ಮದ್ಯ ಮಾರಾಟದಿಂದ ತುಂಬಿತ್ತಿರುವ ಸರ್ಕಾರದ ಬೊಕ್ಕಸ/ ನಾಲ್ಕನೇ ದಿನ 165 ಕೋಟಿ ರೂ. ವಹಿವಾಟು/ ಮೊದಲನೇ ದಿನಕ್ಕೆ ಹೋಲಿಸಿದರೆ ಮೂರುವರೆ ಪಟ್ಟು ಹೆಚ್ಚಳ
ಬೆಂಗಳೂರು(ಮೇ 07) ಬರೋಬ್ಬರಿ 42 ದಿನಗಳ ನಂತರ ಮದ್ಯ ಮಾರಾಟ ಆರಂಭವಾದಾಗ ಮೊದಲ ದಿನ 45 ಕೋಟಿ ರೂ. ವಹಿವಾಟು ರಾಜ್ಯದಲ್ಲಿ ಆಗಿತ್ತು ಎಂಬುದೇ ದೊಡ್ಡ ಸುದ್ದಿಯಾಗಿತ್ತು. ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಸರ್ಕಾರ ಒಂದಷ್ಟು ಆದಾಯವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.
ಲಾಕ್ ಡೌನ್ ನಡುವಿನ ಮದ್ಯ ಮಾರಾಟದ ನಾಲ್ಕನೇ ದಿನದ ಲೆಕ್ಕವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 4 ನೇ ದಿನ ಸುಮಾರು 165 ಕೋಟಿ ರೂ. ವಹಿವಾಟು ಆಗಿದೆ. ಮೊದಲ ದಿನಕ್ಕೆ ಹೋಲಿಕೆ ದಿನಕ್ಕೆ ಹೋಲಿಕೆ ಮಾಡಿದರೆ ಮೂರು ವರೆ ಪಟ್ಟು ಹೆಚ್ಚು.
ಎಣ್ಣೆ ಅಮಲಿನಲ್ಲಿ ಪುಟ್ಟ ಮಗುವಿನೊಂದಿಗೆ ರಸ್ತೆಯಲ್ಲಿ ರಾತ್ರಿ ಕಳೆದ ಮಹಾನುಭಾವ
ಭಾರತೀಯ ಮದ್ಯ ಮಾರಾಟ 152 ಕೋಟಿ ರೂ. ವ್ಯವಹಾರ ಮಾಡಿದ್ದರೆ, ಬೀಯರ್ 13 ಕೋಟಿ ರೂ. ವ್ಯವಹಾರ ಮಾಡಿದೆ. ಮದ್ಯ ಪ್ರಿಯರಿಕಗೆ ಕೋವಿಡ್ ಶಾಕ್ ನೀಡಿದ್ದ ಸರ್ಕಾರ ಶುಲ್ಕವನ್ನು ಶೇ. 11ಕ್ಕೆ ಏರಿಕೆ ಮಾಡಿತ್ತು.
ಮೊದಲದಿನ ರಾಜ್ಯದಲ್ಲಿ ಮದ್ಯ ಖರೀದಿಗೆ ಪುರುಷರು-ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದು ದೊಡ್ಡ ಸುದ್ದಿಯಾಗಿತ್ತು. ಸಾಮಾಝಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟ ಮಾಡಬೇಕು ಎಂದು ಸರ್ಕಾರ ತಿಳಿಸಿದ್ದು ನಿಯಮಗಳ ಪರಿಪಾಲನೆ ಆಗುತ್ತಿದೆ.