
ಹೊನ್ನಾವರ (ಫೆ.25): ಉತ್ತರ ಕನ್ನಡದ ಹೊನ್ನಾವರದ ಕಾಸರಕೋಡ ಬಳಿಯ ಟೊಂಕದಲ್ಲಿ ವಾಣಿಜ್ಯ ಬಂದರು ವಿರೋಧಿಸಿ ಪ್ರತಿಭಟನೆ ತೀವ್ರವಾಗಿದೆ. ಪ್ರತಿಭಟನೆಯ ವೇಳೆ ಸಮುದ್ರಕ್ಕೆ ಹಾರಿ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಮುದ್ರಕ್ಕೆ ಹಾರಿದ್ದ ಕೆಲ ಮಹಿಳೆಯರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಸರ್ವೇ ಖಂಡಿಸಿ ಪ್ರತಿಭಟನಾ ನಿರತ ಮಹಿಳೆಯರು ಅರಬ್ಬಿ ಸಮುದ್ರಕ್ಕೆ ಹಾರಿದ್ದು, ತಕ್ಷಣವೇ ಪೊಲೀಸ್ ಅಧಿಕಾರಿಗಳು ಅವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಬಳಿಕ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಪ್ರತಿಭಟನಾ ನಿರತ ಯುವಕರನ್ನು ಪೊಲೀಸರು ಎಳೆದೊಯ್ದಿದ್ದಾರೆ. ಯುವಕನನ್ನು ಹತ್ತಕ್ಕೂ ಹೆಚ್ಚು ಪೊಲೀಸರು ಎಳೆದೊಯ್ದಿದ್ದಾರೆ. ಜನರ ಪ್ರತಿಭಟನೆ ನಿಲ್ಲಿಸಲು ನೂರಾರು ಪೊಲೀಸರಿಂದ ಹರಸಾಹಸ ನಡೆದಿದೆ. ಟೊಂಕಾದಲ್ಲಿ ಬಂದರು ಬೇಡವೇ ಬೇಡ ಎಂದು ಸ್ಥಳಿಯರು ಪಟ್ಟು ಹಿಡಿದಿದ್ದಾರೆ.
ಆತ್ಮಹತ್ಯೆ ಘಟನೆ ಬಳಿಕ ಪೋಲಿಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರಿಗೂ ಭಾರೀ ಗಲಾಟೆ, ಹಲ್ಲೆಗೆ ಯತ್ನ ಕೂಡ ನಡೆದಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಓರ್ವ ವ್ಯಕ್ತಿಯನ್ನು ಪೊಲೀಸರು ಹಿಡಿದು ಥಳಿಸಿದ್ದಾರೆ. ಸರ್ವೆಗೆ ಬಂದ ಅಧಿಕಾರಿಗಳ ಮೇಲೂ ಮೀನುಗಾರರು ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿ ಬಿಗು ವಾತಾವರಣ, ಹಲ್ಲೆಗೆ ಯತ್ನಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಲಾಠಿ ಹಿಡಿದುಕೊಂಡು ಪೊಲೀಸರು ಓಡಾಟ ಪ್ರಾರಂಭಿಸಿದ್ದಾರೆ.
ಅಂಕೋಲಾದ ಕೇಣಿಯ ಬಳಿಕ ಹೊನ್ನಾವರದಲ್ಲೂ ವಿರೋಧ ವ್ಯಕ್ತವಾಗಿದೆ. ಹೊನ್ನಾವರ ಕಾಸರಕೋಡಿನಲ್ಲಿ ಬಂದರು ನಿರ್ಮಾಣ ಸಮೀಕ್ಷೆಗೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕಾಸರಕೋಡಿನಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಹೊಸ ಬಂದರು ನಿರ್ಮಾಣಕ್ಕೆ ಯೋಜನೆ ರೂಪಿಸಲಾಇದೆ. ಬಂದರು ರಸ್ತೆ ನಿರ್ಮಾಣ ಸಂಬಂಧ ಇಂದು ಸಮೀಕ್ಷೆ ನಡೆಸಲು ಅಧಿಕಾರಿಗಳು ಬಂದಿದ್ದರು. ಈ ಕಾರಣಕ್ಕಾಗಿ ಉತ್ತರಕನ್ನಡ ಜಿಲ್ಲಾಡಳಿತದಿಂದ ಸುತ್ತಮುತ್ತಲು ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
Bhatkal: ಕಳ್ಳತನ ಮಾಡಿದ ದನದ ಮಾಂಸವನ್ನು ಇಸ್ಲಾಂನಲ್ಲಿ ಸೇವಿಸೋದಿಲ್ಲ: ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ
ಹಾಗಿದ್ದರೂ ಸ್ಥಳದಲ್ಲಿ ಸಾವಿರಾರು ಜನರಿಂದ ಭಾರೀ ಪ್ರತಿಭಟನೆ ನಡೆದಿದೆ. ಶಾಲಾ ಮಕ್ಕಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬಂದರು ನಿರ್ಮಾಣ ಬೇಡ ಎಂದು ಸ್ಥಳೀಯರಿಂದ ಪ್ರತಿಭಟನೆ ನಡೆದಿದೆ. ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಕೈಮೀರದಂತೆ ಎಚ್ಚರ ವಹಿಸಿದ್ದಾರೆ.ಒಂದೆಡೆ ಜನರಿಂದ ಭಾರೀ ಗಲಾಟೆ ಆಗುತ್ತಿದ್ದರೂ, ಮತ್ತೊಂದೆಡೆ ಸರ್ವೆ ಕಾರ್ಯ ಮುಂದುವರಿದಿದೆ. ಪೊಲೀಸರ ಭದ್ರತೆಯೊಂದಿಗೆ ಸರ್ವೇ ಕಾರ್ಯ ನಡೆಸಲಾಗುತ್ತಿದೆ.
ಗರ್ಭ ಧರಿಸಿದ್ದ ದನದ ತಲೆ, ಕಾಲು ಕಡಿದ ಪ್ರಕರಣ; ಆರೋಪಿ ಫೈಜಿಲ್ ಕಾಲಿಗೆ ಪೊಲೀಸ್ ಗುಂಡೇಟು!