ಉಡುಪಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ, ಸಚಿವ ಎಸ್.ಅಂಗಾರರಿಂದ ಧ್ವಜರೋಹಣ

By Suvarna News  |  First Published Jan 26, 2023, 12:07 PM IST

ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಕೊಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕರೆ ನೀಡಿದರು.


ಉಡುಪಿ (ಜ.26): ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ಕೊಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಇಂದು ಪ್ರತಿಜ್ಞೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕರೆ ನೀಡಿದರು. ಅವರು ಗುರುವಾರ ನಗರದ ಅಜ್ಜರಕಾಡುವಿನ ಮಹಾತ್ಮಾ ಗಾಂಧಿ ಜಿಲ್ಲಾ ಮೈದಾನದಲ್ಲಿ ಗಣರಾಜ್ಯೋತ್ಸದ ಧ್ವಜರೋಹಣ ನೆರವೇರಿಸಿ ಮಾತನಾಡಿದರು.

ಮೀನುಗಾರರಿಗೆ ವಿಶೇಷ ಯೋಜನೆ
ಮೀನುಗಾರಿಕಾ ಅಭಿವೃದ್ಧಿಗೆ ರಾಜ್ಯದ ಆಯವ್ಯಯದಲ್ಲಿ ಪ್ರಸಕ್ತ ಸಾಲಿಗೆ 279.91 ಕೋ.ರೂ ಗಳನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ ಸಂಪದ ಮತ್ತು ರಾಜ್ಯ ಸರಕಾರದ ಮತ್ಸಸಿರಿ ಯೋಜನೆಗಳನ್ನು ಜೊತೆಗೂಡಿಸಿ ಕರಾವಳಿಯ ಮೀನುಗಾರರಿಗೆ ನೂರು ಆಳ ಸಮುದ್ರ ದೋಣಿಗಳನ್ನು ನೀಡಲು 120 ಕೋಟಿ. ರೂ ಗಳ ಕ್ರಿಯಾ ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ ದೊರೆತಿದೆ ಎಂದರು. 

Tap to resize

Latest Videos

undefined

ಅಲ್ಲದೇ 78,983 ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮೆ, 3,329 ದೋಣಿಗಳಿಗೆ ತೆರಿಗೆ ರಹಿತ ಡಿಸೇಲ್, 5,000 ಮೀನುಗಾರರಿಗೆ ಮತ್ಸ್ರಾಶಯ ಯೋಜನೆ ಅಡಿ ಮನೆ, 5650 ಗ್ರಾ.ಪಂ ಕೆರೆಗಳಲ್ಲಿ ಮೀನು ಕೃಷಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ ಸಿಇಓ ಪ್ರಸನ್ನ, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್, ಶಾಸಕ ರಘುಪತಿ ಭಟ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನ ಅಧ್ಯಕ್ಷ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು. 

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ, ಕಾಲೇಜಿನ ಎಸ್.ಸಿ.ಸಿ ತಂಡಗಳಿಂದ ಪಥಸಂಚಲನ ನಡೆಯಿತು. 

ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಯನ್ನು ಸತೀಶ್ ಹೆಗ್ಡೆ ಮತ್ತು ನಾರಾಯಣ ನಾಯ್ಕ್, ಜಿಲ್ಲಾ ಮಟ್ಟದ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ಸದಾನಂದ ನಾಯ್ಕ್, ಚಂದ್ರಕಾಂತ್ ರಾವ್, ಚೈತ್ರ.ವಿ.ಆಡಪ, ಲಕ್ಷ್ಮೀ, ಮ್ಯಾಕ್ಸಿಂಡಿಸೋಜಾ, ಸುಪ್ರೀಯಾ, ದಿನೇಶ್ ಪೂಜಾರಿ, ಕಸ್ತೂರಿ ಶೆಡ್ತಿ, ಶಶಿಧರ ನಾಯಕ್, ರಮೇಶ್ ನಾಯಕ್, ತಾಲೂಕು ಮಟ್ಟದಲ್ಲಿ ನಾಗರಾಜ್, ಲವ ಶೆಟ್ಟಿ, ಭಾರತಿ, ಭಾಸ್ಕರ್ ಪೂಜಾರಿ, ಅರುಣ್ ಕುಮಾರ್, ಶ್ರೇಷ್ಠ ಆಸಕ್ತ ಗುಂಪು ಜಿಲ್ಲಾ ಮಟ್ಟದಲ್ಲಿ ವರಂಗ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ, ಕಾರ್ಕಳ, ಕೃಷಿ ಪ್ರಶಸ್ತಿ ಯೋಜನೆ ಜಿಲ್ಲಾ ಮಟ್ಟದಲ್ಲಿ ಸಣ್ಣಮ್ಮ, ರಮೇಶ್ ನಾಯ್ಕ್, ಪುಷ್ಪಲತಾ ಶೆಟ್ಟಿ, ತಾಲೂಕು ಮಟ್ಟದಲ್ಲಿ ಭಾಸ್ಕರ್ ಶೆಟ್ಟಿ, ರಾಘವೇಂದ್ರ ನಾಯಕ್, ರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Davanagere: ನಾವು ಮಾಡಿದ ಸಾಧನೆಗಳೇ ನಮ್ಮ ಪರಿಶ್ರಮದ ಅಳತೆಗೋಲುಗಳಾಗಬೇಕು:

ಪ್ರಸ್ತುತ ಮಣಿಪಾಲ ವೃತ್ತನಿರೀಕ್ಷಕ ದೇವರಾಜ್ ತಮ್ಮ ಸೇವಾವಧಿಯಲ್ಲಿ ತಾಂತ್ರಿಕವಾಗಿ ತನಿಖೆ ನಡೆಸಿ ಪ್ರಕರಣ ಭೇದಿಸಿರುವುದಕ್ಕೆ ಗೃಹಸಚಿವರ ಪ್ರಶಸ್ತಿ, ಜಿಲ್ಲಾ ಪೋಲಿಸ್ ಕಚೇರಿಯ ಅಪರಾಧ ವಿಭಾಗದಲ್ಲಿ ವಿಶೇಷ ಕರ್ತವ್ಯ ತೋರಿದ ಪ್ರಕಾಶ್ ( ರಾಷ್ಟ್ರಪತಿ ಪದಕ), ಶಿವಾನಂದ ( ಮುಖ್ಯಮಂತ್ರಿ ಪದಕ) ಪಡೆದವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಗಣ​ರಾ​ಜ್ಯೋ​ತ್ಸ​ವ​ದ ಪರೇ​ಡ್‌ನ ಮೊದಲ ಸಾಲು ಶ್ರಮಜೀವಿಗಳಿಗೆ ಮೀಸಲು

ಜಿಲ್ಲಾಧಿಕಾರಿ ಕೂರ್ಮಾ ರಾವ್ ಚುನಾವಣಾ ಆಯೋಗವು ನೀಡಿದ ಜಿಲ್ಲಾ ಚುನಾವಣಾ ಅಧಿಕಾರಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರನ್ನು ಸನ್ಮಾನಿಸಲಾಯಿತು.

click me!