ರಾಜ್ಯ ಸರ್ಕಾರ ಕೆಆರ್‌ಎಸ್ ಜಲಾಶಯದ ಬಳಿ ಕೇವಲ ಮನೋರಂಜನೆಗಾಗಿ ಪಾರ್ಕ್ ಮಾಡುವುದಾದರೆ ವಿರೋಧಿಸುತ್ತೇವೆ. ಮನರಂಜನೆಗೆ ಇತರೆಡೆ ಬೇಕಾದಷ್ಟು ಜಾಗಗಳಿವೆ. ಉದ್ಯಾನವನವನ್ನು ಕಲುಷಿತ ಗೊಳಿಸುವುದಕ್ಕೆ ನಮ್ಮದು ನಿರಂತರ ವಿರೋಧಿವಿದೆ: ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಶ್ರೀರಂಗಪಟ್ಟಣ(ಆ.16): ಕೃಷ್ಣರಾಜ ಸಾಗರ ಜಲಾಶಯ ಸುರಕ್ಷಿತ ಪ್ರದೇಶವಾಗಿದ್ದು, ಇಲ್ಲಿನ ಮೂಲ ಪಾರಂಪರಿಕತೆ ಉಳಿಸಿಕೊಂಡು ಪರಿಸರ ಸ್ನೇಹಿ ಉದ್ಯಾನವನ ನಿರ್ಮಿಸಿದರೆ ಮಾತ್ರ ಬೆಂಬಲಿಸುತ್ತೇವೆ. ಮನೋರಂಜನೆಗಾಗಿ ಪಾರ್ಕ್ ಮಾಡಿದರೆ ವಿರೋಧಿಸುತ್ತೇವೆ ಎಂದು ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕೆಆರ್ಎಸ್ ಅಣೆಕಟ್ಟೆಯಲ್ಲಿ ಗುರುವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಾಮುಂಡಿಬೆಟ್ಟ ದೇವಸ್ಥಾನದ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸಂಸದ ಯದುವೀರ್ ಒಡೆಯರ್
ರಾಜ್ಯ ಸರ್ಕಾರ ಕೆಆರ್‌ಎಸ್ ಜಲಾಶಯದ ಬಳಿ ಕೇವಲ ಮನೋರಂಜನೆಗಾಗಿ ಪಾರ್ಕ್ ಮಾಡುವುದಾದರೆ ವಿರೋಧಿಸುತ್ತೇವೆ. ಮನರಂಜನೆಗೆ ಇತರೆಡೆ ಬೇಕಾದಷ್ಟು ಜಾಗಗಳಿವೆ. ಉದ್ಯಾನವನವನ್ನು ಕಲುಷಿತ ಗೊಳಿಸುವುದಕ್ಕೆ ನಮ್ಮದು ನಿರಂತರ ವಿರೋಧಿವಿದೆ ಎಂದು ತಿಳಿಸಿದರು.