ಶಿವರಾತ್ರಿ ಹಬ್ಬಕ್ಕೆ ಲಕ್ಷಾಂತರ ಭಕ್ತರ ಪಾದಯಾತ್ರೆ: ಚಾರ್ಮಾಡಿ ಘಾಟ್ ರಸ್ತೆ ಮೂಲಕ ಧರ್ಮಸ್ಥಳಕ್ಕೆ!

Published : Feb 24, 2025, 08:45 PM ISTUpdated : Feb 24, 2025, 08:47 PM IST
ಶಿವರಾತ್ರಿ ಹಬ್ಬಕ್ಕೆ ಲಕ್ಷಾಂತರ ಭಕ್ತರ ಪಾದಯಾತ್ರೆ: ಚಾರ್ಮಾಡಿ ಘಾಟ್ ರಸ್ತೆ ಮೂಲಕ ಧರ್ಮಸ್ಥಳಕ್ಕೆ!

ಸಾರಾಂಶ

ಶಿವರಾತ್ರಿ ಹಬ್ಬಕ್ಕೆ ಇನ್ನು ಎರಡು ದಿನಗಳು ಬಾಕಿ ಇರುವಂತೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕಿಸುವ ರಸ್ತೆಯಾದ ಕೊಟ್ಟಿಗೆಹಾರದ ಮೂಲಕ ಜನರು ಸಾಗರದಂತೆ ಹೋಗುತ್ತಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.24): ಶಿವರಾತ್ರಿ ಹಬ್ಬಕ್ಕೆ ಇನ್ನು ಎರಡು ದಿನಗಳು ಬಾಕಿ ಇರುವಂತೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕಿಸುವ ರಸ್ತೆಯಾದ ಕೊಟ್ಟಿಗೆಹಾರದ ಮೂಲಕ ಜನರು ಸಾಗರದಂತೆ ಹೋಗುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಶ್ರೀ ಕ್ಷೇತ್ರದಕ್ಕೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದು ಕೊಟ್ಟಿಗೆಹಾರದಲ್ಲಿ ಕೆಲ ಭಕ್ತರು ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ.ನೂರಾರು ಕೀಲೋಮೀಟರ್ ಗಟ್ಟಲೆ ಭಕ್ತರ ನಡೆಗೆ ಮೂಲಕ ತೆರಳಿ ದೇವರ ದರ್ಶನ ಪಡೆಯುಲಿದ್ದಾರೆ. 

ಉರಿ ಬಿಸಿಲಿನಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ: ಕೆಲವರು ಹರಿಕೆಹೊತ್ತ ಭಕ್ತರು ಪಾದಯಾತ್ರೆಯ ಹೋಗುತ್ತಿದ್ದು ವಯಸ್ಸಿನ ಮಿತಿ ಇಲ್ಲದೇ ಭಕ್ತರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಯುವಜನರು , ವೃದ್ದರೂ ಕೂಡ ಪಾದಯಾತ್ರೆ ತೆರಳಿತ್ತಿರುವುದು ವಿಶೇಷವಾಗಿದೆ. ಹರಕೆ ತೀರಿಸಲು ಭಕ್ತರು ಕೇಶರಿ ವಸ್ತ್ರಧರಿಸಿ ಉರಿಬಿಸಿಲಿನಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಕೆಲವರು ಹರಿಕೆಹೊತ್ತ ಭಕ್ತರು ಪಾದಯಾತ್ರೆಯ ಹೋಗುತ್ತಿದ್ದು ವಯಸ್ಸಿನ ಮಿತಿ ಇಲ್ಲದೇ ಭಕ್ತರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಉರಿಬಿಸಿಲನ್ನು ಲೆಕ್ಕಿಸದೆ ಕೆಲವರು ಬರಿಗಾಲಿನಲ್ಲಿ ಮತ್ತೆ ಕೆಲವರು ಚಪ್ಪಲಿ ಧರಿಸಿ ನಡೆದುಕೊಂಡು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.ಆಯಾಸಗೊಂಡವರು ಬಸ್ ನಿಲ್ದಾಣ,ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಇಷ್ಟಾರ್ಥ ನೆರವೇರಿಸುವಂತೆ ಹರಕೆ ಹೊತ್ತವರು ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ಈಗಾಗಲೇ ಅನ್ನಸಂತರ್ಪಣೆ, ಆರೋಗ್ಯ ತಪಾಸಣೆಯನ್ನು ಹಮ್ಮಿಕೊಂಡಿದ್ದಾರೆ. 

ಕೊಟ್ಟಿಗೆಹಾರದಲ್ಲಿ ವಿಶ್ರಾಂತಿ: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಭಕ್ತರ ಸಂಖ್ಯೆ ಅಧಿಕಗೊಂಡಿದೆ. ಪಾದಯಾತ್ರೆಯಲ್ಲಿ ತೆರಳಿ ಮಂಜುನಾಥನ ದರ್ಶನ ಪಡೆದು ವಾಹನದಲ್ಲಿ ಹಿಂದಿರುಗಲಿದ್ದಾರೆ. ಟ್ರ್ಯಾಕ್ಟರ್ಗೆ ಟಾರ್ಪಲ್ಕಟ್ಟಿಕೊಂಡು ಬಟ್ಟೆ,  ಪೇಸ್ಟ್, ಬ್ರೆಸ್, ಸೋಪುಗಳನ್ನಿಟ್ಟುಕೊಂಡು ಖಾಲಿ ವಾಹನ ಹೋಗುತ್ತಿರುವುದು ಕಂಡು ಬಂತು. ಕೆಲವರು ಟೀಶರ್ಟ್ಗಳ ಮೇಲೆ  ಆ ವ್ಯಕ್ತಿಯ ಹೆಸರು, ಗ್ರಾಮ ಎಷ್ಟೆನೇ ವರ್ಷದ ಪಾದಯಾತ್ರೆ ಎಂಬುದನ್ನು ಬರೆಸಿಕೊಂಡು ಪಾದಯಾತ್ರೆ ತೆರಳುತ್ತಿದ್ದಾರೆ.ಮೂಡಿಗೆರೆಯ ಕಾಫಿಕ್ಯೂರಿಂಗ್ ಬಳಿ ಸೇವಾ ಸಮಿತಿ ವತಿಯಿಂದ ಉಳಿದುಕೊಳ್ಳಲು ಸ್ಥಳಾವಕಾಶ ನೀಡಿದೆ.ಉರಿಬಿಸಿಲಿನಿಂದ ಬಂದವರು ಇಲ್ಲಿ ವಿಶ್ರಾಂತಿ ಪಡೆದು ಬಳಿಕ ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ.ಕೊಟ್ಟಿಗೆಹಾರದಲ್ಲಿ ಶ್ರೀರಾಮಮಂದಿರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ. 3 ಜಾಗದಲ್ಲಿ ಪೆಂಡಾಲ್ನಿರ್ಮಿಸಲಾಗಿದೆ. ಮಲಗಲು ಜಾಗದ ಕೊರತೆ ಉಂಟಾದರೆ ಕೆಲವರು ಬಸ್ನಿಲ್ದಾಣದಲ್ಲು ತಂಗುತ್ತಿದ್ದಾರೆ. 

3 ವರ್ಷ ಹಿಂದಿನ ಚುನಾವಣೆಯ ಮರು ಮತ ಎಣಿಕೆ ಕಾರ್ಯ: ಉಪಸಭಾಪತಿ ಎಂ.ಕೆ ಪ್ರಾಣೇಶ್ ಶಾಸಕ ಸ್ಥಾನಕ್ಕೆ ಸಂಕಷ್ಟ?

ಜುಮ್ಮ ಮಸೀದಿಯಿಂದ  ಹಣ್ಣು, ಪಾನೀಯ, ಮಜ್ಜಿಗೆ: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳುಗುಳ ಸಮೀಪದ ನೂರುಲ್ ಹುದಾ ಜುಮ್ಮ ಮಸೀದಿಯ ಬಂಧುಗಳು ದೂರದೂರುಗಳಿಂದ ಧರ್ಮಸ್ಥಳಕ್ಕೆ ತೆರಳುತ್ತಿರುವ ಮಂಜುನಾಥನ ಭಕ್ತರಿಗೆ ಕಲ್ಲಂಗಡಿ ಹಣ್ಣು, ಪಾನೀಯ, ಮಜ್ಜಿಗೆಗಳನ್ನು ನೀಡಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದಾರೆ. ಇವರ ಕಾರ್ಯಕ್ಕೆ ಪಾದಯಾತ್ರೆಗೆ ತೆರಳುತ್ತಿರುವ ಭಕ್ತರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಕರು ಧರ್ಮಸ್ಥಳದಲ್ಲಿ ಶಿವರಾತ್ರಿಯಂದು ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಉಪವಾಸ ಹಾಗೂ ಜಾಗರಣೆಯೊಂದಿಗೆ ಶಿವರಾತ್ರಿಯನ್ನು ಆಚರಿಸಲಿದ್ದಾರೆ.

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!