂಗಳೂರು- ಸಂಡೂರು ನಡುವೆ ಟ್ರಿಪ್ ಮಾಡುವ ಈ ಖಾಸಗಿ ಸ್ಲೀಪರ್ ಬಸ್‌ ಅನ್ನು ಬೆಳಗ್ಗೆ ಬಂದಾಕ್ಷಣ ಯಶವಂತಪುರದ ಬಳಿ ನಿಲ್ಲಿಸಲಾಗುತ್ತದೆ. ಇನ್ನು ಸಂಡೂರಿಗೆ ಹೋಗಲು ಸೀಟ್ ಬುಕಿಂಗ್ ಮಾಡಿದ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಮೆಜೆಸ್ಟಿಕ್ ಬಸ್‌ ನಿಲ್ದಾಣದ ಬಳಿ ಬಂದು ನಿಂತಿದೆ. ಸಂಜೆ ಮೆಜೆಸ್ಟಿಕ್‌ನ ಪಾರ್ಕಿಂಗ್ ಸ್ಥಳಕ್ಕೆ ಬಂದಾ 6.50ರ ವೇಳೆಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. KA 22 B 5235 ನಂಬರ್‌ನ ನಾನ್ ಎ/ಸಿ ಸ್ಲೀಪರ್ ಬಸ್ ಇದಾಗಿದ್ದು, ಬಸ್‌ನೊಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ. ಇನ್ನು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅದನ್ನು ನಂದಿಸಲು ಪ್ರಯತ್ನ ಮಾಡಿದರೂ ವಿಫಲವಾದ್ದರಿಂದ ಡ್ರೈವರ್ ಮತ್ತು ನಾನು ವಾಹನದಿಂದ ಕೆಳಗಿಳಿದು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದೇವೆ ಎಂದು ಎಸ್‌ಆರ್‌ಜೆ ಕಂಪನಿ ಏಜೆಂಟ್ ಕಾಂತರಾಜು ಮಾಹಿತಿ ನೀಡಿದ್ದಾರೆ.

ಚುನಾವಣೆ ಮುಗಿದ 15 ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ; ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್

ಅದೃಷ್ಡವಶಾತ್ ಬಸ್ ನಲ್ಲಿ ಯಾರೂ ಪ್ರಯಾಣಿಕರು ಇರಲಿಲ್ಲ. ಇಂದು ರಾತ್ರಿ 9ಕ್ಕೆ ಬಸ್ ಹೊರಡಬೇಕಿತ್ತು. ಬಸ್ ಹಿಂಭಾಗದ ಒಳಗೆ ವೈರ್ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಇನ್ನು ಸಂಡೂರಿಗೆ ಹೋಗಲು ಸೀಟ್ ಬುಕಿಂಗ್ ಮಾಡಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಕೆಂಪೇಗೌಡ ಬಸ್ ನಿಲ್ದಾಣದ ಪಕ್ಕದಲ್ಲಿರುವ ದನ್ವಂತ್ರಿ ರಸ್ತೆಯ ದೇವಸ್ಥಾನ ಹತ್ತಿರ ಖಾಸಗಿ ಬಸ್ ಗೆ ಬೆಂಕಿ ಹತ್ತಿಕೊಂಡಿದ್ದು, ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆಯಾಗಿರುವುದಿಲ್ಲ. ಬೆಂಕಿಯನ್ನು ನಂದಿಸಲಾಗಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

click me!