ನಾನು ಅಭಿವೃದ್ದಿ ವಿಚಾರದಲ್ಲಿ ಪಕ್ಕಾ ಇರೋದು ನಿಜ| 1200 ಕೋಟಿ ಹಣ ನನ್ನ ಕ್ಷೇತ್ರಕ್ಕೆ ಹಣ ತಂದಿದ್ದೀನಿ ಎಂದ ಹೆಬ್ಬಾಳಕರ್| ಅಥಣಿ ಜನರಿಗೆ ಕುಮಟಳ್ಳಿ ಮೋಸ ಮಾಡಿದ್ದಾರೆ| ಅಥಣಿ ಜನರನ್ನ ಕುಮಟಳ್ಳಿ ನೀರಿನಲ್ಲಿ ಮುಳುಗಿಸಿದ್ದಾರೆ| ಪ್ರವಾಹದಲ್ಲಿ ಜನ ಸತ್ತಾಗ ಕುಮಟಳ್ಳಿ ಬರಲಿಲ್ಲ| ಈಗ ಮತ ಕೇಳೋಕೆ ಬರುತ್ತಿದ್ದಾರೆ| ಕುಮಟಳ್ಳಿ ನಿಮಗೆ ಮಾಡಿದ ಅನ್ಯಾಯಕ್ಕೆ ಪ್ರತಿಯಾಗಿ ನಿಮ್ಮ ದ್ವೇಷವನ್ನ ತೀರಿಸಿಕೊಳ್ಳಿ ಎಂದ ಹೆಬ್ಬಾಳಕರ್|
ಅಥಣಿ(ನ.25): ಅನರ್ಹ ಶಾಸಕ ಮಹೇಶ ಕುಮಟಳ್ಳಿ ಅಥಣಿ ಜನರಿಗೆ ಮೋಸ ಮಾಡಿದ್ದಾರೆ. ಅಥಣಿ ಜನರನ್ನ ಕುಮಟಳ್ಳಿ ನೀರಿನಲ್ಲಿ ಮುಳುಗಿಸಿದ್ದಾರೆ. ಪ್ರವಾಹದಲ್ಲಿ ಜನ ಸತ್ತಾಗ ಕುಮಟಳ್ಳಿ ಬರಲಿಲ್ಲ, ಈಗ ಮತ ಕೇಳೋಕೆ ಬರುತ್ತಿದ್ದಾರೆ. ಕುಮಟಳ್ಳಿ ನಿಮಗೆ ಮಾಡಿದ ಅನ್ಯಾಯಕ್ಕೆ ಪ್ರತಿಯಾಗಿ ನಿಮ್ಮ ದ್ವೇಷವನ್ನ ತೀರಿಸಿಕೊಳ್ಳಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮತದಾರರಿಗೆ ಕರೆ ನೀಡಿದ್ದಾರೆ.
ಬೈ ಎಲೆಕ್ಷನ್ ಬಿಸಿ ನಡುವೆ ಮಹಾಲಕ್ಷ್ಮೀಗೆ ಭಾರೀ ಮೊತ್ತದ ಚಿನ್ನದ ಹಾರ, ಕಾರಣ?
undefined
ಸೋಮವಾರ ಕ್ಷೇತ್ರದ ಇಂಗಳಗಾಂವ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಿಶುನಾಳ ಶರೀಫರ ತತ್ವ ಪದ ಹಾಡಿ ಪ್ರಚಾರ ನಡೆಸಿದ ಹೆಬ್ಬಾಳಕರ್ ಕೋಡಗನ ಕೋಳಿ ನುಂಗಿತ್ತು ಹಾಡು ಹೇಳುವ ಮೂಲಕ ಪ್ರಚಾರ ಮಾಡಿದ್ದಾರೆ. ನನಗೆ ಬಹಳ ತೊಂದರೆ ಇದೆ, ನಾನು ಕಷ್ಟದಲ್ಲಿ ಇದ್ದೀನಿ ಆದ್ರೂ ಅಥಣಿಗೆ ಬಂದು ಪ್ರಚಾರ ತೊಡಗಿದ್ದೀನಿ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಲಕ್ಷ್ಮೀ ಹೆಬ್ಬಾಳಕರ್ ಪಕ್ಕಾ ಎಂದು ಹೇಳಿದ ಕುಮಟಳ್ಳಿ ವಿಚಾರದ ಬಗ್ಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು, ನಾನು ಅಭಿವೃದ್ದಿ ವಿಚಾರದಲ್ಲಿ ಪಕ್ಕಾ ಇರೋದು ನಿಜ. 1200 ಕೋಟಿ ಹಣ ನನ್ನ ಕ್ಷೇತ್ರಕ್ಕೆ ಹಣ ತಂದಿದ್ದೀನಿ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: