ಉತ್ತರಕನ್ನಡ: ಹಿಂದೂ ಕಾರ್ಯಕರ್ತರಿಂದಲೇ ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ಧಿಕ್ಕಾರ

Published : Jan 26, 2023, 12:38 PM ISTUpdated : Jan 26, 2023, 12:40 PM IST
ಉತ್ತರಕನ್ನಡ: ಹಿಂದೂ ಕಾರ್ಯಕರ್ತರಿಂದಲೇ ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ಧಿಕ್ಕಾರ

ಸಾರಾಂಶ

ನಮ್ಮ ಮನೆಯ ಸ್ಥಿತಿ ತೀರಾ ಕಷ್ಟದಾಯಕವಾಗಿದ್ದು, ದುಡಿಯದೆ ಜೀವನ ಮಾಡುವಂತಿಲ್ಲ. ಶಾಸಕರು ಬರ್ತೀನಿ ಎಂದು ಭರವಸೆ ನೀಡಿ ಎಸಿ ಕಾರಿನಲ್ಲಿ ಓಡಾಡ್ತಾರೆ. ನಮಗೆ ಸಮಸ್ಯೆ ಎದುರಾಗಿದೆ. ಹಿಂದುತ್ವ ಎಂದು ನಿಮ್ಮನ್ನು ನಂಬಿ ಸಮಸ್ಯೆಗೆ ಸಿಲುಕಿದ್ದೇವೆ ಅಂತ ಹಿಂದೂ ಕಾರ್ಯಕರ್ತರ ಆಕ್ರೋಶ

ಕಾರವಾರ(ಜ.26):  ಹಿಂದೂ ಕಾರ್ಯಕರ್ತರು ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶರವಾತಿ ಸರ್ಕಲ್‌ನಲ್ಲಿ‌ ಇಂದು(ಗುರುವಾರ) ನಡೆದಿದೆ. 

ಪರೇಶ್ ಮೇಸ್ತ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಲೆದಾಡಿ, ಹೈರಾಣಾಗಿ ಹಿಂದೂ ಕಾರ್ಯಕರ್ತರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ಪರೇಸ್ ಮೇಸ್ತ ಪ್ರಕರಣದಲ್ಲಿ 95 ಜನರ ಮೇಲೆ ದೂರು ದಾಖಲಾಗಿತ್ತು. ಶಾಸಕ ದಿನಕರ ಶೆಟ್ಟಿ ಮೇಲೆ ಸಹ ದೂರು ದಾಖಲಾಗಿತ್ತು. ಐದು ವರ್ಷದಿಂದ ಕೋರ್ಟ್‌ಗೆ ಅಲೆದಾಟ ನಡೆಸಿದರೂ ಕುಮಟಾ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಶಾಸಕ ದಿನಕರ ಶೆಟ್ಟಿ ವಿರುದ್ಧ ದಿಕ್ಕಾರ ಕೂಗಿದ್ದಾರೆ. 

Honnavar: ಚಿಕಿತ್ಸೆ ಬೇಕಾದ್ರೆ ಖಾಸಗಿ ಆಸ್ಪತ್ರೆಗೆ ಹೋಗು ಎಂದ ಶಾಸಕ ದಿನಕರ ಶೆಟ್ಟಿ

ಘಟನೆಯ ವೇಳೆ ಇಲ್ಲದವರ ಹೆಸರು ಹಾಕಿ ಕೂಡಾ ಕೋರ್ಟ್‌ಗೆ ಅಲೆಯುವಂತೆ ಮಾಡಲಾಗಿದೆ. ನಮ್ಮ ಮನೆಯ ಸ್ಥಿತಿ ತೀರಾ ಕಷ್ಟದಾಯಕವಾಗಿದ್ದು, ದುಡಿಯದೆ ಜೀವನ ಮಾಡುವಂತಿಲ್ಲ. ಶಾಸಕರು ಬರ್ತೀನಿ ಎಂದು ಭರವಸೆ ನೀಡಿ ಎಸಿ ಕಾರಿನಲ್ಲಿ ಓಡಾಡ್ತಾರೆ. ನಮಗೆ ಸಮಸ್ಯೆ ಎದುರಾಗಿದೆ. ಹಿಂದುತ್ವ ಎಂದು ನಿಮ್ಮನ್ನು ನಂಬಿ ಸಮಸ್ಯೆಗೆ ಸಿಲುಕಿದ್ದೇವೆ ಅಂತ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

PREV
Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: Aadi Lakshmi Purana Serial - ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ