ಮಹಿಳೆಯರು ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ, ಇದನ್ನು ಮಾಡುವುದಕ್ಕಾಗಿ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಹೊಳಲ್ಕೆರೆ (ಡಿ.26): ಮಹಿಳೆಯರು ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ, ಇದನ್ನು ಮಾಡುವುದಕ್ಕಾಗಿ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು. ಹೊಳಲ್ಕೆರೆ ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ವಿಕಾಸ ಸೌಧ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆಯರು ಅರ್ಥಿಕವಾಗಿ ಸ್ವಾವಲಂಬಿಗಳಾಗಲು ನಮ್ಮ ಸಂಸ್ಥೆ ನೆರವಾಗಿದೆ. ಅವರನ್ನು ಮನೆಯ ಆರ್ಥಿಕ ಮಂತ್ರಿಯನ್ನಾಗಿ ಮಾಡಲಾಗುತ್ತಿದೆ ಎಂದರು.
ಮಹಿಳೆಯರ ಮೇಲೆ ಆಪಾರವಾದ ನಂಬಿಕೆ ಇದೆ. ಅವರಿಗೆ ಸಾಲ ನೀಡಿದರೆ ವಾಪಾಸ್ಸು ಬರುತ್ತದೆ ಎಂಬ ನಂಬಿಕೆ ಇದೆ. ಅವರು ಪಡೆದ ಸಾಲವನ್ನು ಸರಿಯಾಗಿ ಉಪಯೋಗವನ್ನು ಮಾಡುತ್ತಾರೆ. ಅದೇ ರೀತಿ ವಾಪಸ್ಸು ಮಾಡುತ್ತಾರೆ ಇದರಿಂದ ನಾವು ಅಲ್ಲದೆ ಬ್ಯಾಂಕ್‌ಗಳು ಸಹಾ ಮಹಿಳೆಯರಿಗೆ ಸಾಲವನ್ನು ನೀಡಲು ಮುಂದಾಗಿದೆ ಎಂದು ತಿಳಿಸಿದರು. ನಮ್ಮಲ್ಲಿ ಸ್ವಸಹಾಯ ಸಂಘಗಳಲ್ಲಿ ಪ್ರತಿ ವರ್ಷ ರೇಟಿಂಗ್ ನೀಡಲಾಗುತ್ತದೆ. ಇದರಲ್ಲಿ ಉತ್ತಮವಾಗಿ ಕೆಲಸವನ್ನು ಮಾಡುವ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತದೆ ಹೊಳಲ್ಕೆರೆಯಲ್ಲಿ ಇರುವ ೪೦೦೦ ಸಂಘಗಳಲ್ಲಿ ೫೦ ಸಂಘಗಳು ಪ್ರಗತಿ ಕಡಿಮೆಯಾಗಿದೆ ಇದನ್ನು ಸರಿಪಡಿಸಬೇಕಿದೆ ಎಂದು ಕರೆ ನೀಡಿದರು.
undefined
ಕೇವಲ ಕಾಂಗ್ರೆಸ್ ಅಲ್ಲ, ಎಲ್ಲರ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
ಮಾನವನನ್ನು ತೃಪ್ತಿ ಪಡಿಸಲು ಅನ್ನದಿಂದ ಮಾತ್ರ ಸಾಧ್ಯವಿದೆ. ಬೇರೆ ಏನನ್ನಾದರೂ ನೀಡದರೂ ಇನ್ನೂ ಬೇಕು ಎನ್ನಲಾಗುತ್ತದೆ, ನಮ್ಮ ಸಂಸ್ಥೆಯಿಂದ ಅನ್ನದಾನ, ವಿಧ್ಯಾದಾನ, ಆರೋಗ್ಯ ಹಾಗೂ ಆಭಯವನ್ನು ನೀಡುವಂತ ಕಾರ್ಯವನ್ನು ಮಾಡಲಾಗುತ್ತಿದೆ. ಜನತೆ ಸ್ವಯಂ ಉದ್ಯೋಗಿಗಳಾಗಲು ವಿವಿಧ ರೀತಿಯ ತರಬೇತಿಯನ್ನು ನೀಡುವುದರ ಮೂಲಕ ಆವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಜನತೆ ಸ್ವಾವಲಂಬಿಗಳಾಗುವ ಮೂಲಕ ತಮ್ಮ ಬಡತನವನ್ನು ನಿವಾರಣೆ ಮಾಡಿಕೊಳ್ಳಬೇಕಿದೆ ಎಂದರು.
ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆ ಮಾಡಿದ ಸಂಸದ ಗೋವಿಂದ ಎಮ್.ಕಾರಜೋಳ ಮಾತನಾಡಿ, ಹೊಳಲ್ಕೆರೆಯಲ್ಲಿ ೪೫೦೦ ಸ್ವಸಹಾಯ ಸಂಘಗಳಿದ್ದು ಇದರಲ್ಲಿ ೪೦ ಸಾವಿರ ಜನ ಸದಸ್ಯರಿದ್ದಾರೆ. ಹೊಳಲ್ಕೆರೆಯಲ್ಲಿ ಸಂಘದವರು ಉಳಿತಾಯದ ಇದುವರೆವಿಗೆ ೨೪.೪೬ ಕೋಟಿ ಆಗಿದೆ, ಉತ್ತಮವಾದ ನಿರ್ವಹಣೆಯನ್ನು ಮಾಡಿದ ಸಂಘಗಳಿಗೆ ಬ್ಯಾಂಕ್‌ಗಳಿಂದ ೨೦೪.೧೬ ಕೋಟಿ ರು. ಸಾಲವನ್ನು ಕೊಡಿಸಲಾಗಿದ್ದು, ಉತ್ತಮವಾದ ಆರ್ಥಿಕ ವ್ಯವಹಾರವನ್ನು ನಡೆಸಿದ ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಗುತ್ತಿದೆ. ಇದುವರೆಗೂ ಎರಡು ಬಾರಿ ಲಾಭಾಂಶವನ್ನು ವಿತರಣೆ ಮಾಡಲಾಗಿದೆ. ಈಗ ಮೂರನೇ ಬಾರಿ ಲಾಭಾಂಶವನ್ನು ವಿತರಣೆ ಮಾಡಲು ಸಂಘ ಮುಂದಾಗಿದ್ದು ೨೭೦೩ ಸಂಘಗಳಿಗೆ ೧೧ ಕೋಟಿ ರು.ಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಮಾಡಿದ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಮಾತನಾಡಿ, ಧರ್ಮಸ್ಥಳದ ಸಂಘಗಳ ಬಗ್ಗೆ ಹಲವಾರು ಜನತೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಆದರೆ ಇವರು ಯಾವುದೇ ರೀತಿಯ ಸ್ವಾರ್ಥ ಇಲ್ಲದೆ ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡುವುದರ ಮೂಲಕ ಆವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ನಿರಾಶ್ರಿತ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು, ಇದರ ಹಸ್ತಾಂತರವನ್ನು ಫಲಾನುಭವಿಗಳಿಗೆ ಮಾಜಿ ಸಚಿವ ಎಚ್.ಆಂಜನೇಯ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕ್ಷೇತ್ರದ ಮೂಲಕ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆಯನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ನೇರವೇರಿಸಿದರು.
ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಸುಮಿತ್ರಕ್ಕ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಸಮಗ್ರ ಕಾರ್ಯಕ್ರಮಗಳ ಕುರಿತು ಆಶಯ ಭಾಷಣವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್‌ಕುಮಾರ್‌ಎಸ್.ಎಸ್ ನೇರವೇರಿಸಿದರು. ಪುರಸಭೆಯ ಮಾಜಿ ಅಧ್ಯಕ್ಷರುಗಳಾದ ಆರ.ಎ.ಆಶೋಕ್, ಬಿ.ಎಸ್.ರುದ್ರಪ್ಪ. ಮಾಜಿ ಉಪಾಧ್ಯಕ್ಷ ಕೆ.ಸಿ.ರಮೇಶ್, ಹಾಲಿ ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ, ಸದಸ್ಯ ಸೈಯದ್ ಮನ್ಸೂರ್, ಮಲ್ಲಿಕಾರ್ಜನ್, ವಿಜಯ ಶ್ರೀಮತಿ ಮಮತ, ಮುರುಗೇಶ್, ಶಬೀನ ಆಶ್ರಫ್ ವುಲ್ಲಾ, ಸೈಯದ್ ಸಜಿಲ್ ಶ್ರೀಪೂರ್ಣಿಮ ಶ್ರೀಮತಿ ಸುಧಾ, ಶ್ರೀಮತಿ ವಸಂತ ಮಂಜುನಾಥ್, ಬಸಬರಾಜು ಮತ್ತಿತರರಿದ್ದರು.
ರಾಜಕಾರಣಿಗಳು ಧರ್ಮಸ್ಥಳವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ಒಂದು ಕಾಲದಲ್ಲಿ ಧರ್ಮಸ್ಥಳ ಎಂದರೆ ಸತ್ಯ ನ್ಯಾಯಕ್ಕೆ ಹೆಸರಾಗಿತ್ತು. ಆದರೆ ಇಂದಿನ ದಿನಮಾನದಲ್ಲಿ ರಾಜಕಾರಣಿಗಳು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ವಿಷಾದಿಸಿದರು. ಚುನಾವಣೆ ವೇಳೆ ದೇವರ ಚಿತ್ರ ಹಿಡಿದುಕೊಂಡು ಹಣ ಹಂಚುವ ಮೂಲಕ ರಾಜಕಾರಣಿಗಳು ಜನರ ದಿಕ್ಕುತಪ್ಪಿಸಿದರು. ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ರಾಜಕಾರಣಿಗಳು ಆಣೆ ಪ್ರಮಾಣದ ಚೇಷ್ಟೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಧರ್ಮಸ್ಥಳದ ಚಿತ್ರ ಹಿಡಿದು ಮಾತು ತಪ್ಪಿದರೆ ಅನಾಹುತ ಅಂತ ಹಣ ಹಂಚಿದ ನಿದರ್ಶನಗಳೂ ಇವೆ ಎಂದರು.
ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ 6ನೇ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಿದ್ಧತೆ
ಹೆಗ್ಗಡೆಯವರ ಆಶಿರ್ವಾದ ಕ್ಷೇತ್ರದ ಮೇಲೆ ಇರಲಿ: ಸಾರ್ವಜನಿಕರ ಬದುಕನ್ನು ಅರ್ಥ ಮಾಡಿಕೊಂಡು ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದೇನೆ. ಅಧಿಕಾರ ಶಾಶ್ವತವಲ್ಲ ಎನ್ನುವ ಸಂಗತಿ ನನಗೆ ಗೊತ್ತಿದೆ. ಕಳೆದ ೩೦ ವರ್ಷಗಳಿಂದ ಇದನ್ನು ಅರಿತು ಕೆಲಸ ಮಾಡುತ್ತಿದ್ದೇನೆ ಎಂದ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ನನ್ನ ಕ್ಷೇತ್ರದ ಮೇಲೆ ಇರಲೆಂದು ಶಾಸಕ ಡಾ.ಎಂ.ಚಂದ್ರಪ್ಪ ಕೋರಿದರು.