ಕರಾವಳಿಯಲ್ಲಿ ಇಂದು ಕೂಡ ಆರೆಂಜ್‌ ಅಲರ್ಟ್‌

By Kannadaprabha NewsFirst Published Jul 15, 2023, 12:00 AM IST
Highlights

ಶುಕ್ರವಾರ ಆರೆಂಜ್‌ ಅಲರ್ಟ್‌ ಇದ್ದರೂ ಭಾರಿ ಮಳೆ ಬಂದಿಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇಂದೂ ಕೂಡ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಮಂಗಳೂರು(ಜು.15): ಕರಾವಳಿಯಲ್ಲಿ ಶುಕ್ರವಾರ ಜಿಟಿಜಿಟಿ ಮಳೆಯಾಗಿದೆ. ದ.ಕ.ಜಿಲ್ಲೆಯಲ್ಲಿ ದಿನಪೂರ್ತಿ ಬಿಟ್ಟುಬಿಟ್ಟು ಮಳೆಯಾಗಿದೆ. ಮಂಗಳೂರಲ್ಲೂ ಇಡೀ ದಿನ ತುಂತುರು ಮಳೆಯಾಗಿದೆ. ಆರೆಂಜ್‌ ಅಲರ್ಟ್‌ ಇದ್ದರೂ ಭಾರಿ ಮಳೆ ಬಂದಿಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇಂದೂ ಕೂಡ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಶುಕ್ರವಾರ ಬೆಳಗ್ಗೆ ತುಸು ಮೋಡ ಇದ್ದರೂ ಬಳಿಕ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ. ಇದು ಆಗಾಗ ಮುಂದುವರಿದಿದ್ದು, ಸಂಜೆ ವೇಳೆಗೆ ಮಂಗಳೂರಲ್ಲಿ ಮಳೆ ತುಸು ಬಿಡುವು ಕೊಟ್ಟಿದೆ.

ಬಳ್ಳಾರಿ: ಅಂತೂ ಮಳೆ ಬಂತು, ನಿಟ್ಟುಸಿರು ಬಿಟ್ಟ ಅನ್ನದಾತ...!

ಬಂಟ್ವಾಳ ಗರಿಷ್ಠ ಮಳೆ:

ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬಂಟ್ವಾಳದಲ್ಲಿ ಗರಿಷ್ಠ 29.3 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಬೆಳ್ತಂಗಡಿ 13 ಮಿ.ಮೀ, ಮಂಗಳೂರು 28.9 ಮಿ.ಮೀ, ಪುತ್ತೂರು 25.2 ಮಿ.ಮೀ, ಸುಳ್ಯ 28 ಮಿ.ಮೀ, ಮೂಡುಬಿದಿರೆ 21.4 ಮಿ.ಮೀ, ಕಡಬ 15.8 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 21.5 ಮಿ.ಮೀ. ಆಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 2 ಮೀಟರ್‌, ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 24.1 ಮೀಟರ್‌ನಲ್ಲಿ ಹರಿಯುತ್ತಿದೆ.

click me!