ರೈತರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ: ಸಚಿವ ನಾಗೇಶ್‌

By Govindaraj S  |  First Published Sep 14, 2022, 8:31 AM IST

ಅನ್ನದಾತ ನೀರು ಮತ್ತು ಗೊಬ್ಬರಕ್ಕೆ ಬೇಡಿಕೆ ಇಡುತ್ತಾನೆ. ಆದರೆ ಈ ಬಾರಿ ರಾಜ್ಯದಾದ್ಯಂತ ವರುಣ ದೇವನ ಕೃಪೆಯಿಂದ ಹತ್ತಾರು ದಶಕಗಳಿಂದ ತುಂಬದ ಕೆರೆಕಟ್ಟೆಗಳು ಭರ್ತಿಯಾಗಿದ್ದು ರೈತನ ಇತರೆ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.


ತಿಪಟೂರು (ಸೆ.14): ಅನ್ನದಾತ ನೀರು ಮತ್ತು ಗೊಬ್ಬರಕ್ಕೆ ಬೇಡಿಕೆ ಇಡುತ್ತಾನೆ. ಆದರೆ ಈ ಬಾರಿ ರಾಜ್ಯದಾದ್ಯಂತ ವರುಣ ದೇವನ ಕೃಪೆಯಿಂದ ಹತ್ತಾರು ದಶಕಗಳಿಂದ ತುಂಬದ ಕೆರೆಕಟ್ಟೆಗಳು ಭರ್ತಿಯಾಗಿದ್ದು ರೈತನ ಇತರೆ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು. 

ತಾಲೂಕಿನ ಮಸವನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 6 ಕೋಟಿ 50 ಲಕ್ಷದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಮೊದಲ ಆದ್ಯತೆ ನಾಗರೀಕರ ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ನೈರ್ಮಲ್ಯ, ರೈತರಿಗೆ ಸಮಯಕ್ಕೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿದೆ. ಆದರೆ ಕೆಲವೊಂದು ಯೋಜನೆಗಳಲ್ಲಿ ಅಧಿಕಾರಿಗಳ ಉದಾಸೀನತೆಯಿಂದ ತಡವಾಗುತ್ತಿದ್ದು, ಸಂಬಂಧಪಟ್ಟಗುತ್ತಿಗೆದಾರರು ಹಾಗೂ ಅಧಿಕಾರಿಗಳು ಲೋಪದೋಷವೆಸಗಿದರೆ ನಿರ್ದಾಕ್ಷ್ಮಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

Tap to resize

Latest Videos

ಅರಸರಿಗೆ ಜನತೆ ಋಣಿಯಾಗಿರಬೇಕು; ಸಚಿವ ಮಾಧುಸ್ವಾಮಿ

ಈ ಸಂದರ್ಭದಲ್ಲಿ ತಾಲೂಕಿನ ಜಾಬಘಟ್ಟ, ಮಸವನಘಟ್ಟ, ಗಂಜಲಘಟ್ಟ, ಸಣ್ಣೇನಹಳ್ಳಿ ಕೆರೆಗಳಿಗೆ ಬಾಗಿನ ಸಮರ್ಪಿಸಿದರು. ನಂತರ ವಿರುಪಾಕ್ಷಿಪುರದ ರಸ್ತೆ ಮತ್ತು ಚರಂಡಿಯ ಗುಣಮಟ್ಟಪರಿಶೀಲಿಸಿದರು. ಜಾಬಘಟ್ಟ ಗ್ರಾಮದಲ್ಲಿ ಜಲ್‌ಜೀವನ್‌ ಮಿಷನ್‌ ಅಡಿಯಲ್ಲಿ ಮನೆಮನೆಗೆ ಶುದ್ದ ನೀರು ಸರಬರಾಜು ಯೋಜನೆಗೆ 59 ಲಕ್ಷ ರೂ ವೆಚ್ಚದ ಕಾಮಗಾರಿ ಹಾಗೂ 35 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ಮಾಡಿದರು.

ಮಾಟನಹಳ್ಳಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ವಿರೂಪಾಕ್ಷಿಪುರ ರಸ್ತೆಗೆ 4 ಲಕ್ಷ, ಕಂಪಾರಹಳ್ಳಿ ರಸ್ತೆ 42 ಲಕ್ಷ, ಮಳೆಕೊಪ್ಪಲು 7ಲಕ್ಷ, ರಾಯಶೆಟ್ಟಹಳ್ಳಿ 12ಲಕ್ಷ, ಗಂಜಲಘಟ್ಟ ರಸ್ತೆಗೆ 12ಲಕ್ಷ, ಮಸವನಘಟ್ಟಸಿಸಿ ರಸ್ತೆಗೆ 10ಲಕ್ಷ, ಮನೆ ಮನೆಗೆ ಕುಡಿಯುವ ನೀರು ಯೋಜನೆಗೆ 71ಲಕ್ಷ, ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಸಣ್ಣೇನಹಳ್ಳಿಯಲ್ಲಿ ಡಿಜಿಟಲ್‌ ಗ್ರಂಥಾಲಯ ಶಂಕುಸ್ಥಾಪನೆಗೆ 5 ಲಕ್ಷ, ಸಿಸಿ ರಸ್ತೆ ಕಾಮಗಾರಿ 10ಲಕ್ಷ, ಜಲಜೀವನ್‌ ಮಿಷನ್‌ ಅಡಿಯಲ್ಲಿ ನೀರು ಸರಬರಾಜಿಗೆ 81ಲಕ್ಷ ಕಾಮಗಾರಿ ಹಾಗೂ ಬಿಸಲೇಹಳ್ಳಿ, ಗುಂಗುರಮಳೆ ರಸ್ತೆಗೆ 40ಲಕ್ಷ, ಕುಡಿಯುವ ನೀರು ಸರಬರಾಜಿಗೆ 78ಲಕ್ಷ, ಮೂಡಲಕೊಪ್ಪಲು, ಸಿಸಿ ರಸ್ತೆಗೆ 45 ಲಕ್ಷ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು.

ಗುರುಕುಲ ವಿದ್ಯಾರ್ಥಿಗಳ ಸಾಧನೆ: ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2021-22ನೇ ಸಾಲಿನ ನೀಟ್‌ ಮತ್ತು ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರಿಗೆ ಬರೆದ ಪತ್ರದಲ್ಲಿ ಮೆಚ್ಚುಗೆ ತಿಳಿಸಿ, ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಮೂಲಕ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. 

ಯಾವ ಪುರುಷಾರ್ಥಕ್ಕಾಗಿ ಜನಸ್ಪಂದನ: ಈಶ್ವರ್‌ ಖಂಡ್ರೆ ಅಸಮಾಧಾನ

ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 13 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ರಾರ‍ಯಂಕ್‌ ಪಡೆದಿರುವ ವಿಷಯ ತಿಳಿದು ಸಂತಸವಾಯಿತು. ಸ್ಪರ್ಧಾತ್ಮಕ, ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಮತ್ತು ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವಲ್ಲಿ ತಮ್ಮ ಶಿಕ್ಷಣ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಉತ್ತಮ ರಾರ‍ಯಂಕ್‌ ಗಳಿಸಿ ಹಿಂದುಳಿದ ಕಲ್ಯಾಣ ಕರ್ನಾಟಕದ ಹೆಸರನ್ನು ಬೆಳಗಿಸಲಿ ಎಂದು ಹಾರೈಸಿ, ಸಂಸ್ಥೆಯ ನಿರ್ದೇಶಕ ಶಶಿಧರ ಕೋಸಂಬೆ ಅವರಿಗೆ ಪತ್ರ ಹಸ್ತಾಂತರಿಸಿದರು.

click me!