Mysuru: ಭತ್ತದ ಖರೀದಿ ನಿಯಮ ಮಾರ್ಪಾಡಿಗೆ ವಿರೋಧ

By Kannadaprabha NewsFirst Published Dec 2, 2022, 5:53 AM IST
Highlights

 ಪ್ರಸಕ್ತ ಸಾಲಿನಲ್ಲಿ ಎಂಎಸ್‌ಪಿ ಯೋಜನೆಯಡಿ ಭತ್ತದ ಖರೀದಿ ನಿಯಮಗಳನ್ನು ಮಾರ್ಪಾಡು ಮಾಡಿರುವುದು ರೈತರನ್ನು ತೊಂದರೆಗೆ ಸಿಲುಕಿಸಿದೆ ಎಂದು ಆರೋಪಿಸಿ ಭಾರತೀಯ ರೈತರು ಮತ್ತು ಕೃಷಿ ಕಾರ್ಮಿಕರ ಜಾಗೃತಿ ಸಂಘ ಮತ್ತು ಕರ್ನಾಟಕ ರಾಜ್ಯ ಭತ್ತದ ಬೆಳೆಗಾರರ ಒಕ್ಕೂಟದವರು ಬುಧವಾರ ಪ್ರತಿಭಟಿಸಿದರು

 ಮೈಸೂರು (ಡಿ. 02) : ಪ್ರಸಕ್ತ ಸಾಲಿನಲ್ಲಿ ಎಂಎಸ್‌ಪಿ ಯೋಜನೆಯಡಿ ಭತ್ತದ ಖರೀದಿ ನಿಯಮಗಳನ್ನು ಮಾರ್ಪಾಡು ಮಾಡಿರುವುದು ರೈತರನ್ನು ತೊಂದರೆಗೆ ಸಿಲುಕಿಸಿದೆ ಎಂದು ಆರೋಪಿಸಿ ಭಾರತೀಯ ರೈತರು ಮತ್ತು ಕೃಷಿ ಕಾರ್ಮಿಕರ ಜಾಗೃತಿ ಸಂಘ ಮತ್ತು ಕರ್ನಾಟಕ ರಾಜ್ಯ ಭತ್ತದ ಬೆಳೆಗಾರರ ಒಕ್ಕೂಟದವರು ಬುಧವಾರ ಪ್ರತಿಭಟಿಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದಿಂದ (Temple) ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಅವರು, (Farmers)  ತಮ್ಮ ಜಮೀನಿನಲ್ಲಿ ಬೆಳೆದಿರುವ ಭತ್ತವನ್ನು ಕಟಾವು ಮಾಡಿದ ನಂತರ ಸಂಬಂಧಪಟ್ಟಖರೀದಿ ಅಧಿಕಾರಿಗಳು ದಿನಾಂಕ ಗೊತ್ತುಪಡಿಸುವ ತನಕ ರೈತರು ದಾಸ್ತಾನನ್ನು ಒಂದು ಕಡೆ ಶೇಖರಣೆ ಮಾಡಿಕೊಂಡು ಕಾಯುತ್ತಿರಬೇಕು. ಮೊದಲೇ ಹಣಕಾಸಿನ ಮುಗ್ಗಟ್ಟಿನಲ್ಲಿರುವ ರೈತರು ಚೀಲ ಮತ್ತು ಟ್ರ್ಯಾಕ್ಟರ್‌ ಅಥವಾ ಆಟೋ ಬಾಡಿಗೆ ಕಟ್ಟಲಾರದೆ ಸ್ಥಳೀಯವಾಗಿ ನಡೆಯುವ ದರಕ್ಕೆ ತಮ್ಮ ಭತ್ತವನ್ನು ಮಾರಾಟ ಮಾಡಿ ಬೆಂಬಲ ಬೆಲೆಯ ಯೋಜನೆಯಿಂದ ವಂಚಿತರಾಗಿ ನಷ್ಟಅನುಭವಿಸುವಂತಾಗಿದೆ ಎಂದು ಅವರು ಕಿಡಿಕಾರಿದರು.

2018- 19 ಮುಂಚೆ ಸರ್ಕಾರದ ಅಧಿಕಾರಿಗಳೇ ಖರೀದಿ ಮಾಡಿದ ಭತ್ತದ ಗುಣಮಟ್ಟವು ಹಾಳಾಗಿ ಸಾಕಷ್ಟುಪ್ರಮಾಣದಲ್ಲಿ ನಷ್ಟಅನುಭವಿಸಿತ್ತು. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸಾಕಷ್ಟುಹಗರಣಗಳು ನಡೆದು ಕೋಟ್ಯಂತರ ರೂಪಾಯಿ ದುರುಪಯೋಗವಾಗಿದೆ ಎಂದು ಅವರು ದೂರಿದರು.

ಹಳೆಯ ವ್ಯವಸ್ಥೆಯನ್ನು ಮುಂದುವರೆಸಿ ಪ್ರತಿಯೊಬ್ಬ ರೈತರಿಂದ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್‌ ಭತ್ತವನ್ನು ಖರೀದಿ ಮಾಡಬೇಕು. ಜೊತೆಗೆ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ನಿಗದಿಪಡಿಸಿರುವ ದರವನ್ನು ಇತರೆ ಜಿಲ್ಲೆಗೂ ನೀಡಬೇಕು. ಇಲ್ಲವಾದರೆ ಸರ್ಕಾರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಭತ್ತ ಬೆಳೆಗಾರರ ಒಕ್ಕೂಟದ ಸಂಚಾಲಕ ಎಂ.ಎನ್‌. ವೆಂಕಟೇಶ್‌, ಮುಖಂಡರಾದ ಮೆಲ್ಲಹಳ್ಳಿ ಮಹದೇವಸ್ವಾಮಿ, ರಾಮಣ್ಣ, ಪ್ರಕಾಶ್‌, ನಾಗೇಂದ್ರ, ರವಿ, ಪ್ರಕಾಶ್‌, ಲಕ್ಷ್ಮೀನಾರಾಯಣ, ಸತೀಶ್‌, ಶೇಖರ್‌, ಪ್ರಸನ್ನಕುಮಾರ್‌, ಯೋಗೇಶ್‌ ಮೊದಲಾದವರು ಇದ್ದರು.

ಸಣ್ಣಕ್ಕಿಗೂ 500 ರು. ಪೋ›ತ್ಸಾಹಧನ ನೀಡಲು ಒತ್ತಾಯ

ಸಿಂಧನೂರು: ಕುಚಲಕ್ಕಿಯಂತೆ ರಾಜ್ಯದ ಎಲ್ಲ ಪ್ರದೇಶಗಳಿಗೂ ಅನ್ವಯವಾಗುವಂತೆ ಸಣ್ಣಕ್ಕಿಗೂ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರೂ.500 ಪೋ›ತ್ಸಾಹಧನ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದು ರೈತ ಮುಖಂಡ ಮಲ್ಲೇಶಗೌಡ ಬಸಾಪೂರ ಕೆ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 2022-23ನೇ ಸಾಲಿನ ಮುಂಗಾರು ಋುತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂಒ4 ತಳಿಗಳ ಭತ್ತವನ್ನು ಖರೀದಿಸಲು ಹಾಗೂ ಖರೀದಿಸಲಾದ ಭತ್ತವನ್ನು ಕುಚಲಕ್ಕಿಯನ್ನಾಗಿ ಪರಿವರ್ತಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಈ ಮೂರು ಜಿಲ್ಲೆಗಳ ಪಡಿತರ ಫಲಾನುಭವಿಗಳಿಗೆ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪ್ರತಿ ಕ್ವಿಂಟಲ್‌ ಭತ್ತಕ್ಕೆ ರು. 2040 ಕೇಂದ್ರ ಸರ್ಕಾರ ಕೊಡುತ್ತಿದೆ. ಕುಚಲಕ್ಕಿ ಭತ್ತಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ರು. 500 ಪೋ›ತ್ಸಾಹಧನ ಸೇರಿಸಿ ರು. 2540 ಬೆಂಬಲ ಬೆಲೆಗೆ ಖರೀದಿಸಲಿದೆ ಎಂದು ವಿವರಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖ ಪಾಟೀಲ್‌ ಮಾತನಾಡಿ, ರೈತಪರ ಹೋರಾಟಗಳಿಗೆ ಪಕ್ಷಾತೀತವಾಗಿ ಬೆಂಬಲಿಸಬೇಕು. ಈ ಭಾಗದ ಭತ್ತಕ್ಕೂ ಪೋ›ತ್ಸಾಹಧನ ನೀಡುವ ಕುರಿತುಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ನಿಯೋಗ ತೆರಳಿ ಚರ್ಚಿಸಿ ಗಮನ ಸೆಳೆಯಲಾಗುವುದು ಎಂದರು.

ರೈತಪರ ಮುಖಂಡರಾದ ಡಿ.ಎಸ್‌.ಕಲ್ಮಠ, ರುದ್ರಗೌಡ ಪಗಡದಿನ್ನಿ, ಶರಣಯ್ಯಸ್ವಾಮಿ ರಾರ‍ಯವಿಹಾಳ, ಬಸೀರ್‌ ಎತ್ಮಾರಿ, ಶರಣಪ್ಪ ಹೂಗಾರ, ಹನುಮನಗೌಡ ಮಲ್ಲಾಪುರ ಇದ್ದರು.

click me!