Asianet Suvarna News Asianet Suvarna News

ಅರಸರಿಗೆ ಜನತೆ ಋಣಿಯಾಗಿರಬೇಕು; ಸಚಿವ ಮಾಧುಸ್ವಾಮಿ

  • ಬೋರನಕಣಿವೆ ಜಲಾಶಯ ನಿರ್ಮಿಸಿದ ಅರಸರಿಗೆ ಜನತೆ ಋುಣಿಯಾಗಿರಬೇಕು
  • ಜಲಾಶಯಕ್ಕೆ ಬಾಗಿನ ಸಲ್ಲಿಸಿದ  ಸಚಿವ
  • 21 ವರ್ಷಗಳ ನಂತರ 15ನೇ ಬಾರಿ ತುಂಬಿ ಕೋಡಿ ಬಿದ್ದ ಡ್ಯಾಂ
  • ಡ್ಯಾಂಗೆ ಆಟೋಮ್ಯಾಟಿಕ್‌ ಗೇಟ್‌ ಅಳವಡಿಕೆ: ಮಾಧುಸ್ವಾಮಿ
The people must be indebted to the king; Minister Madhuswami rav
Author
First Published Sep 12, 2022, 8:11 AM IST

ಚಿಕ್ಕನಾಯಕನಹಳ್ಳಿ (ಸೆ.12) : ಹುಳಿಯಾರು ಹೋಬಳಿಯ ಸುವರ್ಣಮುಖಿ ಬೋರನಕಣಿವೆ ಜಲಾಶಯ ನೈಸರ್ಗಿಕವಾಗಿ 2 ಗುಡ್ಡದ ನಡುವೇ ಕೇವಲ 39 ಮೀಟರ್‌ನಷ್ಟುಡ್ಯಾಂ ಕಟ್ಟಿ2.7 ಟಿಎಂಸಿ ನೀರು ಶೇಖರಣೆಯಾಗುವಂತೆ ಮಾಡಿ ಈ ಭಾಗದ ರೈತರ 2000 ಎಕರೆ ಅಚ್ಚುಕಟ್ಟುದಾರರ ಬದುಕಿಗೆ ಆಶಾ ದೀಪವಾಗಿರುವ ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್‌ರ ಶ್ಲಾಘನೀಯ ಕಾರ್ಯಕ್ಕೆ ಜನತೆ ಋುಣಿಯಾಗಿರಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ತಾಲೂಕಿನ ಹುಳಿಯಾರು ಹೋಬಳಿಯ 130 ವರ್ಷಗಳ ಇತಿಹಾಸದ ಬೋರನಕಣಿವೆ ಜಲಾಶಯ 21 ವರ್ಷಗಳ ನಂತರ 15ನೇ ಬಾರಿ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗಂಗಾಪೂಜೆ, ಬಾಗಿನವನ್ನು ಅರ್ಪಿಸಿ ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದರು.

ಸಿದ್ದು ದಾವಣಗೆರೆ ಕಾರ‍್ಯಕ್ರಮಕ್ಕೆ ಜನ ಸೇರಿಸಿದ್ದರು: ಸಚಿವ ಮಾಧುಸ್ವಾಮಿ

ಮಳೆ ಬರಲಿ ಬಿಡಲಿ ಮುಂದಿನ ದಿನಗಳಲ್ಲಿ ಬೋರನಕಣಿವೆ ಜಲಾಶಯ ಸದಾಕಾಲ ತುಂಬಿರುವಂತ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿದ್ದೇನೆ. ಆದರೆ ಈ ಯೋಜನೆಗಳು ಅನುಷ್ಟಾನ ಆಗುವ ಮೊದಲೇ ಪ್ರಕೃತಿ ಈ ವರ್ಷ ಜಲಾಶಯವನ್ನು ತುಂಬಿಸಿರುವುದು ಹರ್ಷದಾಯಕ. ನಾವು ಜಾರಿ ಮಾಡಿರುವ ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರ ಯೋಜನೆಗಳು ಅನುಷ್ಠಾನವಾದರೆ ಈಗಿರುವ ಸ್ಥಿತಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಂಟೆನಹಳ್ಳಿ ಕೆರೆಯಿಂದ ಗಾಯತ್ರಿ ಜಲಾಶಯಕ್ಕೆ ಹೋಗುತ್ತಿದ್ದ ನೀರನ್ನು ಬೋರನಕಣಿವೆ ಹರಿಸಲು ಚಿಂತನೆ ನಡೆದಿದ್ದು ಮೊದಲು ಬಡಕೆಗುಡ್ಲು ಬಳಿ ತಡೆದು ಪಂಪ್‌ ಮಾಡಲು ನಿರ್ಧರಿಸಿದ್ದೆವು. ಆದರೆ ತಿಮ್ಮನಹಳ್ಳಿ ಜನರು ಗುಡ್ಡಗಳ ನಡುವೆ ಸುರಂಗ ಮಾಡಿದರೆ ನೈಸರ್ಗಿಕವಾಗಿ ನೀರು ಹರಿಯುತ್ತದೆ ಎಂದು ಸಲಹೆ ನೀಡಿದ್ದು ಅದರ ಸಾಧಕ ಬಾಧಕಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ, ಮುಖ್ಯ ಎಂಜಿನಿಯರ್‌ ರಾಘವ್‌, ಹೊಯ್ಸಲಕಟ್ಟೆಗ್ರಾಪಂ ಅಧ್ಯಕ್ಷೆ ಗೀತಾ ಅಜ್ಜಪ್ಪ, ಉಪಾಧ್ಯಕ್ಷೆ ಕಮಲಮ್ಮ, ಕೆಂಕೆರೆ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್‌, ದಸೂಡಿ ಗ್ರಾಪಂ ಅಧ್ಯಕ್ಷ ಚೇತನ್‌, ತಾಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ನಿರಂಜನ್‌ಮೂರ್ತಿ, ಶಿವರಾಜ್‌, ರಘುವೀರ್‌, ವಿನಯ್‌, ನಿರಾವರಿ ಇಲಾಖೆಯ ಸಂಜಯ್‌ ರಾಜ್‌, ರವಿ, ಪ್ರಭಾಕರ್‌ ಮತ್ತಿತರರು ಇದ್ದರು.

ಮಾಧುಸ್ವಾಮಿ ಹೇಳಿಕೆ ಸಾಕು ಸರಕಾರ ಅಸಮರ್ಥ ಎನ್ನಲು: ಕಾಂಗ್ರೆಸ್

ತೋಟಗಾರಿಕೆ ಬೆಳೆಗೆ ಅಗತ್ಯ ನೀರನ್ನು ನೀಡಲು ಸಿದ್ಧ:

ಸಣ್ಣ ನೀರಾವರಿ ಸಚಿವರಾದ ನಂತರ ಬೋರನಕಣಿವೆ ಡ್ಯಾಮ್‌ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು ಹಳೆ ಗೇಟು ತೆಗೆದು ಹೆಚ್ಚು ನೀರು ಬಂದರೆ ಆಟೋಮ್ಯಾಟಿಕ್‌ ಆಗಿ ಗೇಟ್‌ ಓಪನ್‌ ಆಗುವ ನೀರಿನ ಒತ್ತಡ ಕಡಿಮೆ ಆದಾಗ ಗೇಟ್‌ ಕ್ಲೋಸ್‌ ಆಗುವ ನಾಲ್ಕು ಗೇಟ್‌ಗಳನ್ನು ನಿರ್ಮಿಸಿರುವುದು ಸೇರಿದಂತೆ 2.5 ಕೋಟಿ ರು. ವೆಚ್ಚದಲ್ಲಿ ಜನ ಬಂದು ಡ್ಯಾಮ್‌ ನೋಡುವಂತೆ ಆಧುನೀಕರಿಸಿದ್ದೇನೆ. ಇದೂವರೆಗೂ ಗದ್ದೆಗಳಿಗೆ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ಆದರೆ ಈಗ ಅನೇಕ ರೈತರು ಗದ್ದೆ ಜಾಗದಲ್ಲಿ ಅಡಕೆ, ತೆಂಗು ಹಾಕಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ರೈತರು ತೋಟಗಾರಿಗೆ ಬೆಳೆ ಬೆಳೆಯಲು ನಿರ್ಧರಿಸಿದರೆ ತೋಟಗಾರಿಕೆ ಬೆಳೆಗೆ ಅಗತ್ಯವಾದ ನೀರನ್ನು ನೀಡಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಮಧುಸ್ವಾಮಿ ಸೂಚಿಸಿದರು.

Follow Us:
Download App:
  • android
  • ios