ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎದುರುದಾರನಿಗೆ ಗ್ರಾಹಕರ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಸೆ.13): ಹೊಸಪೇಟಿಯ ಎಂ.ಜಿ.ನಗರ ನಿವಾಸಿ ಧೀರೆಂದ್ರ ಉಪಾಧ್ಯಾಯ ಎಂಬುವವರು ಎದುರುದಾರರ ಜೊತೆ 03.09.2010ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ನ ಎಫ್ ಬ್ಲಾಕ್ 2ನೇ ಮಹಡಿಯಲ್ಲಿನ ಫ್ಲ್ಯಾಟ್ ನಂ. 202 ನ್ನು ರೂ.18,00,000 ರೂಪಾಯಿಗಳಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು.
undefined
ಆ ಪೈಕಿ ದೂರುದಾರ ರೂ.15,06,420/-ಗಳನ್ನು ಮುಂಗಡವಾಗಿ ಎದುರುದಾರರಿಗೆ ಸಂದಾಯ ಮಾಡಿದ್ದರು. ಸದರಿ ಒಪ್ಪಂದ ಪ್ರಕಾರ ಎದುರುದಾರರು 24 ತಿಂಗಳಲ್ಲಿ ಅಪಾರ್ಟ್‌ಮೆಂಟ್ ಕಾಮಗಾರಿ ಪೂರ್ತಿಗೊಳಿಸಿ ದೂರುದಾರನಿಗೆ ಫ್ಲ್ಯಾಟಿನ ಸ್ವಾದೀನತೆ ಕೊಡುವುದರ ಜೊತೆಗೆ ಖರೀದಿ ಪತ್ರವನ್ನು ನೋಂದಣಿಮಾಡಿ ಕೊಡಬೇಕಾಗಿತ್ತು. ಆದರೆ ಎದುರುದಾರರು ಒಪ್ಪಂದದ ಪ್ರಕಾರ ನಡೆದುಕೊಳ್ಳದೇ ತನಗೆ ಮೋಸ ಮಾಡಿ ಸೇವಾನ್ಯೂನತೆ ಎಸಗಿದ್ದಾರೆ ಅಂತ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ 10.04.2023 ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಮುಖ್ಯಮಂತ್ರಿ ಹುದ್ದೆಗೆ ದೀನ-ದಲಿತರಿಗೂ ಅವಕಾಶ ಸಿಗಲಿದೆ: ಸತೀಶ್ ಜಾರಕಿಹೊಳಿ
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದೂರುದಾರನಿಂದ ರೂ.15,06,420 ಹಣ ಪಡೆದುಕೊಂಡು ಎದುರುದಾರರು ಫ್ಲ್ಯಾಟಿನ ಸ್ವಾಧೀನತೆ ಕೊಟ್ಟಿರಲಿಲ್ಲ ಮತ್ತು ಖರೀದಿ ಪತ್ರ ನೋಂದಣಿ ಮಾಡಿಕೊಡುವಲ್ಲಿ ವಿಫಲರಾಗಿದ್ದರು.
ಎದುರುದಾರರ ಈ ತರಹದ ವರ್ತನೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಎದುರುದಾರರು ದೂರುದಾರರಿಗೆ ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅಪಾರ್ಟ್‍ಮೆಂಟಿನ ಫ್ಲ್ಯಾಟ ನಂ:104 ಉಭಯಪಕ್ಷಗಾರರು ಮಾತನಾಡಿಕೊಂಡು ಫ್ಲ್ಯಾಟ್ ನಂ.202ರ ಬದಲು ಫ್ಲ್ಯಾಟ್ ನಂ:104ನ್ನು ಕೊಡಲು ಒಪ್ಪಿರುತ್ತಾರೆ) ಖರೀದಿ ಪತ್ರವನ್ನು ನೋಂದಣಿ ಮಾಡಿಕೊಡಲು ಆಯೋಗ ನಿರ್ದೇಶಿಸಿರುತ್ತದೆ. ತಪ್ಪಿದ್ದಲ್ಲಿ ದೂರುದಾರರು ಆಯೋಗದ ಮುಖಾಂತರ ತಮ್ಮ ಸ್ವಂತ ಖರ್ಚಿನಲ್ಲಿ ಆಯುಕ್ತರನ್ನು ನೇಮಿಸಿಕೊಂಡು ಖರೀದಿ ಪತ್ರವನ್ನು ನೋಂದಣಿ ಮಾಡಿಸಿಕೊಳ್ಳಲು ಅರ್ಹರಿದ್ದಾರೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.