ಕೊರೋನಾ ಕಾಣದ  ಶಿವಮೊಗ್ಗ ಇದ್ದಕ್ಕಿದ್ದಂತೆ ಸೀಲ್‌ಡೌನ್!

By Suvarna News  |  First Published May 7, 2020, 9:21 PM IST

ಸುರಕ್ಷಿತವಾಗಿದ್ದ ಶಿವಮೊಗ್ಗಕ್ಕೆ ಕೊರೋನಾ ಬಂತಾ? ಇದ್ದಕ್ಕಿದ್ದಂತೆ ಸೀಳ್ ಡೌನ್?/ಪೊಲೀಸರ ಅಣಕು ಪ್ರದರ್ಶನ ತಂದ ಗಾಬರಿ/ ಕಿಡಿಗೇಡಿಗಳಿಂದ ಹರಡಿದ ಗಾಳಿ ಸುದ್ದಿ


ಶಿವಮೊಗ್ಗ(ಮೇ 07)  ಶಿವಮೊಗ್ಗ ನಗರದಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿತೆ? ಇಲ್ಲಿಯವರೆಗೆ ಸೋಂಕು ಕಾಣಿಸಿಕೊಳ್ಳದ ಜಿಲ್ಲೆಯಲ್ಲಿ ಇದು ಏನಾಯ್ತು? ಎಂಬ ಆತಂಕಕ್ಕೆ ಗುರುವಾರ ಸಂಜೆಯ ಕೆಲ ಬೆಳವಣಿಗೆಗಳು ಕಾರಣವಾಗಿದ್ದವು.

ಸಿಗೇಹಟ್ಟಿ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಸೀಲ್‌ಡೌನ್‌ ಮಾಡಲಾಗಿದೆ ಎಂಬ ಸುದ್ದಿಯೂ ಜೋರಾಗಿ ಹರಿದಾಡಿತ್ತು. ಆದರೆ ಅಸಲಿ ಕತೆ ಬೇರೆ ಇದೆ. ಇದಕ್ಕೆಲ್ಲ ಕಾರಣವಾಗಿದ್ದು, ಶಿವಮೊಗ್ಗ ಪೊಲೀಸ್‌ ಇಲಾಖೆ ನಡೆಸಿದ ಅಣಕು ಸೀಲ್‌ಡೌನ್‌ ಪ್ರದರ್ಶನ. ಗುರುವಾರ ಸಂಜೆ ಪೊಲೀಸ್‌ ಇಲಾಖೆಯು ಸೀಗೆಹಟ್ಟಿ ಸುತ್ತಲಿನ ಪ್ರದೇಶದಲ್ಲಿ ನಡೆಸಿದ ಅಣಕು ಸೀಲ್‌ಡೌನ್‌  ಮಾಡಿದ್ದು ಜನರಿಗೆ ಗೊತ್ತಿಲ್ಲದೇ ಆತಂಕ  ಎದುರಾಗಿತ್ತು. 

Tap to resize

Latest Videos

ಮದ್ಯ ಪ್ರಿಯರಿಂದ  ಸಿಕ್ಕ ನಾಲ್ಕನೇ ದಿನದ ಕಲೆಕ್ಷನ್

ಶಿವಮೊಗ್ಗ ಪ್ರಾಯೋಗಿಕವಾಗಿ ಸೀಲ್‌ಡೌನ್‌ ಅಣಕು ಪ್ರದರ್ಶನ ನಡೆಸಿದ್ದೇವೆ. ಎಷ್ಟು ಸಮಯದಲ್ಲಿ ಸೀಲ್‌ಡೌನ್‌ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಅಣಕು ಪ್ರದರ್ಶನ ನಡೆಸಲಾಗಿದೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲಿನಿಂದಲೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಕೊರೋನಾ ವರದಿಯಾಗಿಲ್ಲ.

click me!