ಡಿ. 26ರಂದು ಎಸ್ಎಸ್ಎಸ್ ಹುಬ್ಬಳ್ಳಿ-ಪ್ರಯಾಗ್‌ರಾಜ್ ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07369) ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 11 ಗಂಟೆಗೆ ಹೊರಟು, ಶನಿವಾರ ಬೆಳಗ್ಗೆ 3 ಗಂಟೆಗೆ ಪ್ರಯಾಗ್‌ರಾಜ್ ತಲುಪಲಿದೆ.
ಹುಬ್ಬಳ್ಳಿ(ಡಿ.25): ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಹುಬ್ಬಳ್ಳಿಯಿಂದ ಪ್ರಯಾಗ್‌ರಾಜ್‌ಗೆ ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲು ನಿರ್ಧರಿಸಿದೆ.
ಡಿ. 26ರಂದು ಎಸ್ಎಸ್ಎಸ್ ಹುಬ್ಬಳ್ಳಿ-ಪ್ರಯಾಗ್‌ರಾಜ್ ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07369) ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 11 ಗಂಟೆಗೆ ಹೊರಟು, ಶನಿವಾರ ಬೆಳಗ್ಗೆ 3 ಗಂಟೆಗೆ ಪ್ರಯಾಗ್‌ರಾಜ್ ತಲುಪಲಿದೆ.
undefined
IRCTC ಸೂಪರ್ ಟೂರ್ ಪ್ಯಾಕೇಜ್; ಬೆಂಗಳೂರು ಕನ್ಯಾಕುಮಾರಿ, ರಾಮೇಶ್ವರಂ ಮಧುರೈ ಪ್ರವಾಸ!
ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಚೋರ್ಡ್ ಲೈನ್, ಅಹ್ಮದ್‌ನಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬಾನಾಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ರೈಲು 11 ಸ್ಲೀಪರ್ ಕ್ಲಾಸ್, 7 ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎಸ್ಎಲ್ಆರ್ ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ. ಈ ರೈಲಿನ ಆಗಮನ, ನಿರ್ಗಮನ ಸಮಯ ತಿಳಿಯಲು ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್ ಸೈಟ್ www.enquiry.indianrail.gov.in ಭೇಟಿ ನೀಡಿ, 139 ನಂಬರ್ ಗೆ ಡಯಲ್ ಮಾಡಿ ಅಥವಾ ಎನ್‌ಟಿಇಎಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮಾಹಿತಿ ಪಡೆಯಬಹುದು ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಮಹಾಕುಂಭ ಮೇಳ-2025: ಪ್ರಯಾಗರಾಜ್ ರೈಲ್ವೆ ನಿಲ್ದಾಣದಲ್ಲಿ ವೇಟಿಂಗ್ ಲಾಂಜ್, ಭಕ್ತರಿಗೆ ಅನುಕೂಲ!
ಪ್ರಯಾಗರಾಜ್: ದೇಶದ ಬಹುದೊಡ್ಡ ಆಧ್ಯಾತ್ಮಿಕ ಹಬ್ಬವೆನಿಸಿರುವ ಪ್ರಯಾಗರಾಜದಲ್ಲಿ ನಡೆಯಲಿರುವ 'ಮಹಾಕುಂಭ ಮೇಳ-2025' ದಲ್ಲಿ ಭಾಗವಹಿಸುವ ಭಕ್ತರಿಗೆ ರೈಲು ನಿಲ್ದಾಣದಲ್ಲಿ ವೇಟಿಂಗ್ ಲಾಂಜ್, ಭದ್ರತೆಗಾಗಿ 1160 ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳು ಕಣ್ಣಾವಲು ಇರಿಸಲಾಗಿದೆ.
ಪ್ರಯಾಗರಾಜ್ ಜಂಕ್ಷನ್‌ನಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ವಿಶ್ರಾಂತಿ ತಾಣ (ವೇಟಿಂಗ್ ಲಾಂಜ್) ಮಾಡಿದೆ. ಜ. 13ರಿಂದ ಫೆ. 26ರ ವರೆಗೆ 3000 ವಿಶೇಷ ರೈಲು ಸಂಚರಿಸಲಿವೆ. ಹೀಗಾಗಿ ನಾಲ್ಕು ದಿಕ್ಕುಗಳಿಂದ ಭಕ್ತರ ಸಂಖ್ಯೆ ಆಗಮಿಸುತ್ತದೆ. ನೂಕು ನುಗ್ಗಾಟ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ವಿಶ್ರಾಂತಿ ತಾಣ ಮಾಡಲಾಗಿದೆ.
ಮಹಾ ಕುಂಭಮೇಳಕ್ಕೆ ಹೋಗಲು ಪ್ರಯಾಗರಾಜ್‌ಗೆ ವಿಶೇಷ ರೈಲು ವ್ಯವಸ್ಥೆ
ಭಕ್ತರಿಗೆ ಸಲೀಸಾಗಿ ಗೊತ್ತಾಗಲಿ ಎಂಬ ಉದ್ದೇಶದಿಂದ ನೀಲಿ, ಕೇಸರಿ ಈ ರೀತಿ ಬೇರೆ ಬೇರೆ ಬಣ್ಣ ಬಳಿಯಲಾಗಿದೆ. ಇಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಕೂಡಾ ಮಾಡಲಾಗಿದೆ. ಒಂದೊಂದು ವಿಶ್ರಾಂತಿ ತಾಣದಲ್ಲಿ ಏಕಕಾಲಕ್ಕೆ 5 ಸಾವಿರ ಭಕ್ತರು ರೈಲು ಬರುವರೆಗೆ ಉಳಿದುಕೊಳ್ಳಬಹುದಾಗಿದೆ. ಭಕ್ತರಿಗೆ ಮಾಹಿತಿ ನೀಡಲು ಆರ್‌ಪಿಎಫ್, ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಇಲಾಖೆಯ ಸರಿಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಒಂದು ವಿಶ್ರಾಂತಿ ತಾಣದಲ್ಲಿ ನಿರಂತರ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಯಾವುದೇ ಬಗೆಯ ಗೋಜು-ಗದ್ದಲ, ನೂಕು ನುಗ್ಗಾಟಕ್ಕೆ ಅವಕಾಶ ಕಲ್ಪಿಸದೇ ಭಕ್ತರು ಮಹಾಕುಂಭಕ್ಕೆ ಆಗಮಿಸಿ ಅಲ್ಲಿಂದ ತಮ್ಮ ಮ್ಮ ತಮ್ಮ ಗಮ್ಯ ಸ್ಥಳಕ್ಕೆ ಹೋಗ ಹೋಗಲು ಉತ್ತರ ಮಧ್ಯ ರೈಲ್ವೆ ವಲಯ ವ್ಯವಸ್ಥೆ ಮಾಡಿದೆ.
1186 ಸಿಸಿ ಕ್ಯಾಮೆರಾ:
ಕುಂಭಮೇಳಕ್ಕೆ ಆಗಮಿಸುವವರ ಪೈಕಿ ಬಹುತೇಕರು ಬರುವುದು ರೈಲಿನ ಮೂಲಕವೇ. ಪ್ರಯಾಗರಾಜ್ ಜಂಕ್ಷನ್. ರಾಮಬಾಗ್, ಜೂಸಿ ಸೇರಿ ಪ್ರಯಾಗರಾಜ್ ನಗರ ವ್ಯಾಪ್ತಿಯಲ್ಲಿ 9 ರೈಲ್ವೆ ನಿಲ್ದಾಣಗಳಿವೆ. ಈ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 1186 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಪೇಸ್ ರಿಕನ್ಯಾಜೇಶನ ಸಿಸ್ಟಂ ಕ್ಯಾಮೆರಾಗಳಿವೆ. ಕಂಟ್ರೋಲ್ ರೂಮ್ ನಿರ್ವಹಿಸುತ್ತಿದೆ. ಕಂಟ್ರೋಲ್ ರೂಮ್‌ನಲ್ಲಿ ದಿನದ 24 ಗಂಟೆ 12ಕ್ಕೂ ಅಧಿಕ ಆರ್‌ಪಿಎಫ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅತಿ ಅತಿ ದೊಡ್ಡ ಧಾರ್ಮಿಕ ದೊಡ್ಡ ಧಾರ್ಮಿಕ ಹಬ್ಬಕ್ಕೆ ಹಬ್ಬಕ್ಕೆ ಯಾವುದೇ ಆತಂಕವಿಲ್ಲದೇ ಬನ್ನಿ. ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅಭಯ ಹಸ್ತ ನೀಡುತ್ತಾರೆ ಆರ್‌ಪಿಎಫ್ ಅಧಿಕಾರಿ ವರ್ಗ.
ಕುಂಭಮೇಳಕ್ಕೆ ದೇಶದ ವಿವಿಧೆಡೆಯಿಂದ ಬರುವ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ನಾಲ್ಕು ಪ್ರತ್ಯೇಕ ವಿಶ್ರಾಂತಿ ತಾಣ ಮಾಡಿದೆ. ಕುಡಿಯುವ ನೀರು, ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸುರಕ್ಷತೆ ಹಾಗೂ ಭದ್ರತೆಗಾಗಿ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಕ್ರಮ ಅಳವಡಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ತಿಳಿಸಿದ್ದಾರೆ.