ಆಸ್ಕರ್ ಆರೋಗ್ಯ ವಿಚಾರಿಸಿ ಕೊಂಕಣ ರೈಲ್ವೆ ಕೆಲಸ ನೆನೆದ ಪೂಜಾರಿ

Published : Jul 25, 2021, 08:39 PM ISTUpdated : Jul 25, 2021, 08:41 PM IST
ಆಸ್ಕರ್ ಆರೋಗ್ಯ ವಿಚಾರಿಸಿ ಕೊಂಕಣ ರೈಲ್ವೆ ಕೆಲಸ ನೆನೆದ ಪೂಜಾರಿ

ಸಾರಾಂಶ

* ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ  * ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಸಿಟ್ * ಆಸ್ಕರ್ ಆರೋಗ್ಯ ವಿಚಾರಿಸಿದ ಕೋಟಾ ಶ್ರೀನಿವಾಸ ಪೂಜಾರಿ * ಆಸ್ಕರ್ ರನ್ನ ಕಂಡ ಬಳಿಕ ಕುಟುಂಬಸ್ಥರ ಜೊತೆ ಮಾತನಾಡಿ ಧೈರ್ಯ ತುಂಬಿದ ಪೂಜಾರಿ

ಮಂಗಳೂರು(ಜು. 25) ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಆಸ್ಕರ್ ಆರೋಗ್ಯ ವಿಚಾರಿಸಿದ ಕೋಟಾ ಶ್ರೀನಿವಾಸ ಪೂಜಾರಿ ಆಸ್ಕರ್ ರನ್ನ ಕಂಡ ಬಳಿಕ ಕುಟುಂಬಿಕರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

ಆಸ್ಕರ್ ಕುಟುಂಬಕ್ಕೆ ಸೋನಿಯಾ ಪೋನ್

ಕೊಂಕಣ ರೈಲ್ವೇ, ಹೆದ್ದಾರಿ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಗೆ ಆಸ್ಕರ್ ‌ಕಾರಣಕರ್ತರು. ಒಂದು ಆದರ್ಶ ಮತ್ತು ವಿಶ್ವಾಸಾರ್ಹ ರಾಜಕಾರಣಿಗಳಲ್ಲಿ ಆಸ್ಕರ್ ಒಬ್ಬರು. ಬಹಳ ಸಾತ್ವಿಕ ‌ಮತ್ತು ಸಜ್ಜನರಾಗಿರೋ ಅವರ ಬಗ್ಗೆ ವ್ಯಕ್ತಿಗತ ಗೌರವವಿದೆ ಎಂದು ಪೂಜಾರಿ ತಿಳಿಸಿದ್ದಾರೆ.

ಅವರು ಅನಾರೋಗ್ಯಕ್ಕೆ ತುತ್ತಾಗಿರೋದು ಬಹಳ ನೋವು ತಂದಿದೆ. ಅವರು ಬಹುಬೇಗನೇ ಗುಣಮುಖರಾಗಿ ಬರಲಿ, ಮತ್ತೆ ನಮ್ಮ ಜೊತೆ ಹೆಜ್ಜೆ ಇಡಲಿ ಎಂದು  ಹಾರೈಸಿದ್ದಾರೆ. 

 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ