ಸಿಎಂ ಬೊಮ್ಮಾಯಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ: ಅಂಗಡಿ ಮುಚ್ಚಿಸಿದ ಪೊಲೀಸರು, ವ್ಯಾಪಾರಸ್ಥರ ಆಕ್ರೋಶ

By Girish Goudar  |  First Published Apr 15, 2022, 3:17 PM IST

*  ಇಂದು ಗದಗ ನಗರಕ್ಕೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ
*  ಝೀರೋ ಟ್ರಾಫಿಕ್‌ನಿಂದ ಜನಸಾಮಾನ್ಯರಿಗೆ ಸಮಸ್ಯೆ
*  ಅಳಲು ತೋಡಿಕೊಂಡ ವ್ಯಾಪಾರಸ್ಥರು 


ಗದಗ(ಏ.15):  ವಿವಿಧ ಕಾರ್ಯಕ್ರಮಗಳಲ್ಲಿ  ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇಂದು(ಶುಕ್ರವಾರ) ಗದಗ ನಗರಕ್ಕೆ ಭೇಟಿ ನೀಡಿದ್ರು. ಮೊದಲಿಗೆ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಐಕ್ಯ ಮಂಟಪ ಕಟ್ಟಡ ಉದ್ಘಾಟನೆ ಮಾಡಿ ನಂತ್ರ ಅಲ್ಲಿಂದ ಪುಟ್ಟರಾಜ ಕವಿಗವಾಯಿಗಳ ಮಠಕ್ಕೆ ಭೇಟಿ ನೀಡಿದ್ರು. ತೋಂಟದಾರ್ಯ ಮಠದಿಂದ ರೋಟರಿ ಸರ್ಕಲ್ ಮಾರ್ಗವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ್ರು. ತೋಂಟದಾರ್ಯ ಪೆಟ್ರೋಲ್ ಬಂಕ್, ರೋಟರಿ ಸರ್ಕಲ್  ರಸ್ತೆಯನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು. ಅಡ್ಡ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಟೈಟ್ ಸೆಕ್ಯೂರಿಟಿ ನೀಡಲಾಗಿತ್ತು. 

ಜನರಿಗೆ ಅವ್ಯವಸ್ಥೆಯಾದ್ರೂ ಸಿಎಂ ಸಾಹೇಬರ ಸೆಕ್ಯೂರಿಟಿ(Security) ಅಂತಾ ಜನ ಸಹಿಸಿಕೊಂಡಿದ್ರು. ಆದ್ರೆ, ಝೀರೋ ಟ್ರಾಫಿಕ್‌ ನೆಪದಲ್ಲಿ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿನ ಸಣ್ಣಪುಟ್ಟ ಅಂಗಡಿಗಳನ್ನ ಬಂದ್ ಮಾಡ್ಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

Latest Videos

undefined

Gadag: ಸಂತೋಷ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸುತ್ತೇವೆ: ಸಿಎಂ ಬೊಮ್ಮಾಯಿ

ಬೆಳಗ್ಗೆ 7 ರಿಂದ ಸಿಎಂ ಮಠಕ್ಕೆ ಬಂದು ಹೋಗುವವರೆಗೂ ಅಂಗಡಿ ಬಂದ್..!

ಸೆಕ್ಯೂರಿಟಿ ಚೆಕ್‌ಗಾಗಿ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದಿದ್ದ ಪೊಲೀಸರು(Police) ಅಂಗಡಿಗಳನ್ನ ಬಂದ್ ಮಾಡುವಂತೆ ಸೂಚಿಸಿದ್ರಂತೆ. ಬೆಳಗ್ಗೆ 10:45 ಕ್ಕೆ ಸಿಎಂ ಗದಗ(Gadag) ನಗರಕ್ಕೆ ಬಂದಿದ್ರು. ಆದ್ರೆ, ಬೆಳಗ್ಗಿನಿಂದಲೇ ಶ್ರೀಮಠದ ಆವರಣದಲ್ಲಿನ 10 ಕ್ಕೂ ಹೆಚ್ಚು ಅಂಗಡಿಗಳನ್ನ(Shops) ಬಂದ್ ಮಾಡಿಸಲಾಗಿದೆ. ಬೆಳಗಿನ ಜಾವ ಆಶ್ರಮಕ್ಕೆ ಬರುವ ಭಕ್ತರನ್ನೇ ನಂಬಿಕೊಂಡು ಇಲ್ಲಿ ವ್ಯಾಪಾರ ನಡೆಯುತ್ತೆ. ಪೊಲೀಸರು ಏಕಾಏಕಿ ಅಂಗಡಿ ಬಂದ್ ಮಾಡ್ಸಿರೋದ್ರಿಂದ ಒಂದು ಅಂಗಡಿಗೆ ಕನಿಷ್ಠ 500/1000 ರೂಪಾಯಿ ವ್ಯಾಪಾರ(Business) ನಷ್ಟವಾಗಿದೆ.

ಪ್ರಗತಿಪರರು ನಾಯಿಗಳು, ಹಿಂದೂ ವಿರೋಧಿಗಳು: ಪ್ರಮೋದ್‌ ಮುತಾಲಿಕ್‌

ಯಡಿಯೂರಪ್ಪ, ಗೆಹ್ಲೋಟ್ ಬಂದಾಗಲೂ ಅಂಗಡಿ ಬಂದ್ ಆಗಿರಲಿಲ್ಲ

ಇತ್ತೀಚೆಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಅವರು ಭೇಟಿ ನೀಡಿದ್ರು.. ಆಗ್ಲೂ ಮಠದ ಆವರಣದಲ್ಲಿನ ಮಳಿಗೆಗಳನ್ನ ಬಂದ್ ಮಾಡ್ಸಿರಲಿಲ್ಲ. ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿಗಳಾಗಿದ್ದಾಗಲೂ ಮಠಕ್ಕೆ ಭೇಟಿ ನೀಡಿದ್ರು. ಯಾರೇ ಗಣ್ಯ ವ್ಯಕ್ತಿಗಳು ಬಂದ್ರೂ ಮಠಕ್ಕೆ ಭೇಟಿ ಕೊಡ್ತಾರೆ.‌ ಆದ್ರೆ, ಯಾವ ಸಂದರ್ಭದಲ್ಲೂ ಅಂಗಡಿ ಬಂದ್ ಮಾಡಿಸಿದ ಉದಾಹರಣೆಗಳಿಲ್ಲ.
ಏಷ್ಯಾನೆಟ್ ಸುವರ್ಣ ನ್ಯೂಸ್ ಎದುರು ಅಳಲು ತೋಡಿಕೊಂಡ ಮಳಿಗೆ ಮಾಲೀಕರೊಬ್ಬರು, ಗಣ್ಯರು ಬಂದಾಗಿ ಹೀಗೆ ಮಳಿಗೆ ಬಂದ್ ಮಾಡಿಸಿದರೆ ಏನು ಮಾಡೋದು. ಬಂದ್ ಮಾಡಿಸಲು ಬಂದಿದ್ದ ಪೊಲೀಸರಿಗೆ ಯಾಕೆ ಅಂತಾ ಪ್ರಶ್ನಿಸಿದ್ರೆ, 'ಶೋ ಆಫ್‌ಗೆ ಬಂದ್ ಮಾಡಿಸಬೇಕಾಗಿದೆ' ಅಂತಾ ಹೇಳಿದ್ರಂತೆ. 

ಝೀರೋ ಟ್ರಾಫಿಕ್‌ನಿಂದಾಗಿ ಜನರು ಅನೇಕ ಸಮಸ್ಯೆ ಅನುಭವಿಸ್ತಾರೆ. ಆದ್ರೆ, ಕಾಮನ್ ಮ್ಯಾನ್ ಅಂತಾ ಅಧಿಕಾರ ನಡೆಸ್ತಿರೋ ಸಿಎಂ ಬೊಮ್ಮಾಯಿ ಅವರ ಸೆಕ್ಯೂರಿಟಿ ನೆಪದಲ್ಲಿ ಅತೀ ಸಾಮಾನ್ಯ ವ್ಯಾಪಾರಸ್ಥರಿಗೆ ತೊಂದರೆ ಕೊಡೋದು ಎಷ್ಟು ಸರಿ ಅನ್ನೋದು ಜನರ ಪ್ರಶ್ನೆಯಾಗಿದೆ. 
 

click me!